Advertisement
ಕಾಶಿಪಟ್ಣದ ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರವಿವಾರ ಜರಗಿದ ನೂತನ ಧ್ವಜಸ್ತಂಭ-ರಥ ಸಮರ್ಪಣೆ, ವರ್ಷಾವಧಿ ಜಾತ್ರೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಪ್ರಧಾನ ಅರ್ಚಕ, ಆಡಳಿತ ಮಂಡಳಿ ಮೊಕ್ತೇಸರ ಕೆ. ಅನಂತ ಆಸ್ರಣ್ಣ ಮಾತನಾಡಿ, ಕ್ಷೇತ್ರ ಇಷ್ಟೊಂದು ಅಭಿವೃದ್ಧಿಯಾಗಲು ಸಮಿತಿ ಹಾಗೂ ದಾನಿಗಳ ಸಹಕಾರವಿದೆ. ಮುಂಭಾಗದಲ್ಲಿ ಗೋಪುರ ಆಗಬೇಕಿದ್ದು, ಅಗತ್ಯಬಿದ್ದರೆ ತನ್ನ ಜಾಗ ಬಿಟ್ಟುಕೊಡಲು ಸಿದ್ಧರಿರುವುದಾಗಿ ತಿಳಿಸಿದರು.
Related Articles
ದೇವಸ್ಥಾನದ ಅಭಿವೃದ್ಧಿಯಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದ ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್, ಶ್ರೀ ಮಹಾಗಣಪತಿ ದೇವರ ಮೂರ್ತಿಗೆ ಬೆಳ್ಳಿಕವಚ ಸಮರ್ಪಿಸಿದ ಶಶಿ ಅಮೀನ್, ಶ್ರೀ ದುರ್ಗಾಪರಮೇಶ್ವರಿ ದೇವಿಯ ಮೂರ್ತಿಗೆ ಬೆಳ್ಳಿ ಕವಚ ಸಮರ್ಪಿಸಿದ ಭಂಡಸಾಲೆ ಕುಟುಂಬಸ್ಥರ ಪರವಾಗಿ ಬಿ. ಸಂಜೀವ ಶೆಟ್ಟಿ, ಧ್ವಜಸ್ತಂಭಕ್ಕೆ ಮರವನ್ನು ನೀಡಿದ ಜಿನ್ನಪ್ಪ ಪೂಜಾರಿ ಆರಂಬೋಡಿ, ರಥ ನಿರ್ಮಾಣದ ಶಿಲ್ಪಿ ಪ್ರಶಾಂತ್ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ರಥ ನಿರ್ಮಾಣಕ್ಕೆ ಮರ ನೀಡಿದವರನ್ನು, 10 ಸಾವಿರ ರೂ. ಮೇಲ್ಪಟ್ಟು ದೇಣಿಗೆ ನೀಡಿದವರನ್ನು ಗೌರವಿಸಲಾಯಿತು. ಇದಕ್ಕೂ ಮೊದಲು ಧ್ವಜಪ್ರತಿಷ್ಠೆ, ಕಲಶಾಭಿಷೇಕ ಜರಗಿತು.
Advertisement
ಮೊಕ್ತೇಸರ ಎಸ್. ಶಂಕರ ಭಟ್ ಬಾಲ್ಯ ಪ್ರಾಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಜೈನ್ ಕೊಕ್ರಾಡಿ ನಿರ್ವಹಿಸಿ, ಮೊಕ್ತೇಸರ ಸತೀಶ್ ಕೆ. ಕಾಶಿಪಟ್ಣ ವಂದಿಸಿದರು. ಮೊಕ್ತೇಸರರು ಸಹಕರಿಸಿದರು. ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಬಯಲಾಟ ಜರಗಿತು.