Advertisement
ತಾಲೂಕಿನ ದುಗ್ಗಸಂದ್ರ ಹೋಬಳಿ ಮಂಡಿಕಲ್ ದೊಡ್ಡಕೆರೆ ಕಟ್ಟೆ ಮೇಲೆ ತಿರುವುಗಳಂತೆ ನಿರ್ಮಿಸಿರುವ ಕಿರಿದಾದ ರಸ್ತೆಯಲ್ಲಿ ಭಾರೀ ವಾಹನಗಳ ಅತಿಯಾಗಿ ಒಡಾಟದಿಂದ ಕಟ್ಟೆಯ ಇಕ್ಕೆಲಗಳಲ್ಲಿನ ಮಣ್ಣು ಕುಸಿದು ಹಳ್ಳಗಳು ಉಂಟಾಗಿವೆ. ಈ ರಸ್ತೆಯಲ್ಲಿ ನಿಧಾನವಾಗಿ ಸಂಚರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಒಂದು ವಾಹನ ಬಂದಾಗ ಮತ್ತೂಂದು ವಾಹನ ಸಾಕಷ್ಟು ಪರದಾಡಬೇಕಾಗುತ್ತದೆ. ಒಂದು ವೇಳೆ ಯಾವುದೇ ವಾಹನ ಅತೀ ವೇಗದಿಂದ ಸಂಚರಿಸಿದರೆ 20 ಅಡಿಗಳ ಆಳದ ಕೆರೆ ಅಥವಾ ಗದ್ದೆಗಳಲ್ಲಿ ಬೀಳುವ ಸಂಭವವಿದೆ.
ಈ ಕೆರೆ ಕಟ್ಟೆಯ ಮೇಲೆ ಹಲವಾರು ದಶಕಗಳ ಹಿಂದೆ ರಸ್ತೆ ನಿರ್ಮಿಸಿದ್ದರೂ ಉತ್ತಮವಾಗಿದ್ದ ರಸ್ತೆಯಲ್ಲಿ ಹಲವು ವರ್ಷಗಳ ಹಿಂದೆ ನಿರಂತರವಾಗಿ ಮರಳು ಲಾರಿಗಳು ರಾತ್ರಿ ವೇಳೆ ಓಡಾಟ ನಡೆಸಿದ್ದರಿಂದ ಕಿರಿದಾದ ಕಟ್ಟೆಯ ಮೇಲಿನ ಮಣ್ಣು ಕೆಳಗಡೆ ಕುಸಿದು ಇಂತಹ ದುಸ್ತಿತಿಗೆ ಕಾರಣವಾಗಿದೆ.
Related Articles
Advertisement
ಎಷ್ಟೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಮಾರ್ಗದಲ್ಲಿ ದೇವಾಲಯಕ್ಕೆ ಬಂದು ಹೋದರೂ ಸಂಪೂರ್ಣವಾಗಿ ಹಾಳಾಗಿರುವ ರಸ್ತೆಗೆ ಯಾರೊಬ್ಬರೂ ಕಾಯಕಲ್ಪ ನೀಡದಿರುವುದು ವಾಹನಗಳ ಸಂಚಾರಕ್ಕೆ ತೊಂದರೆ ಯುಂಟಾಗಿದೆ. ಶೀಘ್ರವೇ ಕೆರೆ ಕಟ್ಟೆಯೊಂದಿಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ನಾಗರಾಜ್, ಮಂಡಿಕಲ್ ತಾಲೂಕಿನ ಮಂಡಿಕಲ್ ಕೆರೆ ಕಟ್ಟೆ ರಸ್ತೆಗೆ ಪ್ರಸ್ತುತ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಮುಂದಿನ 6 ತಿಂಗಳೊಳಗೆ ಅನುದಾನ ಬಿಡುಗಡೆಯಾದರೆ ಕ್ರಿಯಾ ಯೋಜನೆ ತಯಾರಿಸಿ ಈ ರಸ್ತೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಬೋಗೇಗೌಡ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು