Advertisement
ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಿಸಿರುವ ಬಿಡಿಎಗೆ ಇದೀಗ ಇಲ್ಲಿನ 193 ಎಕರೆ ಸರ್ಕಾರಿ ಜಮೀನು ಸ್ವಾಧೀನಪಡಿಸಿ ಕೊಳ್ಳುವುದೇ ದೊಡ್ಡ ಸವಾಲಾಗಿದೆ. 2014 ರಿಂದ 2023 ಆಗಸ್ಟ್‌ವೆರೆಗೆ ಹಲವು ಬಾರಿ ಯೋಜನೆಗೆ ಬೇಕಾಗಿ ರುವ ಸರ್ಕಾರಿ ಜಮೀನನ್ನು ಹಸ್ತಾಂತರಿ ಸುವಂತೆ ಕಂದಾಯ ಇಲಾಖೆಗೆ ಪತ್ರದ ಮೂಲಕ ಬಿಡಿಎ ವಿನಂತಿಸಿಕೊಂಡಿದೆ. ಆದರೆ, ಕಂದಾಯ ಇಲಾಖೆಯಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಇದರಿಂದ ಬಡಾವಣೆಯ ಭಾಗಗಳನ್ನು ಯೋಜನೆಯಂತೆ ನಿರ್ಮಿಸಲು ತೊಡಕಾಗಿದೆ.
Related Articles
Advertisement
154 ಎಕರೆ ಜಮೀನು ವಶಕ್ಕೆ ಪಡೆಯಲಿ:
ಸರ್ಕಾರದ 193 ಎಕರೆ ಪ್ರದೇಶವನ್ನು ನಿವೇಶನಾದಾರರ ಸಮ್ಮುಖದಲ್ಲಿ ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಸರ್ವೇ ವಿಭಾಗ ಹಾಗೂ ಬಿಡಿಎ ಒಪ್ಪಿಕೊಂಡಿರುವುದು ಬಡಾವಣೆ ನಿವಾಸಿಗಳ ಹಿತ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಇದರ ಜೊತೆಗೆ ಬಿಡಿಎಯು 154 ಎಕರೆಯ ಸರ್ಕಾರಿ ಗ್ರ್ಯಾಂಟ್ ಜಮೀನನ್ನು ವಶಪಡಿಸಿಕೊಳ್ಳಬೇಕು. ಇದರಿಂದ ಒಟ್ಟಾರೆ 346 ಎಕರೆ ಭೂ ಸ್ವಾಧೀನಪಡಿಸಿಕೊಂಡಂತೆ ಆಗುತ್ತದೆ. ಕೆಂಪೇಗೌಡ ಬಡಾವಣೆಯ ಮೂಲ ಸೌಕರ್ಯಕ್ಕಾಗಿ 2,500ರಿಂದ 3,500 ಸಾವಿರ ಕೋಟಿ ರೂ. ಖರ್ಚು ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಬಡಾವಣೆಯಲ್ಲಿ ನಿವೇಶನ ಹೊಂದಿರುವವರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಸರ್ಕಾರ ಒತ್ತು ನೀಡಬೇಕು ಎನ್ನುತ್ತಾರೆ ಬಡಾವಣೆ ಮುಕ್ತ ವೇದಿಕೆಯ ಅಧ್ಯಕ್ಷ ಶ್ರೀಧರ್ ನುಗ್ಗೆಹಳ್ಳಿ.
ಸ್ವಾಧೀನಪಡಿಸಿಕೊಳ್ಳದಿದ್ರೆ ತೊಡಕೇನು?:
193 ಎಕರೆ ಭೂಮಿ ಬಿಡಿಎ ಸ್ವಾಧೀನಪಡಿಸಿಕೊಳ್ಳದಿದ್ದರೆ ಕೆಂಪೇಗೌಡ ಬಡಾವಣೆಯಲ್ಲಿ ನೀರಿನ ಪೂರೈಕೆ, ಒಳಚರಂಡಿ ವ್ಯವಸ್ಥೆ, ರಸ್ತೆ ಸೌಕರ್ಯ ನಿರ್ಮಿಸಲು ಆಗುವುದಿಲ್ಲ, ಮುಖ್ಯರಸ್ತೆ, ಆಂತರಿಕ ರಸ್ತೆ ನಿರ್ಮಾಣಕ್ಕೆ ಜಾಗದ ವಿಚಾರದಲ್ಲಿ ಗೊಂದಲ ಉಂಟಾಗಲಿದೆ. ಇನ್ನಷ್ಟು ನಿವೇಶನ ಹಂಚಿಕೆ ವಿಳಂಬಗತಿಯಲ್ಲಿ ಸಾಗುತ್ತದೆ, ಬಡಾವಣೆಯಲ್ಲಿ ನಿರಂತರತೆ ಕಾಯ್ದುಕೊಳ್ಳಲು ಸಾಧ್ಯವಾಗು ವುದಿಲ್ಲ. ಅರ್ಧಬರ್ಧ ಕಾಮಗಾರಿ ಯಿಂದ ಇಲ್ಲಿ ನಿವೇಶನ ಖರೀದಿಸಿದವರಿಗೂ ಕಿರಿ-ಕಿರಿ ಉಂಟಾಗಿದೆ. ಮತ್ತೂಂದೆಡೆ ಬಿಡಿಎ, ಕಂದಾಯ ಇಲಾಖೆ ಅಧಿಕಾರಿಗಳು ಆಗಾಗ ವರ್ಗಾವಣೆ ಆಗುತ್ತಿರುವುದರಿಂದ ಹೊಸದಾಗಿ ಬರುವ ಅಧಿಕಾರಿಗಳಿಗೆ ಬಡಾವಣೆ ಸಮಸ್ಯೆಗಳ ಬಗ್ಗೆ ಅರಿವು ಇರುವುದಿಲ್ಲ. ಈ ಸಮಸ್ಯೆಗೆ ಮುಕ್ತಿ ಸಿಗಬೇಕಿದ್ದರೆ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.
-ಅವಿನಾಶ ಮೂಡಂಬಿಕಾನ