Advertisement

ಕೆಂಪೇಗೌಡನಾಡ ಪ್ರಭುವಾದದ್ದು…

03:47 PM Jun 27, 2017 | |

ಮಾಗಡಿ ಮತ್ತು ಸಾವನದುರ್ಗದ ಎರಡು ಕಡೆ 1638ರಲ್ಲಿ ಮಣ್ಣಿನ ಕೋಟೆಯನ್ನು ಕಲ್ಲಿನ ಕೋಟೆಯನ್ನಾಗಿ ಕಟ್ಟಿಕೊಂಡು ಸುತ್ತಲು ಕಂದಕಗಳನ್ನು ತೋಡಿಸಿದನು. ಈ ಭಾಗಗಳಲ್ಲಿ ದೇವಾಲಯಗಳು ಮತ್ತು ಕೆರೆ, ಕಟ್ಟೆಗಳನ್ನು ನಿರ್ಮಾಣಗೊಂಡಂತೆ ಈ ಭಾಗದಲ್ಲಿ ಹೊರಗಿನಿಂದ ಬಂದವರು ವ್ಯಾಪಾರ ವಹವಾಟಿಗೆ ಆಕರ್ಷಿತರಾಗಿದ್ದು, ದಿನೇ ದಿನೇ ಮಾಗಡಿ ವಿಸ್ತಾರಗೊಂಡಿತು. ಇವನ ಕಾಲದಲ್ಲಿ ಸಾವನದುರ್ಗ ಸೈನಿಕ ನೆಲೆಯಾಗಿ ಅಭಿವೃದ್ಧಿಗೊಂಡಿತು.

Advertisement

ಇಮ್ಮಡಿ ಕೆಂಪೇಗೌಡನ ಬೆಳವಣಿಗೆ ಕಂಡ ಅಸೂಯೆಪಡುವ ಪಾಳೇಗಾರರು ಬಿಜಾಪುರದ ಮಹಮದ್‌ ಆದಿಲ್‌ ಷಾನ ಜೊತೆಗೂಡಿ ರಣತಂತ್ರ ರೂಪಿಸಿದರು. ಬಾಗೂರಿನ ಸಮತಿ ಪಾಳೆಗಾರ ಇಮ್ಮಡಿ ಕೆಂಪೇಗೌಡನ ದ್ವೇಷಿಯಾಗಿದ್ದು, ಬಿಜಾಪುರ ಸುಲ್ತಾನನಿಗೆ ನೆರವಾದನು. ಸುಲ್ತಾನನು ದಕ್ಷಿಣದತ್ತ ಕೈಗೊಂಡ ದಂಡಯಾತ್ರೆಯಲ್ಲಿ ಎರಡನೆಯದು ಶಿರಾ ಮತ್ತು ಬೆಂಗಳೂರು ಮೇಲೆ ನಡೆಯಿತು. ಇದರ ಸೇನಾಧಿಪತ್ಯವನ್ನು ರಣದುಲ್ಲಾ ವಹಿಸಿದ್ದನು.

ಎರಡನೇ ಸೇನಾಧಿಪತಿಯಾಗಿ ಶಿವಾಜಿಯ ತಂದೆ ಷಹಜಿ ನೇಮಕಗೊಂಡಿದ್ದನು. ಹೀಗೆ ಬಿಜಾಪುರದ ನಾಯಕತ್ವದ ಒಕ್ಕೂಟದ ಸೈನ್ಯ ಶಿವಗಂಗೆಯಲ್ಲಿ ಬೀಡುಬಿಟ್ಟಿತು. ಸಾವನದುರ್ಗದಿಂದಲೇ ಎದುರಿಸಿ ಸೋತ ಇಮ್ಮಡಿ ಕೆಂಪೇಗೌಡ ಒಪ್ಪಂದ ಮಾಡಿಕೊಂಡು ಪೊಗದಿ ನೀಡಲೊಪ್ಪಿದನು. ರಾಮಗಿರಿಯನ್ನು ಒಪ್ಪಿಸಿದ ಇಮ್ಮಡಿ ಕೆಂಪೇಗೌಡ ತನ್ನ ಮಗನನ್ನು ಒತ್ತೆಯಾಳಾಗಿಟ್ಟು, ಸುಲ್ತಾನನಿಂದ ಸ್ಥಳೀಯ ನಾಯಕರ ವಿರುದ್ಧ ರಕ್ಷಣೆಗೆ ಭರವಸೆ ಪಡೆದನು.

