Advertisement

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ

10:21 AM Oct 28, 2024 | Team Udayavani |

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳು ದೇಶಕ್ಕೆ ಮಾದರಿಯಾಗಿವೆ. ಎರಡು ಜಿಲ್ಲೆಯ ಸಹಕಾರಿ ಸಂಘಗಳಿಂದ ಗ್ರಾಹಕರಿಗೆ ಆಗುವ ಸಹಕಾರ ಬೇರೆ ಎಲ್ಲಿಯೂ ಸಿಗದು ಎಂದು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

Advertisement

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಶತಾಭಿವಂದನಂ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಉಭಯ ಜಿಲ್ಲೆಯ ಅತ್ಯುತ್ತಮ ಕೃಷಿಪತ್ತಿನ ಸಹಕಾರಿ ಸಂಘಗಳಲ್ಲಿ ಗಣಪತಿ ಸಹಕಾರಿ ವ್ಯವಸಾಯಕ ಸಂಘ ಒಂದು. ಇದರ ಕಾರ್ಯವೈಖರಿ ಉತ್ತಮವಾಗಿದೆ ಎಂದರು.

ಮಾಜಿ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ ಮಾತನಾಡಿ, ನಮ್ಮ ದೇಶವಿಂದು ಅಭಿವೃದ್ಧಿಯತ್ತ ಸಾಗದೆ ದುರಾಸೆ ಎಂಬ ರೋಗಕ್ಕೆ ಬಲಿಯಾಗುತ್ತಿದೆ. ಈ ರೋಗದಿಂದ ಯಾವಾಗ ಜನ ಮುಕ್ತರಾಗುತ್ತಾರೋ ಅಂದು ದೇಶದ ಅಭಿವೃದ್ದಿ ಸಾಧ್ಯವಾಗಬಹುದು ಎಂದರು.

ಮಣಿಪಾಲದ ಡಾ| ಟಿ.ಎಂ.ಎ.ಪೈ ಫೌಂಡೇಶನ್‌ ಅಧ್ಯಕ್ಷ ಅಶೋಕ್‌ ಪೈ ಅವರು ಮಾತನಾಡಿ ಆಡಳಿತ ಮಂಡಳಿ, ಸಿಬಂದಿ ವರ್ಗದಲ್ಲಿ ಹೊಂದಾಣಿಕೆಯಿದ್ದರೆ ಸಂಸ್ಥೆಯೊಂದು ಈ ಮಟ್ಟಿಗೆ ಬೆಳೆಯಬಹುದು ಎಂಬುದನ್ನು ಈ ಸಂಘ ತೋರಿಕೊಟ್ಟಿದೆ ಎಂದರು. ಕೆಮ್ಮಣ್ಣು ಸಂತ ಥೆರೆಸಾ ಚರ್ಚಿನ ಧರ್ಮಗುರು ವಂ| ಫಿಲಿಪ್‌ ನೇರಿ ಅರಾನ್ಹ ಆಶೀರ್ವಚನ ನೀಡಿದರು. ಶಾಸಕ ಯಶ್‌ಪಾಲ್‌ ಎ. ಸುವರ್ಣ ಶುಭಾಶಂಸನೆ ಮಾಡಿದರು.

Advertisement

ಸಂಘದ ಅಧ್ಯಕ್ಷ ಟಿ. ಸತೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಸಹಕಾರ ಸಂಘಗಳ ನಿವೃತ ಸಹಾಯಕ ನಿಬಂಧಕ ಅರುಣ್‌ ಕುಮಾರ್‌ಎಸ್‌.ವಿ., ಹಿರಿಯ ಸಹಕಾರಿ ಸರಳಾ ಬಿ. ಕಾಂಚನ್‌, ಯೋಧ ಕಿಶನ್‌, ಗೃಹರಕ್ಷಕ ದಳದ ಕಮಾಂಡರ್‌ ರೋಶನ್‌ ಕುಮಾರ್‌ ಶೆಟ್ಟಿ , ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು, ನಿವೃತ್ತ ಸಿಬಂದಿ ವರ್ಗದವರನ್ನು ಸಮ್ಮಾನಿಸಲಾಯಿತು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ. ಜಯಕರ್‌ಶೆಟ್ಟಿ ಇಂದ್ರಾಳಿ, ಉದ್ಯಮಿಗಳಾದ ಪ್ರಸಾದ್‌ ರಾಜ್‌ ಕಾಂಚನ್‌, ಉದ್ಯಮಿ ಡಾ| ಮಹಮ್ಮದ್‌ ರಫೀಕ್‌, ಗಣ್ಯರಾದ ಡಾ| ದೇವಿ ಪ್ರಸಾದ್‌ ಶೆಟ್ಟಿ ಬೆಳಪು, ಅಶೋಕ್‌ ಶೆಟ್ಟಿ ಬೆಳ್ಳಂಪಳ್ಳಿ, ರಾಜೇಶ್‌ ರಾವ್‌ ಪಾಂಗಳ, ಲಕ್ಷ್ಮೀನಾರಾಯಣ ರಾವ್‌, ಜನಾರ್ದನ ತೋನ್ಸೆ, ಕುಸುಮ ರವೀಂದ್ರ, ನಾಗರಾಜ ಕುಂದರ್‌, ಶೋಭಾ ಡಿ. ನಾಯಕ್‌, ಯಶೋಧಾ ಆಚಾರ್ಯ, ಬಿ. ಅಫೆjಲ್‌ ಸಾಹೇಬ್‌, ಮಹೇಶ್‌ ಸಾಲ್ಯಾನ್‌, ನಿರ್ದೇಶಕರುಗಳಾದ ನಾರಾಯಣ ಎಸ್‌. ಬಂಗೇರ, ಟಿ. ಗೋಪಾಲಕೃಷ್ಣ ಹೆಗ್ಡೆ, ಹ್ಯೂಬರ್ಟ್‌ ಸಂತಾನ್‌ ಲೂವಿಸ್‌, ರಾಘವೇಂದ್ರ ಪ್ರಸಾದ್‌, ಉಮೇಶ್‌ ಅಮೀನ್‌, ಪುರುಷೋತ್ತಮ ಸಾಲ್ಯಾನ್‌, ಶ್ಯಾಮ ಎನ್‌. ಹರೀಶ್‌ ಶೆಟ್ಟಿ, , ಲೇನಿ ಫೆರ್ನಾಂಡಿಸ್‌, ಲತಾ ಪಿ.ರಾವ್‌, ಲಕ್ಷ್ಮೀ ಉಪಸ್ಥಿತರಿದ್ದರು.

ಚಿಂತಕ ದಾಮೋದರ ಶರ್ಮ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next