Advertisement

ಮಾಧ್ಯಮ ಕ್ಷೇತ್ರ ಬೆಳೆಯಲು ಸಹಕಾರ ಅಗತ್ಯ: ಶಿವಶರಣಪ್ಪ

01:14 PM Jul 20, 2019 | Naveen |

ಕೆಂಭಾವಿ: ಪತ್ರಿಕೆಗಳು ಅಥವಾ ಟಿವಿ ಮಾಧ್ಯಮಗಳು ಕೇವಲ ರಾಜಕೀಯ ಸುದ್ದಿಗಳನ್ನು ಹೊತ್ತೂಯ್ಯುವ ಸಾಧನವಲ್ಲ. ಬದಲಾಗಿ ಕಲೆ, ಸಾಹಿತ್ಯ, ಸಂಸ್ಕೃತಿ, ವಾಣಿಜ್ಯ, ಕ್ರೀಡೆ, ಭಾಷಾ ಸಮೃದ್ಧತೆಯನ್ನು ಜನಸಾಮಾನ್ಯರಿಗೂ ತಿಳಿಸುವ ಒಂದು ಬೃಹತ್‌ ಸಾಧನವಾಗಿವೆ ಎಂದು ಕನ್ನಡ ಪಂಡಿತ ಹಾಗೂ ಶಿಕ್ಷಕ ಶಿವಶರಣಪ್ಪ ಶಿರೂರ ಹೇಳಿದರು.

Advertisement

ಯಾಳಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಸುರಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ದಿನನಿತ್ಯ ಪತ್ರಿಕೆಗಳು ಓದುವುದರಿಂದ ನಮಗೆ ಸೂಕ್ತ ಮಾರ್ಗದರ್ಶನ, ಭಾಷಾ ಕೌಶಲ್ಯದ ಜೊತೆಗೆ ದೇಶದ ಪ್ರತಿಯೊಂದು ಸುದ್ದಿಗಳನ್ನು ಕುಳಿತಲ್ಲಿ ತಿಳಿದುಕೊಳ್ಳುವ ಸರಳ ಉಪಾಯವನ್ನು ಮಾಧ್ಯಮಗಳು ಮಾಡುತ್ತಿವೆ. ಪತ್ರಿಕೆಗಳು ಓದುವುದರಿಂದ ಜನ ಜಾಗೃತಿ, ಆಹಾರ, ಆರೋಗ್ಯ, ಯೋಗ, ಸರ್ಕಾರದ ಸೌಲಭ್ಯಗಳು, ರಾಶಿಭವಿಷ್ಯ ಸೇರಿದಂತೆ ಹಲವಾರು ವಿಷಯಗಳ ಕುರಿತು ನಮಗೆ ಜ್ಞಾನ ಮೂಡುತ್ತದೆ ಎಂದರು.

ಇಂದಿನ ದಿನಗಳಲ್ಲಿ ಪತ್ರಿಕಾ ವರದಿಗಾರರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಸಂವಿಧಾನದ ನಾಲ್ಕನೇ ಅಂಗವೆಂದು ಕರೆಸಿಕೊಳ್ಳುವ ಮಾಧ್ಯಮ ಕ್ಷೇತ್ರವು ಮತ್ತಷ್ಟು ಮುನ್ನುಗ್ಗಬೇಕಾದರೆ ಸಮಾಜದ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಯುಡಬ್ಲೂ ್ಯಜೆ ರಾಜ್ಯ ಕಾರ್ಯದರ್ಶಿ ಸಂಜೀವರಾವ್‌ ಕುಲಕರ್ಣಿ, ವರದಿ ನೀಡುವ ಪ್ರತಿಯೊಬ್ಬ ವರದಿಗಾರರ ಜೀವನ ಸೂಕ್ಷ್ಮತೆಯಿಂದ ಕೂಡಿದ್ದು, ಇಂದಿನ ಕಾಲದಲ್ಲಿ ಮಾಧ್ಯಮ ಕ್ಷೇತ್ರ ಅತ್ಯಂತ ಸೂಕ್ಷ್ಮತೆಯಿಂದ ತನ್ನ ಕಾರ್ಯ ಮಾಡುತ್ತಿದೆ. ಪ್ರತಿಯೊಂದು ಅಭಿವೃದ್ಧಿ ಕೆಲಸವಾಗಬೇಕಾದರೆ ರಾಜಕೀಯ ಮುಖಂಡರುಗಳನ್ನು ಹಾಗೂ ಅಧಿಕಾರಿಗಳನ್ನು ಬಡಿದೆಬ್ಬಿಸುವ ಕಾರ್ಯ ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳು ಮಾಡುತ್ತಿರುವುದು ಅತ್ಯಂತ ಹೆಮ್ಮೆ ವಿಷಯ ಎಂದು ತಿಳಿಸಿದರು.

