ಮಂಡ್ಯ: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಮತ್ತು ದಕ್ಷತೆ, ಜನಸೇವೆ ಪ್ರತಿಯೊಬ್ಬರಿಗೂ ಮಾದರಿ ಎಂದು ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜಾ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 512ನೇ ಜಯಂತಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದ ನಿರ್ಮಾತೃ, ಕಾಡಾಗಿದ್ದ ಜಾಗವನ್ನು ನಗರವನ್ನಾಗಿ ಮಾಡಿದವರು ಕೆಂಪೇಗೌಡರು. ಅವರ ಹೆಸರು ಚಿರಸ್ಥಾಯಿಯಾಗಿದೆ. ಯಲಹಂಕದ ಅರಸರಾದ ಇವರು ನಾಲ್ಕು ಜೋಡೆತ್ತುಗಳ ತೇರನ್ನು ಎಳೆದು ಊರನ್ನುಅಭಿವೃದ್ಧಿಪಡಿಸಿದ ಹರಿಕಾರ ಎಂದು ಬಣ್ಣಿಸಿದರು.
ಬೆಂಗಳೂರು ಎಂದರೆ ಐಟಿ ಬಿಟಿ ನಗರ ಎಂದು ಈಗ ಹೆಸರು ವಾಸಿ. ಶತಮಾನದ ಹಿಂದೆಯೇ ಹಸಿರುನಗರಿಯಾಗಿದ್ದು, ಕೆರೆಗಳ ಊರು, ಪೇಟೆಗಳ ನಗರವಾಗಿತ್ತು. ವಾಣಿಜ್ಯ, ಐಟಿಬಿಟಿ ನಗರವಾಗಿ ಅತೀ ವೇಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರು ಎಂದರೆ ನೆನಪಾಗುವುದು ಈ ಊರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಎಂದರು.
ಬದುಕು ಕಟ್ಟಿಕೊಳ್ಳಲು ಯೋಜನೆ: ಕೆಂಪೇಗೌಡರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅತಿದೊಡ್ಡ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲಾಗಿದೆ. ಎಲ್ಲ ಜಾತಿ, ಮತ, ಪಂಥ,ಧರ್ಮದ ಜನರೂ ಬದುಕು ಕಟ್ಟಿಕೊಳ್ಳಲು ಅನುವಾಗುವ ರೀತಿ ಇಂಥದ್ದೊಂದು ನಗರವನ್ನು ಕಟ್ಟಿದಮಹಾನ್ ವ್ಯಕ್ತಿಯ ಸಾಧನೆಯೂ ಅಷ್ಟೇಮಹತ್ವದ್ದಾಗಿದೆ ಎಂದು ಹೇಳಿದರು.
ದೂರದೃಷ್ಟಿ: ಜಿಪಂ ಸಿಇಒ ದಿವ್ಯಪ್ರಭು ಮಾತನಾಡಿ,ಬೆಂಗಳೂರು ಎಲ್ಲ ಜಾತಿ, ಮತ, ಪಂಥ, ಧರ್ಮದಜನರಿಗೆ ಬದುಕು ಕಟ್ಟಿಕೊಟ್ಟಿದೆ. ಇಂಥ ಸುಂದರ ನಗರನಿರ್ಮಾಣಕ್ಕೆ ಕೆಂಪೇಗೌಡರ ವಿವೇಚನೆ ಮತ್ತು ದೂರದೃಷ್ಟಿಯೇ ಕಾರಣ ಎಂದರು. ಜಿಲ್ಲಾಧಿ ಎಸ್.ಅಶ್ವಥಿಕಚೇರಿ ಸಂಗಣದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ್,ಅಖೀಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ರಾಜ್ಯಾಧ್ಯಕ್ಷ ಬಾಣಸವಾಡಿ ನಾಗಣ್ಣ, ಮಾನವ ಹಕ್ಕುಗಳ ರಾಜ್ಯಾಧ್ಯಕ್ಷೆ ರಜನಿರಾಜ್, ನೀನಾ ಪಾಟೀಲ್, ನಗರಸಭಾ ಸದಸ್ಯೆಸೌಭಾಗ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.