Advertisement

ಪೆಟ್ರೋಲ್‌ ಟ್ಯಾಂಕರ್‌ ಪಲ್ಟಿ; ರಸ್ತೆಗೆ ಚೆಲ್ಲಿತು 12 ಸಾವಿರ ಲೀಟರ್ ಪೆಟ್ರೋಲ್‌

05:54 PM Nov 28, 2019 | Team Udayavani |

ಕೋಝಿಕೋಡ್‌ : ಪೆಟ್ರೋಲ್‌ ತುಂಬಿದ್ದ ಟ್ಯಾಂಕರ್‌ಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿರುವ ಘಟನೆ ಕೋಝಿಕೋಡ್‌ ವಟಕರದಲ್ಲಿ ನಡೆದಿದೆ.

Advertisement

ಮುಂಜಾನೆ 5.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ತಿರುವಿನಲ್ಲಿ ನಿಯಂತ್ರಣ ಸಿಗದೇ ಅವಘಡ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದು, ಟ್ಯಾಂಕರ್‌ನ ಮೂರು ಕಂಪಾರ್ಟ್‌ಮೆಂಟ್‌ ಗಳಲ್ಲಿದ್ದ ಸುಮಾರು 12 ಸಾವಿರ ಇಂಧನ ಸಂಪೂರ್ಣ ರಸ್ತೆಯ ಪಾಲಾಗಿದೆ ಎಂದಿದ್ದಾರೆ.

ಇನ್ನೂ ಘಟನೆಯಲ್ಲಿ ಲಾರಿಯ ಚಾಲಕ ಗಾಯಗೊಂಡಿದ್ದು, ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂಧನ ತೆರವುಗೊಳಿಸುವ ಸಲುವಾಗಿ ರಸ್ತೆ ಮುಚ್ಚಲಾಗಿದ್ದು, ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next