Advertisement
ಬುಧವಾರ ರಾತ್ರಿ ದೂರವಾಣಿ ಮೂಲಕ ಕೆಲವು ನಾಯಕರ ಜತೆ ಸಮಾಲೋಚನೆ ಸಹ ನಡೆಸಿದ್ದು, ದೆಹಲಿ, ಪಂಜಾಬ್ ನಂತರ ಹರಿ ಯಾಣ ಮತ್ತು ಗುಜರಾತ್‌ನಲ್ಲಿ ಪಕ್ಷಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಕರ್ನಾಟಕದಲ್ಲಿಯೂ ಪಕ್ಷ ಸಂಘ ಟಿಸಲು ನಿರ್ಧರಿಸಲಾಗಿದೆ. ಹೀಗಾಗಿ, ನಮ್ಮ ಜತೆ ಕೈಜೋಡಿಸಿ ಎಂದು ಆಹ್ವಾನ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
Related Articles
Advertisement
ಈ ಮೊದಲು ಕಾಂಗ್ರೆಸ್‌ನತ್ತ ಮುಖ ಮಾಡಿದ್ದ ನಾಯಕರು ಪಂಚರಾಜ್ಯಗಳ ಚುನಾವಣೆ ನಂತರ ಇದೀಗ ಆಮ್ ಆದ್ಮಿ ಪಕ್ಷದತ್ತ ಒಲವು ಹೊಂದಿದ್ದಾರೆಂದು ಹೇಳಲಾಗಿದ್ದು,ಈಗಾಗಲೇ ಕಾಂಗ್ರೆಸ್‌ನ ಎಸ್.ಆರ್ .ಪಾಟೀಲ್, ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಸೇರಿ ಹಲವು ನಾಯಕರ ಜತೆ ಆಪ್ ಮುಖಂಡರು ಮಾತನಾಡಿದ್ದು ಕೇಜ್ರಿವಾಲ್ ಸಹ ಅವರ ಜತೆ ಚರ್ಚಿಸಿದ್ದಾರೆಂದು ಹೇಳಲಾಗಿದೆ.
ಕಾಂಗ್ರೆಸ್‌ನ ಬಿ.ಆರ್.ಪಾಟೀಲ್, ಜೆಡಿಎಸ್ ನ ವೈಎಸ್‌ವಿ ದತ್ತಾ, ಶಿವಲಿಂಗೇಗೌಡ. ಬಿಜೆಪಿಯ ಎಚ್ .ಸಿ.ವಿಜಯಶಂಕರ್ ಅವರನ್ನು ಸೆಳೆಯುವ ಬಗ್ಗೆಯೂ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ.
ಮೂರೂ ಪಕ್ಷಗಳಲ್ಲಿ ಆತಂಕ: ಆಮ್ ಆದ್ಮಿ ಪಕ್ಷದ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲೂ ಕುತೂಹಲವಿದ್ದು ರಾಜ್ಯದಲ್ಲಿ ಆ ಪಕ್ಷಕ್ಕೆ ಯಾವ ರೀತಿಯಲ್ಲಿ ಸ್ಪಂದನೆ ದೊರೆಯಬಹುದು, ಅದರಿಂದ ನಮಗಾಗಬಹುದಾದ ಲಾಭ-ನಷ್ಟ ಏನು ಎಂಬ ಬಗ್ಗೆಯೂ ಮೂರೂ ಪಕ್ಷಗಳು ತಲೆಕೆಡಿಸಿಕೊಂಡಿವೆ. ರೈತ ಸಂಘಟನೆಗಳ ಜತೆಗೂಡಿ ಆಮ್ ಆದ್ಮಿ ಪಕ್ಷ ಚುನಾವಣೆ ಎದುರಿಸುವುದಾಗಿ ಘೊಷಣೆ ಮಾಡಿರುವುದರಿಂದ ಸಹಜವಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಆತಂಕ ಶುರುವಾಗಿದೆ.
-ಎಸ್.ಲಕ್ಷ್ಮಿನಾರಾಯಣ