ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್‌ನ ನೈರ್ಮಲ್ಯ ಕಾರ್ಮಿಕ ಮತ್ತು ಅವರ ಕುಟುಂಬಕ್ಕೆ ಸೋಮವಾರ ತಮ್ಮ ದೆಹಲಿ ನಿವಾಸದಲ್ಲಿ ಆತಿಥ್ಯ ನೀಡಿ ಅವರೊಂದಿಗೆ ಊಟವನ್ನು ಮಾಡಿದ್ದಾರೆ.
ಗುಜರಾತ್‌ನ ನೈರ್ಮಲ್ಯ ಕಾರ್ಯಕರ್ತ ಹರ್ಷ ಸೋಲಂಕಿ ತನ್ನ ಕುಟುಂಬದೊಂದಿಗೆ ದೆಹಲಿಯ ಸರಕಾರಿ ಶಾಲೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿದರು. ”ಇಷ್ಟು ಸೌಲಭ್ಯಗಳಿರುವ ಸರ್ಕಾರಿ ಶಾಲೆಯನ್ನು ಹಿಂದೆಂದೂ ನೋಡಿರಲಿಲ್ಲ.ಇದು ಗುಜರಾತ್‌ನಲ್ಲೂ ಆಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು” ಎಂದು ಸೋಲಂಕಿ ಹೇಳಿದರು.
ಇದನ್ನೂ ಓದಿ : ಹಿಂದುತ್ವ ಎನ್ನುವುದು ಧರ್ಮವಲ್ಲ ಅದು ಜೀವನ ವಿಧಾನ: ಮೋಹನ್ ಭಾಗವತ್
ಸೋಲಂಕಿ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಕೇಜ್ರಿವಾಲ್ ಅವರಿಗೆ ನೀಡಿದರು.ಅಹಮದಾಬಾದ್‌ನಲ್ಲಿ ಭಾನುವಾರ ಆಮ್ ಆದ್ಮಿ ಪಕ್ಷದ ಟೌನ್ ಹಾಲ್‌ನಲ್ಲಿ ಮುಖ್ಯವಾಗಿ ದಲಿತ ಸಮುದಾಯದ ನೈರ್ಮಲ್ಯ ಕಾರ್ಮಿಕರೊಂದಿಗೆ ಸಂವಾದ ನಡೆಸಿದಾಗ ಕೇಜ್ರಿವಾಲ್ ಅವರು ಸೋಲಂಕಿ ಅವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದರು.
ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲಿ ಆಪ್ ಕಟ್ಟಿ ಬೆಳೆಸಲು ಕೇಜ್ರಿವಾಲ್ ಭಾರಿ ರಾಜಕೀಯ ಚಟುವಟಿಕೆ ಗಳನ್ನು ನಡೆಸುತ್ತಿದ್ದು, ಜನಸಾಮಾನ್ಯರೊಂದಿಗೆ ಬೆರೆಯುತ್ತಿದ್ದಾರೆ.