Advertisement

ಕೆರೆಕಟ್ಟೆ: ನೀರು ಕುಡಿಯಲು ಬಂದು ಕೆರೆಗೆ ಬಿದ್ದ ಕಾಡುಕೋಣ ರಕ್ಷಣೆ

11:17 PM May 11, 2019 | Team Udayavani |

ಸಿದ್ದಾಪುರ: ಕಾಡಿನಿಂದ ನೀರನ್ನು ಅರಸಿ ಬಂದ ಕಾಡುಕೋಣ ಒಂದು ಹೊಸಂಗಡಿ ಗ್ರಾಮದ ಕೆರೆಕಟ್ಟೆ ಬಳಿಯ ಯಶೋದಾ ಶೆಟ್ಟಿ ಅವರ ಮನೆಯ ತೋಟದ ಮಧ್ಯೆ ಇರುವ ಕೆರೆಗೆ ಬಿದ್ದ ಘಟನೆಯು ಶುಕ್ರವಾರ ರಾತ್ರಿ ನಡೆದಿದೆ.

Advertisement

ಮನೆಯವರು ಶನಿವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ತೋಟಕ್ಕೆ ನೀರು ಬಿಡಲು ಕೆರೆಯ ಬಳಿ ಹೋದಾಗ ಕಾಡುಕೋಣ ಕೆರೆಗೆ ಬಿದ್ದಿರುದನ್ನು ಗಮನಿಸಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ, ಸುರಕ್ಷಿತವಾಗಿ ಕಾಡುಕೋಣವನ್ನು ಕೆರೆಯಿಂದ ಮೇಲಕ್ಕೆ ಎತ್ತಿ ಕಾಡಿಗೆ ಬಿಟ್ಟಿದ್ದಾರೆ.

ಕಾರ್ಯಚರಣೆಯಲ್ಲಿ ಶಂಕರ ನಾರಾಯಣ ವಲಯಾರಣ್ಯಾಧಿಕಾರಿ ಎ. ಗೋಪಾಲ್, ಉಪ ವಲಯ ರಣ್ಯಾಧಿಕಾರಿ ಈರಣ್ಣ ಮಾಯಾಚಾರಿ, ಅರಣ್ಯ ವೀಕ್ಷಕರಾದ ಪ್ರವೀಣ್‌ಕುಮಾರ್‌, ಪ್ರಕಾಶ ಬಂಕಾಪುರ, ಗುರುರಾಜ್‌, ಅರಣ್ಯ ರಕ್ಷಕರಾದ ಚಂದ್ರು ಟಿ, ಶಿವಾನಂದ, ವನ್ಯಜೀವಿ ವಿಭಾಗದ ಉಪ ವಲಯಾರಣ್ಯಾಧಿಕಾರಿ ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು. ಹೊಸಂಗಡಿ ಗ್ರಾ. ಪಂ. ಅಧ್ಯಕ್ಷೆ ಯಶೋದಾ ಶೆಟ್ಟಿ, ಸದಸ್ಯ ಜಯರಾಮ ಗಾಣಿಗ ಮತ್ತು ಸ್ಥಳೀಯ ಯುವಕರು ಇಲಾಖೆಗೆ ಸಹಕಾರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next