Advertisement

ಕೆ.ವಿ.ಗಳಿಗೆ ಇನ್ನಿಲ್ಲ ಹಲವು ಕೋಟಾ; ಕೇಂದ್ರ ಸರಕಾರದ ಮಹತ್ವದ ಆದೇಶ

12:41 AM Apr 27, 2022 | Team Udayavani |

ಹೊಸದಿಲ್ಲಿ: ಕೇಂದ್ರೀಯ ವಿದ್ಯಾಲಯ (ಕೆ.ವಿ.)ಗಳಲ್ಲಿ ಸಂಸದರಿಗೆ ಇರುವ ಕೋಟಾ ಸಹಿತ ಹಲವು ವಿಶೇಷ ಪ್ರವೇಶ ಅವಕಾಶಗಳನ್ನು ರದ್ದು ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಜತೆಗೆ ಹೊಸ ನಿಯಮಗಳನ್ನೂ ಬಿಡುಗಡೆ ಮಾಡಿದೆ. ಇದರಿಂದಾಗಿ ಪ್ರತೀ ಕೆ.ವಿ.ಗೆ ತಲಾ ಹತ್ತರಂತೆ ಸುಮಾರು 40 ಸಾವಿರ ಹೆಚ್ಚುವರಿ ಸೀಟುಗಳು ಸಿಗಲಿವೆ.

Advertisement

ಕೊರೊನಾದಿಂದಾಗಿ ಅನಾಥ ರಾದ 10 ಮಕ್ಕಳಿಗೆ ವಿಶೇಷ ಆದ್ಯತೆ ಯಲ್ಲಿ ಪ್ರವೇಶ ನೀಡಲು ನಿರ್ಧರಿಸ ಲಾಗಿದೆ. ಅವರಿಗೆ 1-12ನೇ ತರಗತಿ ವರೆಗೆ ಶುಲ್ಕ ವಿನಾಯಿತಿ ನೀಡಲು ಚಿಂತನೆ ನಡೆಸಲಾಗಿದೆ.

ಯಾವ ಕೋಟಾಕ್ಕೆ ಮಾನ್ಯತೆ?
ಪರಮವೀರ ಚಕ್ರ ಸಹಿತ ವಿವಿಧ ಸೇನಾ ಮೆಡಲ್‌ಗ‌ಳು, ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದವರ ಕೋಟಾ, ರಿಸರ್ಚ್‌ ಆ್ಯಂಡ್‌ ಅನಾಲಿಸಿಸ್‌ ವಿಂಗ್‌ನ ಉದ್ಯೋಗಿಗಳ 15 ಮಕ್ಕಳಿಗೆ, ವಿಶೇಷ ಸಂದರ್ಭಗಳಲ್ಲಿ ಅಸುನೀಗಿದ ಕೇಂದ್ರ ಸರಕಾರಿ ಉದ್ಯೋಗಿಗಳ ಮಕ್ಕಳಿಗೆ, ಕಲಾ ವಿಭಾಗದಲ್ಲಿ ವಿಶೇಷ ಸಾಧಕರ ಮಕ್ಕಳ ಕೋಟಾ ಇರಿಸಿಕೊಳ್ಳಲಾಗಿದೆ. ಸೇನೆ, ನೌಕಾಪಡೆ, ಐಎಎಫ್ ಉದ್ಯೋಗಿಗಳಿಗೆ, ಕೆ.ವಿ. ಸಂಘಟನ್‌ನಲ್ಲಿ ಕೆಲಸ ಮಾಡುತ್ತಿರುವವರ ಮಕ್ಕಳಿಗೆ, ರಾಷ್ಟ್ರಪತಿಗಳ ಪೊಲೀಸ್‌ ಮೆಡಲ್‌ ಪಡೆದವರ ಮಕ್ಕಳು, ಕೇಂದ್ರೀಯ ಪೊಲೀಸ್‌ ಪಡೆಗಳಲ್ಲಿರುವ ಬಿ ಮತ್ತು ಸಿ ವಿಭಾಗದ ಉದ್ಯೋಗಿಗಳ ಮಕ್ಕಳಿಗೆ, ಕಾಶ್ಮೀರಿ ಪಂಡಿತರ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶ ಸಿಗಲಿದೆ.

ರದ್ದಾಗಿರುವ ಕೋಟಾ
ಸಂಸದರ ಕೋಟಾ ಅಲ್ಲದೆ, ಶಿಕ್ಷಣ ಸಚಿವಾ ಲಯದ ಉದ್ಯೋಗಿಗಳ ಮಕ್ಕಳಿಗೆ, ಕೇಂದ್ರೀಯ ವಿದ್ಯಾಲಯದ ನಿವೃತ್ತ ಉದ್ಯೋಗಿಗಳ ಸಂಘ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಿಗೆ ಮೀಸಲಾಗಿ ಇರುವ ವಿವೇಚನ ಕೋಟಾಗಳನ್ನು ರದ್ದು ಮಾಡಲಾಗಿದೆ. ಕಳೆದ ವರ್ಷ ಕೇಂದ್ರ ಸಚಿವರು ಕೆ.ವಿ.ಗಳಿಗೆ ಮಾಡುವ ಶಿಫಾರಸು ರದ್ದುಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next