Advertisement

ಕೆಲಸೂರು ಸೀಲ್‌ಡೌನ್‌: ಶಾಸಕರ ಭೇಟಿ

05:08 AM Jul 09, 2020 | Lakshmi GovindaRaj |

ಗುಂಡ್ಲುಪೇಟೆ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋವಿಡ್‌ 19 ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಸೀಲ್‌ ಡೌನ್‌ಗೆ ಒಳಗಾಗಿರುವ ತಾಲೂಕಿನ ಕೆಲಸೂರು ಗ್ರಾಮಕ್ಕೆ ಶಾಸಕ ನಿರಂಜನಕುಮಾರ್‌ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರಿಗೆ  ಧೈರ್ಯ ತುಂಬಿದರು. ಬಳಿಕ ಸೀಲ್‌ಡೌನ್‌ ಬೀದಿಯಲ್ಲಿನ ಗ್ರಾಮಸ್ಥರೊಂದಿಗೆ ಮಾತನಾಡಿ, ಕೋವಿಡ್‌ 19 ಬಗ್ಗೆ ಆತಂಕ ಬೇಡ. ಸಮರ್ಪಕ ಮುನ್ನೆಚ್ಚರಿಕೆ, ಅನಗತ್ಯವಾಗಿ ಮನೆಯಿಂದ ಹೊರಬರದಿರುವುದು,

Advertisement

ಮಾಸ್ಕ್ ಧರಿಸಿ ಸಾಮಾಜಿಕ  ಅಂತರ ಕಾಪಾಡಿಕೊಳ್ಳುವ ಮೂಲಕ ಸೋಂಕಿನಿಂದ ದೂರವಿರಲು ಸಾಧ್ಯವಿದೆ. ನಿರ್ಲಕ್ಷ್ಯ ಮಾಡದೇ ತಾಲೂಕು ಆಡಳಿತದೊಂದಿಗೆ ಸಹಕಾರ ನೀಡಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸೀಲ್‌ಡೌನ್‌ ಪ್ರದೇಶದ ಜನತೆಗೆ  ಅನುಕೂಲವಾಗುವಂತೆ ಮೂಲ ಸೌಕರ್ಯ ಗಳನ್ನು ಒದಗಿಸುವಂತೆ ಗ್ರಾಮ ಪಂಚಾ ಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹಂಗಳ ಪ್ರಣಯ್‌ ಮತ್ತು ವಿವಿಧ ಘಟಕಗಳ  ಪದಾಧಿಕಾರಿಗಳು ಇದ್ದರು.

ಸಾರ್ವಜನಿಕ ಸ್ಥಳದಲ್ಲಿ ಸ್ಯಾನಿಟೈಸ್‌ ಸಿಂಪಡಣೆ: ಗುಂಡ್ಲುಪೇಟೆ ತಾಲೂಕಲ್ಲಿ ಕೋವಿಡ್‌ 19 ಸೋಂಕಿತರು ಹೆಚ್ಚು ದೃಢಪಟ್ಟಿರುವ ಕಾರಣ ಪಟ್ಟಣದ ಸಾರ್ವಜನಿಕರ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಡಳಿತದಿಂದ  ಸ್ಯಾನಿಟೈಸರ್‌ ಸಿಂಪಡಿಸಲಾಯಿತು. ಪಟ್ಟಣದ ತಾಲೂಕು ಕಚೇರಿ, ತಾಪಂ ಕಚೇರಿ, ಕೃಷಿ ಇಲಾಖೆ ಕಚೇರಿ, ಬಿಇಒ ಕಚೇರಿ, ಪುರಸಭೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಸಾರಿಗೆ ಬಸ್‌ ನಿಲ್ದಾಣಗಳಿಗೆ ಅಗ್ನಿಶಾಮಕ ದಳದ  ಸಿಬ್ಬಂದಿ ನೆರವಿನಿಂದ ಸ್ಯಾನಿಟೈಸರ್‌ ಸಿಂಪಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next