ಈ ಘಟನೆಯಿಂದ ನೊಂದು ಕುಣಿಗಲ್‌ ಕಡೆಗೆ ಹೋದನೆಂದು ಹೇಳಲಾಗುತ್ತಿದೆ. ಬೆಂಗಳೂರನ್ನು ಇಟ್ಟುಕೊಂಡಿದ್ದ ಸುಲ್ತಾನ್‌ ಮಾಗಡಿಯ ಇಮ್ಮಡಿ ಕೆಂಪೇಗೌಡನಿಗೆ ನೀಡಿರುವುದು ಐತಿಹಾಸಿಕ ಘಟನೆ. ಬಿಜಾಪುರದ ಸುಲ್ತಾನನ ಆದೇಶದಂತೆ ಬೆಂಗಳೂರು, ಹೊಸಕೋಟೆ, ಕೋಲಾರ, ಸೀರ್ಯ ಪ್ರಾಂತ್ಯಗಳಗೊಂಡ ಪ್ರದೇಶ ವನ್ನು ಷಹಜಿಗೆ ಜಹಗೀರಾಗಿ ನೀಡಲಾಯಿತು. ಆಗ ಷಹಜಿ ಅಧಿಪತಿಯಾದನು.

ಬೆಂಗಳೂರನ್ನು ಸುಲ್ತಾನಿಗೆ ಕೊಟ್ಟು, ಮಾಗಡಿಗೆ ಬಂದ ಇಮ್ಮಡಿ ಕೆಂಪೇಗೌಡ ಹುಲಿಕಲ್ಲು, ಸಾವನದುರ್ಗ, ನೆಲಪಟ್ಟಣ, ಹುಲಿಯೂರುದುರ್ಗ, ಹುತ್ರಿದುರ್ಗ, ಭೈರವನದುರ್ಗ, ಮತ್ತು ಕುಣಿಗಲ್‌ ಪ್ರಾಂತ್ಯದಲ್ಲಿ ಪ್ರಾಬಲ್ಯಗೊಂಡು ಸುಮಾರು 18 ವರ್ಷಗಳ ಕಾಲ ಆಡಳಿತ ನಡೆಸಿದನು. ಬೆಟ್ಟಗುಡ್ಡಗಳ ಬಂಜರು ಭೂಮಿಯಿಂದ ಕೂಡಿದ ಮಾಗಡಿ ಪ್ರದೇಶದಲ್ಲಿ ಕೆರೆ ಕಟ್ಟೆ, ಕಲ್ಯಾಣಿಗಳನ್ನು ನಿರ್ಮಾಣ ಮಾಡಿದನು. ಕಾಡಾಗಿದ್ದ ಪ್ರದೇಶ ಹೀಗೆ ಸಾಗುವಳಿಯೊಂದಿಗೆ ದಿನೇ ದಿನೇ ನಾಡಾಗತೊಡಿತು.

Advertisement

ಜನವಸತಿ ಬೆಳೆದು ಮಾಗಡಿಯಾಗಿ ಬೆಳೆಯಿತು. ಹೀಗೆ ಆರ್ಥಿಕವಾಗಿ, ಸಾಂಸ್ಕೃತಿಕ ಕ್ಷೇತ್ರವಾಗಿ ಮಹತ್ವ ಪಡೆಯಿತು. ಇಮ್ಮಡಿ ಕೆಂಪೆಗೌಡ ಮಾಗಡಿ ಕೆಂಪೇಗೌಡರೆಂದೇ ಹೆಸರಾಯಿತು. ಬೆಂಗಳೂರು ನಿರ್ಮಾತೃ ಮಾಗಡಿ ಕೆಂಪೇಗೌಡರಿಗೆ ಸಲ್ಲುತ್ತದೆ.   ಮಾಗಡಿ ಸುತ್ತಲು ಅನೇಕ ಕೆರೆ ಕಟ್ಟೆ, ಕಲ್ಯಾಣಿಗಳು ನಿರ್ಮಾಣಗೊಂಡವು. ಅದರಲ್ಲೂ ಕೆಂಪಸಾಗರ ಕೆರೆ ಬಹಳ ಪ್ರಮುಖವಾದುದು. ಸಾವನದುರ್ಗ, ಮಾಗಡಿಯಲ್ಲಿ ಕಲ್ಲಿನ ಕೋಟೆ ಕಟ್ಟಿರುವುದು ಇತಿಹಾಸಕ್ಕೆ ಸಾಕ್ಷಿಯಗಿದೆ. ಎಲ್ಲಾ ಜಾತಿ, ಜನಾಂಗದವರಿಗೂ ಪೇಟೆಗಳನ್ನು ಕಟ್ಟಿ ಅನುಕೂಲ ಮಾಡಿಕೊಟ್ಟಿರುವ ಇವರು ನಾಡಪ್ರಭುಗಳಾಗಿದ್ದಾರೆ.

* ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next