Advertisement

ಏ.8ರಂದು ಕೆಂಪೇಗೌಡರ ಜಯಂತಿ

12:39 AM Feb 26, 2020 | Lakshmi GovindaRaj |

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಜಯಂತಿ ಹಾಗೂ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಏ.8ರಂದು ನಡೆಯಲಿದೆ ಎಂದು ಮೇಯರ್‌ ಎಂ.ಗೌತಮ್‌ಕುಮಾರ್‌ ತಿಳಿಸಿದ್ದಾರೆ. ಈ ಸಂಬಂಧ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳೊಂದಿ ಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮೇಯರ್‌, ಏ.8ರಂದು ಕರಗ ಮಹೋತ್ಸವ ಇದ್ದು, ಅದೇ ದಿನ ಕೆಂಪೇಗೌಡ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ.

Advertisement

ಕೆಂಪೇಗೌಡ ಪ್ರಶಸ್ತಿಗೆ ಮಾ.10ರ ಒಳಗೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.ಕೆಂಪೇಗೌಡ ಜಯಂತಿ ಅಂಗವಾಗಿ ಏ.8 ರಿಂದ 14ರವರೆಗೆ ವಿಶೇಷ ಕಾರ್ಯ ಕ್ರಮಗಳನ್ನು ಆಯೋಜಿಸುವ ಚಿಂತನೆ ಇದೆ ಎಂದ ಮೇಯರ್‌, ಮಾಗಡಿ ತಾಲೂಕು ಕೆಂಪಾಪುರ ಗ್ರಾಮದಿಂದ ಜ್ಯೋತಿ ತರುವ ಸ್ಥಳಕ್ಕೆ ಶೀಘ್ರ ಭೇಟಿ ನೀಡಿ ತಪಾಸಣೆ ನಡೆಸಲಾಗುವುದು.

ಅದೇ ರೀತಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಆಚರಿಸುವ ಕುರಿತು ಶೀಘ್ರವೇ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಸಮಿತಿ ರಚನೆ: ಕೆಂಪೇಗೌಡ ಪ್ರಶಸ್ತಿ ಸಂಬಂಧ ಈ ಬಾರಿಯೂ ತಜ್ಞರ ಸಮಿತಿ ರಚಿಸಲಾಗುವುದು. ಅದೇ ರೀತಿ ಸ್ವಾಗತ ಮತ್ತು ಸನ್ಮಾನ ಸಮಿತಿ ಸೇರದಂತೆ ವಿವಿಧ ಸಮಿತಿ ರಚಿಸಲಾಗುವುದು. ಎಂದು ಮೇಯರ್‌ ತಿಳಿಸಿದರು. ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌, ಅಬ್ದುಲ್‌ ವಾಜಿದ್‌, ನೇತ್ರಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next