Advertisement

Kenya ಸಂಸತ್‌ಗೆ ಬೆಂಕಿ: ಗೋಲಿಬಾರ್‌ಗೆ 10 ಸಾವು

11:23 PM Jun 25, 2024 | Team Udayavani |

ನೈರೋಬಿ: ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆಯೂ ಕೀನ್ಯಾದ ಸಂಸತ್ತಿನಲ್ಲಿ ಮಂಗಳವಾರ ನೂತನ ತೆರಿಗೆ ನೀತಿ ಮಸೂದೆಗೆ ಅಂಗೀಕಾರ ದೊರೆತಿದೆ. ಈ ಬೆನ್ನಲ್ಲೇ ಸಂಸತ್‌ ಸಂಕೀರ್ಣಕ್ಕೆ ಪ್ರತಿಭಟನಕಾರರು ಮುತ್ತಿಗೆ ಹಾಕಿ, ಸಂಸತ್‌ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ.

Advertisement

ಪ್ರತಿಭಟನಕಾರರನ್ನು ಹತ್ತಿಕ್ಕಲು ಭದ್ರತಾಪಡೆ ಗೋಲಿಬಾರ್‌ ನಡೆಸಿದ್ದು, 10 ಮಂದಿ ಮೃತಪಟ್ಟಿದ್ದಾರೆ. ಸಂಸತ್‌ ಕಟ್ಟಡ ಹೊತ್ತಿ ಉರಿಯುತ್ತಿರುವ ವೀಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈಗಾಗಲೇ ಜೀವನ ನಿರ್ವಹಣೆಯೇ ನಾಗರಿಕರಿಗೆ ಹೊರೆಯಾಗಿದ್ದು, ನೂತನ ನೀತಿ ತೆರಿಗೆ ಹೆಚ್ಚಳದೊಂದಿಗೆ ಜನರನ್ನು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿಸುತ್ತದೆ ಎಂದು ಪ್ರತಿಭಟನೆಗಳು ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next