Advertisement
ಸದ್ಯ ಕೋವಿಡ್ ನಿರ್ಬಂಧಗಳು, ಬಹುತೇಕ ಕಂಪನಿಗಳಲ್ಲಿ ಮನೆಯಿಂದಲೇ ಕೆಲಸ ಮಾಡುವ ಪದ್ಧತಿ ಮುಂದುವರಿದಿರುವುದರಿಂದ ಈಗಾಗಲೇ ಇರುವ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ.ಇದನ್ನು ಗಮನದಲ್ಲಿಟ್ಟುಕೊಂಡು ಆರಂಭದಲ್ಲಿ 15 ನಿಮಿಷ ಅಂತರದಲ್ಲಿ ಮೆಟ್ರೋಸೇವೆ ಒದಗಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಪ್ರಯಾಣಿಕರ ಸ್ಪಂದನೆ ನೋಡಿಕೊಂಡು ‘ಫ್ರಿಕ್ವೆನ್ಸಿ’ ಹೆಚ್ಚಿಸಲಾಗುವುದು ಎಂದು ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಕೇಂದ್ರ ವಸತಿ, ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಚಾಲನೆ ನೀಡಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು ಭಾಗವಹಿಸಲಿದ್ದಾರೆ. ಒಟ್ಟಾರೆ 7.53 ಕಿ.ಮೀ. ಉದ್ದದ ಈ ಮಾರ್ಗವು 1,560 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಒಟ್ಟು 6ನಿಲ್ದಾಣಗಳು ಬರಲಿವೆ.ಈ ವಿಸ್ತರಣೆಯಿಂದ ನಿತ್ಯ 75 ಸಾವಿರ ಜನರಿಗೆ ಅನುಕೂಲ ಎಂದು ನಿರೀಕ್ಷಿಸಲಾಗಿದೆ.2018ರ ಲ್ಲೇ ಈ ಮಾರ್ಗ ಉದ್ಘಾಟನೆಗೊಳ್ಳಬೇಕಿತ್ತು. ಹಲವು ಕಾರಣದಿಂದ ಗಡುವು ಮೀರಿತ್ತು. ಮಾಜಿ ಸಿಎಂ ಬಿಎಸ್‌ವೈ ಮಾರ್ಗ ಪರಿಶೀಲಿಸಿ ಜುಲೈನಲ್ಲಿ ಲೋಕಾರ್ಪಣೆ ಎಂದಿದ್ದರು. ಚಲಘಟ್ಟ ಡಿಪೋವರೆಗೆ ಓಡಾಟ
ಮೈಸೂರು ರಸ್ತೆಯಿಂದ ಚಲ್ಲಘಟ್ಟ ಡಿಪೋವರೆಗೆ ಒಟ್ಟಾರೆ 7.53 ಕಿ.ಮೀ. ಎತ್ತರಿಸಿದ ಮಾರ್ಗದ ಉದ್ದವಾಗಿದೆ. ಆದರೆ, ಆ ಪೈಕಿ ಸದ್ಯಕ್ಕೆ 6.2ಕಿ.ಮೀ. ಅಂದರೆ ಕೆಂಗೇರಿವರೆಗೆ ಮಾತ್ರ ಲೋಕಾರ್ಪಣೆಗೊಳ್ಳುತ್ತಿದೆ.ಕೆಂಗೇರಿಯಿಂದ ಚಲ್ಲಘಟ್ಟ ಒಂದೂವರೆ ಕಿ.ಮೀ. ಉದ್ದದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.