Advertisement

ಮಠಗಳಿಂದ ತ್ರಿವಿಧ ದಾಸೋಹ

10:43 AM Jul 28, 2019 | Team Udayavani |

ಕೆಂಭಾವಿ: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದ್ದು, ಪ್ರತಿಯೊಬ್ಬರ ಸಾಧನೆ ಹಿಂದೆ ಒಬ್ಬ ಗುರುವಿನ ಆಶೀರ್ವಾದ ಅವರಿಗೆ ಅರಿವಿಲ್ಲದಂತೆ ಆಗುತ್ತದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

Advertisement

ಪಟ್ಟಣದ ಹಿರೇಮಠದಲ್ಲಿ ಶನಿವಾರ ಶ್ರೀ ಗುರು ಕಾಂತೇಶ್ವರ ಜನಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಜರುಗಿದ ಮಾಸಿಕ ಶಿವಾನುಭವ ಚಿಂತನದ 4ನೇ ವಾರ್ಷಿಕೋತ್ಸವ, ಶ್ರೀ ಗುರು ಕಾಂತೇಶ್ವರ ಭಕ್ತಿಗೀತೆಗಳ ಧ್ವನಿಸುರುಳಿ ಹಾಗೂ ಪುಸ್ತಕ ಬಿಡುಗಡೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಶ್ರೀ ಗುರು ಕಾಂತೇಶ್ವರ ಕೃಪಾ ಭೂಷಣ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂ ಸಂಪ್ರದಾಯದ ಮಠ ಮಾನ್ಯಗಳು ತ್ರಿವಿಧ ದಾಸೋಹಕ್ಕೆ ಪ್ರಸಿದ್ಧಿಯಾಗಿವೆ. ಮಠಗಳು ನಿಸ್ವಾರ್ಥ ಸೇವೆ ಸಲ್ಲಿಸುವ ಶ್ರದ್ಧಾ ಕೇಂದ್ರಗಳಾಗಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಅವರನ್ನು ಹುರಿದುಂಬಿಸುವ ಕೆಲಸವನ್ನು ಹಿರೇಮಠದ ಪೂಜ್ಯರು ಮಾಡುತ್ತಿರುವುದು ಶ್ಲಾಘನೀಯ. ತನು, ಮನ, ಧನದಿಂದ ಮಠಕ್ಕೆ ಸೇವೆ ಮಾಡಿದಾಗ ಮಾತ್ರ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಪ್ರಕಾಶ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಜಾನಪದ ಸಾಹಿತಿಗಳಾದ ಸಿಂದಗಿಯ ಬಿ.ಎನ್‌. ಪಾಟೀಲ ಕೃತಿ ಬಿಡುಗಡೆ ಮಾಡಿ ಪರಿಚಯಿಸಿದರು. ಹಿರಿಯ ಸಾಹಿತಿ ಲಿಂಗನಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೃತಿ ಸಂಪಾದಕ ನಿಂಗನಗೌಡ ದೇಸಾಯಿ ಪರಸನಹಳ್ಳಿ ಕೃತಿ ಕುರಿತು ಮಾತನಾಡಿದರು. ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬೀರಪ್ಪ ಪೂಜಾರಿ ಶರಣರು, ಕೊಪ್ಪಳದ ಮಹೇಶ ಮನ್ನಾಪುರ, ಸಾಯಬಣ್ಣ ಪುರ್ಲೆ, ಶಿವಮಹಾಂತ ಚಂದಾಪುರ, ಬಸವರಾಜ ಚಿಂಚೋಳಿ ಸೇರಿದಂತೆ ಹಲವರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಜಯಕುಮಾರ ಸೋನಾರೆ ಬೀದರ (ಜಾನಪದ ಕ್ಷೇತ್ರ), ಅಶೋಕ ಚೌದ್ರಿ ಶಹಾಪುರ (ಸಾಹಿತ್ಯ), ಶಿವಶರಣಪ್ಪ ಶಿರೂರ ಯಾಳಗಿ (ಶಿಕ್ಷಣ), ಮಹಿಪಾಲರೆಡ್ಡಿ ಡಿಗ್ಗಾವಿ (ಸಮಾಜ ಸೇವೆ), ಡಿ.ಸಿ.ಪಾಟೀಲ (ಪತ್ರಿಕೋದ್ಯಮ), ಶರಣಕುಮಾರ ಯಾಳಗಿ (ಸಂಗೀತ) ಅವರನ್ನು ಗೌರವಿಸಲಾಯಿತು.

Advertisement

ಬಸವರಾಜ ಬಂಟನೂರ ಹಾಗೂ ಯಮನೇಶ ಯಾಳಗಿ ಸಂಗೀತ ಸೇವೆ ನಡೆಸಿಕೊಟ್ಟರು. ಡಾ| ಯಂಕನಗೌಡ ಪಾಟೀಲ ನಿರೂಪಿಸಿದರು. ಮಡಿವಾಳಪ್ಪ ಪಾಟೀಲ ಸ್ವಾಗತಿಸಿದರು. ರಾಜಶೇಖರ ಹಿರೇಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next