Advertisement

ಜೋಪಾನ ಕಚ್ಚತ್ತೆ! ಕೆಂಪಿರ್ವೆಯಾಗಿ ಬಂದ್ರು ದತ್ತಣ್ಣ

03:11 PM Nov 16, 2017 | Sharanya Alva |

ಒಬ್ಬ ಸಾಮಾನ್ಯ ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲ …ನಾಳೆ ಬಿಡುಗಡೆಯಾಗುತ್ತಿರುವ ದತ್ತಣ್ಣ ಅಭಿನಯದ “ಕೆಂಪಿರ್ವೆ’ ಚಿತ್ರದ ಸಾರಾಂಶವೇನು ಎಂದು ಕೇಳಿದರೆ, ನಿರ್ದೇಶಕ ವೆಂಕಟ್‌ ಈ ರೀತಿಯಾಗಿ ಉತ್ತರಿಸುತ್ತಾರೆ. ಅದೇ ಕಾರಣಕ್ಕೆ ಈ ಚಿತ್ರಕ್ಕೆ ದತ್ತಣ್ಣ ಎಂಬ ಸಾಮಾನ್ಯ ಜನರ ಪ್ರತಿನಿಧಿಯನ್ನೇ ಅವರು ಹೀರೋ ಮಾಡಿದ್ದಾರೆ. ಅವರ ಮೂಲಕ ಒಂದು ವಿಭಿನ್ನ ಕಥೆ ಹೇಳುವುದಕ್ಕೆ ಹೊರಟಿದ್ದಾರೆ.

Advertisement

ಇಲ್ಲಿ ದತ್ತಣ್ಣ ಅವರು ವೆಂಕಟೇಶಮೂರ್ತಿ ಎಂಬ ಹತಾಶ ವೃದ್ಧರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೋರಾಟವೇ ಈ ಚಿತ್ರದ ಕಥೆಯಂತೆ. ಇಷ್ಟಕ್ಕೂ ದತ್ತಣ್ಣ ಯಾಕೆ ಮತ್ತು ಯಾರ ವಿರುದ್ಧ ಹೋರಾಡುತ್ತಾರೆ ಎಂಬ ಪ್ರಶ್ನೆ ಬರುವುದು ಸಹಜ. ಈ ಕುರಿತು ಹೇಳುವ ನಿರ್ದೇಶಕರು, ಒಂದು ರಹಸ್ಯವನ್ನು ಬಿಟ್ಟುಕೊಡುತ್ತಾರೆ. 

“ನನಗೆ ಗೊತ್ತಿರುವಂತೆ ಯಾವುದೇ ಚಿತ್ರದಲ್ಲೂ ಈ ವಿಷಯದ ಬಗ್ಗೆ ಚರ್ಚೆಯಾಗಿಲ್ಲ. ನಮ್ಮ ದೇಶದಲ್ಲಿ ಇಂಟಲಿಜೆನ್ಸ್‌ ಫೈನಾನ್ಸ್‌ ಯೂನಿಟ್‌ ಅಂತಿದೆ. ಭಯೋತ್ಪಾದಕರು ಶಸ್ತ್ರಗಳನ್ನು ಹಿಡಿದು ಯುದ್ಧ ಮಾಡುತ್ತಾರೆ. ಆದರೆ, ಕೆಲವರು ಸದ್ದು ಮಾಡದೆಯೇ ಎಕಾನಮಿ ವಾರ್‌ ಮಾಡುತ್ತಾರೆ. ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡುವವರ ವಿರುದ್ಧ ಈ ಇಂಟಲಿಜೆನ್ಸ್‌ ಫೈನಾನ್ಸ್‌ ಯೂನಿಟ್‌ ಕೆಲಸ ಮಾಡುತ್ತದೆ. ಈ ಯೂನಿಟ್‌ ಕುರಿತು ಚಿತ್ರದಲ್ಲಿ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಿದ್ದೇವೆ’ ಎನ್ನುತ್ತಾರೆ ವೆಂಕಟ್‌.

ಹಿರಿಯ ಗೀತರಚನೆಕಾರ ಮತ್ತು ನಿರ್ದೇಶಕರಾದ ಸಿ.ವಿ. ಶಿವಶಂಕರ್‌ ಮಗನಾದ ವೆಂಕಟ್‌, ಇದಕ್ಕೂ ಮುನ್ನ “ಎ ಡೇ ಇನ್‌ ದಿ ಸಿಟಿ’ ಮತ್ತು “ಬಬ್ಲೂಷ’ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದರು. ಇದು ಅವರ ಮೂರನೆಯ ಚಿತ್ರ. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯನ್ನೂ ಅವರೇ ರಚಿಸಿದ್ದಾರೆ. ಈ ಚಿತ್ರದಲ್ಲಿ ದತ್ತಣ್ಣ ಅಲ್ಲದೆ ಸಯ್ನಾಜಿ ಶಿಂಧೆ, ಉಮೇಶ್‌ ಬಣಕಾರ್‌, ಶ್ರೇಯ, ರಾಜ್‌ ಬಹದ್ದೂರ್‌, ರೂಪ ಹೆಗ್ಡೆ ಸೇರಿದಂತೆ ಹಲವರು ನಟಿಸಿದ್ದಾರೆ. ಕಿಶನ್‌ ಸಂಗೀತವಿರುವ ಈ ಚಿತ್ರವು ಅಮೃತ ಫಿಲ್ಮ್ ಸೆಂಟರ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next