Advertisement

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪವನ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವಿಜಯಾಚಾರ್ಯ ಪುರೋಹಿತ ಪ್ರಾಸ್ತಾವಿಕ ಮಾತನಾಡಿದರು. ನಂತರ ಜಿಲ್ಲೆ ಹಿರಿಯ ವರದಿಗಾರ ಗುಂಡಭಟ್ಟ ಜೋಶಿ, ಸಮಯ ಟಿವಿ ಜಿಲ್ಲಾ ವರದಿಗಾರ ಬಸನಗೌಡ ಪಾಟೀಲ, ಗ್ರಾಮೀಣ ಪ್ರತಿಭೆ ಶರಣು ಕಂಬಾರ ಹಾಗೂ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು. ಕೂಡಲಗಿ ಬಾಬಾ ಮಹಾರಾಜ ಮಠದ ಶ್ರೀ ಉಮಾಕಾಂತ ಸಿದ್ಧರಾಜ ಮಹಾರಾಜ ಅವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಕೆಜೆಯು ಜಿಲ್ಲಾಧ್ಯಕ್ಷ ಡಿ.ಸಿ. ಪಾಟೀಲ, ಶಾಲಾ ಮುಖ್ಯಗುರು ವಿಠuಲ ಚೌಹ್ಹಾಣ, ಬೀರಪ್ಪ, ಮುಖಂಡರಾದ ಅಮೀನರೆಡ್ಡಿ ಹೊಸಮನಿ, ಶ್ರೀನಿವಾಸರೆಡ್ಡಿ ಮಾಲಿಪಾಟೀಲ, ಹಣಮಂತ್ರಾಯ ಮಾಣಸುಣಗಿ, ಮಲ್ಲನಗೌಡ ಮಾಲಿಪಾಟೀಲ, ಕರವೇ ಮುಖಂಡರಾದ ರಾಮನಗೌಡ ಹೊಸಮನಿ, ಕರವೇ (ಶಿವರಾಮೇಗೌಡ ಬಣ)ದ ಜಿಲ್ಲಾಧ್ಯಕ್ಷ ಬಸವರಾಜ ಅಂಗಡಿ, ವಿಶ್ವನಾಥರೆಡ್ಡಿ, ಡಿಎಸ್‌ಎಸ್‌ ಮುಖಂಡ ಶಿವಶರಣ ನಾಗರೆಡ್ಡಿ, ನಿಂಗಣ್ಣ ಹಡಪದ, ಭಾಸ್ಕರಗೌಡ, ಪತ್ರಕರ್ತರಾದ ಹಳ್ಳೇರಾವ ಕುಲಕರ್ಣಿ, ಗುರುರಾಜ ಕುಲಕರ್ಣಿ, ಇಲಿಯಾಸ ಪಟೇಲ, ರವಿರಾಜ ಕಂದಳ್ಳಿ, ರೇವಣಸಿದ್ದಯ್ಯ ಮಠ, ದುರ್ಗಾ ಪ್ರಸಾದ, ಪವನ ಕುಲಕರ್ಣಿ ಇದ್ದರು. ಭಾಗ್ಯಶ್ರೀ ಸಜ್ಜನ್‌ ನಿರೂಪಿಸಿದರು. ಮಾರುತಿ ಮೊಕಾಶಿ ಸ್ವಾಗತಿಸಿದರು. ತಾಲೂಕು ಪತ್ರಕರ್ತರ ಸಂಘದ ಖಜಾಂಚಿ ವೀರೇಶರೆಡ್ಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next