Advertisement

ಎಲ್ಲ ಜಿಹಾದಿ ಉಗ್ರರ ಹತ್ಯೆ, ನೈರೋಬಿ ದಾಳಿ ಅಂತ್ಯ: ಕೀನ್ಯ ಅಧ್ಯಕ್ಷ

10:34 AM Jan 16, 2019 | udayavani editorial |

ನೈರೋಬಿ : ಮೇಲ್‌-ಮಾರುಕಟ್ಟೆ ಹೊಟೇಲ್‌ ಸಂಕೀರ್ಣವನ್ನು ನುಗ್ಗಿ  14 ಮಂದಿಯನ್ನು ಕೊಂದಿದ್ದ ಎಲ್ಲ ಇಸ್ಲಾಮಿಕ್‌ ಜಿಹಾದಿ ಉಗ್ರರನ್ನು ಇಪ್ಪತ್ತು ತಾಸುಗಳ ಮುತ್ತಿಗೆ ಕಾರ್ಯಾಚರಣೆಯಲ್ಲಿ  ಹತ್ಯೆ ಮಾಡಲಾಗಿದ್ದು  ನೂರಕ್ಕೂ ಅಧಿಕ ಪೌರರನ್ನು ರಕ್ಷಿಸಲಾಗಿದೆ ಎಂದು ಕೀನ್ಯ ಅಧ್ಯಕ್ಷ ಉಹುರು ಕಿನ್ಯಾಟಾ ತಿಳಿಸಿದ್ದಾರೆ.

Advertisement

ಡ್ಯುಸಿಟ್‌-ಡಿ2 ಆವರಣದಲ್ಲಿನ 101 ರೂಮುಗಳ ಹೊಟೇಲ್‌, ಸ್ಪಾ, ರೆಸ್ಟೋರಾಂಟ್‌ ಮತ್ತು ಕಾರ್ಯಾಲಯ ಕಟ್ಟಡ ನುಗ್ಗಿದ ಇಸ್ಲಾಮಿಕ್‌ ಜಿಹಾದಿ ಉಗ್ರರಲ್ಲಿ ಒಬ್ಟಾತ ಆತ್ಮಹತ್ಯಾ ಬಾಂಬರ್‌ ಆಗಿದ್ದ; ಉಳಿದವರು ಭದ್ರತಾ ಪಡೆಗಳ ಮೇಲೆ ಅಸಂಖ್ಯ ಶೂಟೌಟ್‌ಗಳನ್ನು ಆರಂಭಿದರು. ಸುಮಾರು 20 ತಾಸುಗಳ ಕಾಲ ನಡೆದ ಈ ಮುತ್ತಿಗೆ ಕಾರ್ಯಾಚರಣೆಯಲ್ಲಿ ಎಲ್ಲ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದವರು ಹೇಳಿದರು. 

ಈ ಉಗ್ರ ದಾಳಿ ತನ್ನದೇ ಕೃತ್ಯವೆಂದು ಅಲ್‌ ಕಾಯಿದಾ ಜತೆ ನಂಟು ಹೊಂದಿರುವ ಅಲ್‌ ಶಬಾಬ್‌ ಎಂಬ ಸೊಮಾಲಿ ಸಮೂಹ ಹೇಳಿಕೊಂಡಿದೆ. ಸೊಮಾಲಿಯಾದಲ್ಲಿನ ಜಿಹಾದಿ ಉಗ್ರರ ವಿರುದ್ಧ ಹೋರಾಡಲು 2011ರಲ್ಲಿ  ಕೀನ್ಯ ತನ್ನ ಸೇನೆಯನ್ನು ಕಳುಹಿಸಿಕೊಟ್ಟದ್ದನ್ನು ಅನುಸರಿಸಿ ಕೀನ್ಯವನ್ನು ಗುರಿ ಇರಿಸಿ ಜಿಹಾದಿ ಉಗ್ರರು ಆಗೀಗ ಎಂಬಂತೆ ದಾಳಿ ನಡೆಸುತ್ತಲೇ ಇದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next