Advertisement
ನಿಷ್ಠೆಯಿಂದ ಸಲ್ಲಿಸುವ ಪ್ರಾರ್ಥನೆಗೆ ರಾಮನ ಭಂಟ ಒಲೆಯುತ್ತಾನೆ ಎಂಬ ನಂಬಿಕೆ ಇಲ್ಲಿ ನ ಸುತ್ತಮುತ್ತಲ ಜನ ರಲ್ಲಿದೆ. ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ರಾಮನಗರ ಜಿಲ್ಲೆಯ ಕೆಲ ಗ್ರಾಮಸ್ಥರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಂತರ ಮನೆಗೆ ತೆರಳುವ ಮುನ್ನ ಕೆಂಗಲ್‌ಗೆ ಆಗಮಿಸಿ, ಅಲ್ಲೇ ಸ್ನಾನಾದಿಗಳನ್ನೆಲ್ಲ ಪೂರೈಸಿ, ಲಡ್ಡು ಪ್ರಸಾದವನ್ನು ನೈವೇದ್ಯಕ್ಕಿಟ್ಟು ಆಂಜನೇಯನನ್ನು ಆರಾಧಿಸುವುದು ವಾಡಿಕೆ. ಇಲ್ಲಿ ನಿತ್ಯವೂ ನೂರಾರು ತಿಮ್ಮಪ್ಪನ ಭಕ್ತರು ಕಾಣಸಿಗುತ್ತಾರೆ. ಕೆಲ ಕುಟುಂಬಗಳು ತಿರುಪತಿ ಯಾತ್ರೆಗೆ ಮುನ್ನ ಇಲ್ಲಿಗೆ ಭೇಟಿ ಕೊಟ್ಟು ನಿವೇದಿಸಿಕೊಂಡ ನಂತರವಷ್ಟೇ ಪ್ರಯಾಣ ಬೆಳೆಸುವುದೂ ವಾಡಿಕೆ.
ಕೆಂಗಲ್ ಆಂಜನೇಯ ಸ್ವಾಮಿ ದೇಗುಲವು, ರಾಮನಗರದಿಂದ ಸುಮಾರು 5 ಕಿ.ಮೀ. ದೂರದಲ್ಲಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಿಗು ತ್ತದೆ.
Related Articles
ಚನ್ನಪಟ್ಟಣ ತಾಲೂಕಿನ ಸಂಜಾತರಾದ, ವಿಧಾನ ಸೌಧ ನಿರ್ಮಾ ತೃ ಹನುಮಂತಯ್ಯ ಅವರ ಮನೆಯ ದೇವರು ಕೂಡ ಕೆಂಗಲ್ ಆಂಜನೇಯ. ಹನುಮಂತಯ್ಯ ಅವರ ತಂದೆಯವರ ಆರಾಧ್ಯ ದೈವ ಈ ಆಂಜನೇಯ. ಹೀಗಾಗಿಯೇ ಅವರು ತಮ್ಮ ಮಗನಿಗೆ ಕೆಂಗಲ್ ಹನುಮಂತಯ್ಯ ಎಂದೇ ನಾಮಕರಣ ಮಾಡಿದರು ಎಂಬು ದನ್ನು ಇಲ್ಲಿ ಸ್ಮರಿಸಬಹುದು.
Advertisement
ಸೂರ್ಯ ಪ್ರಕಾಶ್