Advertisement

ಪ್ರತಿಯೊಬ್ಬರು ಸಸಿ ನೆಟ್ಟು ಪೋಷಣೆ ಮಾಡಿ: ಬಾಳನಗೌಡ

05:34 PM Jun 06, 2019 | Naveen |

ಕೆಂಭಾವಿ: ಜಗತ್ತಿನಲ್ಲಿ ಮಾನವ ಕಳ್ಳಸಾಗಣೆ, ಅಕ್ರಮ ಶಸ್ತ್ರಾಸ್ತ್ರ, ಅಕ್ರಮ ನುಸುಳುವಿಕೆ ಹಾಗೂ ಮರಗಳ ಮಾರಣ ಹೋಮಗಳಿಂದ ಜಾಗತಿಕ ಸಮಸ್ಯೆ ಹೆಚ್ಚಾಗುತ್ತಿದ್ದು, ಇದರಿಂದ ನಮ್ಮ ಪರಿಸರ ಮೇಲೆ ಹೆಚ್ಚಿನ ದುಷ್ಪಾರಿಣಾಮ ಬೀರಲಿದೆ ಎಂದು ಪಿಎಸ್‌ಐ ಬಾಳನಗೌಡ ಕಳವಳ ವ್ಯಕ್ತಪಡಿಸಿದರು.

Advertisement

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪಟ್ಟಣದಲ್ಲಿ ಬುಧವಾರ ಚಂಪಾ ಆರ್ಟ್‌ ಗ್ಯಾಲರಿ ವತಿಯಿಂದ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ನಾಡಿನಲ್ಲಿ ಭೀಕರ ಬರ ಆವರಿಸಿ ಬಿಸಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿ ಗಿಡಮರಗಳ ಬೆಳೆಸುವಿಕೆ ಸಂಪೂರ್ಣ ಕಮ್ಮಿಯಾಗಿರುವುದು. ಸುತ್ತಮುತ್ತಲಿನ ಪರಿಸರ ಉತ್ತಮವಾಗಿರಬೇಕಾದರೆ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಗಿಡ ನೆಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಸಂಜೀವರಾವ್‌ ಕುಲಕರ್ಣಿ ಮಾತನಾಡಿ, ಪರಿಸರ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.

ನಂತರ ಸಂಜೀವ ನಗರದ ಆಂಜನೇಯ ದೇವಸ್ಥಾನ ಹಾಗೂ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ನೂರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.

Advertisement

ಕಾರ್ಯಕ್ರಮದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪವನ ಕುಲಕರ್ಣಿ, ಚಂಪಾ ಆರ್ಟ್‌ ಗ್ಯಾಲರಿ ಸಂಚಾಲಕ ಹಾಗೂ ಕಲಾವಿದ ಹಳ್ಳೇರಾವ ಕುಲಕರ್ಣಿ, ಮುಖ್ಯಗುರು ಅಂಬಣ್ಣ ತಳವಾರ, ಗಿಡಮೂಲಿಕೆ ತಜ್ಞ ಬಸಣ್ಣ ಕಲಕೇರಿ, ನಿವೃತ್ತ ಶಿಕ್ಷಕ ಭೀಮನಗೌಡ, ಶಿಕ್ಷಕ ಸಿದ್ರಾಮಪ್ಪ ಬಿರಾದಾರ, ಸಾಹಿತಿ ವೀರಣ್ಣ ಕಲಕೇರಿ, ಕೃಷಿ ಪದವೀಧರ ಸಂಪತ ಕುಲಕರ್ಣಿ, ಬಸವರಾಜ ಕಾಡಮಗೇರಿ, ಸಿದ್ದಣ್ಣ ಕಾಚಾಪೂರ, ಪ್ರಭು ಮನಗೂಳಿ, ರಾಘವೇಂದ್ರ ನಾಡಿಗೇರ, ಶಾಮಸುಂದರ ನಾಡಿಗೇರ, ಅಮರ ಪ್ರಸಾದ, ಮಲಕಪ್ಪ ದುಮ್ಮದ್ರಿ ಸೇರಿದಂತೆ ಅನೇಕರು ಇದ್ದರು. ಗುರುರಾಜ ಕುಲಕರ್ಣಿ ನಿರೂಪಿಸಿದರು. ವಿಜಯಾಚಾರ್ಯ ಪುರೋಹಿತ ಸ್ವಾಗತಿಸಿದರು. ಪ್ರಮೋದ ಕುಲಕರ್ಣಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next