Advertisement
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಯಾಚಾರ್ಯ ಪುರೋಹಿತ, ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ತಮ್ಮ ಚಾಕಚಕ್ಯತೆಯಿಂದ ಆಡಳಿತ ನಡೆಸಿ ನಾಡಿನ ಇಡೀ ಹಿಂದೂ ಸಮಾಜಕ್ಕೆ ಗುರುಗಳಾಗಿದ್ದ ವ್ಯಾಸರಾಜರ ವೃಂದಾವನವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದು ಅತ್ಯಂತ ಖಂಡನೀಯ. ದಾಸಶ್ರೇಷ್ಠರು ಎಂದೇ ಕರೆಸಿಕೊಳ್ಳುವ ಪುರಂದರ ದಾಸರಿಗೆ ದೀಕ್ಷೆ ನೀಡಿದ್ದಲ್ಲದೆ ನಾಡಿನ ಪ್ರಖ್ಯಾತ ದಾಸ ಪರಂಪರೆಯಲ್ಲಿ ಬರುವ ಕನಕದಾಸರಿಗೆ ಹಾಗೂ ವಿಜಯನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿ ಉತ್ತಮ ರಾಜಕೀಯದ ಜತೆಗೆ ಧಾರ್ಮಿಕ ಭಾವನೆಗಳನ್ನು ನಾಡಿನ ಅನೇಕ ನಾಸ್ತಿಕ ಜನರಿಗೆ ಬಿತ್ತಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂತಹ ಯತಿಗಳ ಮೂಲ ವೃಂದಾವನ ಧ್ವಂಸ ಮಾಡಿ ಹೇಯ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸಬೇಕು. ನವ ವೃಂದಾವನಕ್ಕೆ ವಿಶೇಷ ಭದ್ರತೆ ಒದಗಿಸಿ ಮುಂದೆ ಇಂತಹ ಕೃತ್ಯವಾಗದಂತೆ ಮುನ್ನೆಚ್ಚೆರಿಕೆ ವಹಿಸಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂಬ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಉಪತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು.
Advertisement
ಮೂಲ ವೃಂದಾವನ ಧ್ವಂಸ ಖಂಡಿಸಿ ಪ್ರತಿಭಟನೆ
12:48 PM Jul 19, 2019 | Naveen |
Advertisement
Udayavani is now on Telegram. Click here to join our channel and stay updated with the latest news.