Advertisement

ಧಾರ್ಮಿಕ ಕಾರ್ಯಕ್ರಮದಿಂದ ನೆಮ್ಮದಿ

04:30 PM Jul 28, 2019 | Naveen |

ಕೆಂಭಾವಿ: ಮಠ ಮಾನ್ಯ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ನಾಲವಾರ ಕೋರಿಸಿದ್ಧೇಶ್ವರ ಮಠದ ಡಾ| ಸಿದ್ಧತೋಟೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ನಡೆದ ನೂತನ ಶಿಖರ ಕಳಸಾರೋಹಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಗವಂತನನ್ನು ಕಾಣಲು ನಾವು ಗುರುವಿನ ಮೊರೆ ಹೋಗಬೇಕು. ಅಂದಾಗ ಮಾತ್ರ ಭಗವಂತ ಯಾವುದೋ ರೂಪದಲ್ಲಿ ಕಾಣಬಹುದು ಎಂದರು.

ಲಿಂಗನಗೌಡ ಮಾಲಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಕೋರಿಸಿದ್ಧೇಶ್ವರ ಮಠದ ಬೀರಪ್ಪ ಶರಣರು, ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು, ಕರಡಕಲ್ ಮಠದ ಶಾಂತರುದ್ರಮುನಿ ಸ್ವಾಮಿಗಳು, ಮುದನೂರು ಮಠದ ಸಿದ್ಧಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರು, ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್‌ ಪಾಟೀಲ, ಮಹಿಪಾಲರೆಡ್ಡಿ ಡಿಗ್ಗಾವಿ, ಚಂದ್ರಶೇಖರಯ್ಯ ಚಿಕಮಠ, ರಾಜಶೇಖರ ಹಿರೇಮಠ, ಅರುಣೋದಯ ಸೊನ್ನದ, ಬಾಪುಗೌಡ ಪೊಲೀಸ್‌ ಪಾಟೀಲ, ಗುರು ಕುಂಬಾರ, ಪರುಶುರಾಮ ಹಿರೇಕುರುಬರ, ಶರಣಪ್ಪ ಯಾಳಗಿ ಇದ್ದರು. ಯಂಕನಗೌಡ ಪಾಟೀಲ ನಿರೂಪಿಸಿದರು. ಬಸವರಾಜ ಪ್ರಧಾನಿ ಸ್ವಾಗತಿಸಿದರು. ಮೋಹನರಡ್ಡಿ ಡಿಗ್ಗಾವಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next