Advertisement

ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌ ಫೈನಲ್‌ಗೆ ಕೀ ನಿಶಿಕೊರಿ

01:16 PM Jan 05, 2019 | Team Udayavani |

ಬ್ರಿಸ್ಬೇನ್‌: “ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌’ ಟೆನಿಸ್‌ ಕೂಟದಲ್ಲಿ ಜಪಾನ್‌ ಮಿಶ್ರ ಫ‌ಲ ಅನುಭವಿಸಿದೆ. ಪುರುಷರ ಸಿಂಗಲ್ಸ್‌ನಲ್ಲಿ ಕೀ ನಿಶಿಕೊರಿ ಫೈನಲ್‌ ಪ್ರವೇಶಿಸಿದರೆ, ವನಿತಾ ವಿಭಾಗದಲ್ಲಿ ನವೊಮಿ ಒಸಾಕಾ ಸೋಲನುಭವಿಸಿದ್ದಾರೆ.

Advertisement

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ನಿಶಿಕೋರಿ ಫ್ರಾನ್ಸ್‌ನ ಜೆರಿಮಿ ಚಾರ್ಡಿ ವಿರುದ್ಧ 6-2, 6-2 ಅಂತರದ ಸುಲಭ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಏರಿದರು. ಇದು 3 ವರ್ಷಗಳಲ್ಲಿ ನಿಶಿಕೊರಿ ಕಾಣುತ್ತಿರುವ 2ನೇ ಬ್ರಿಸ್ಬೇನ್‌ ಫೈನಲ್‌.

ಕ್ವಾರ್ಟರ್‌ ಫೈನಲ್‌ನಲ್ಲಿ ಗ್ರಿಗರ್‌ ಡಿಮಿಟ್ರೋವ್‌ ವಿರುದ್ಧ ನೇರ ಸೆಟ್‌ಗಳ ಗೆಲುವು ದಾಖಲಿಸಿ ಸೆಮಿಗೆ ಬಂದ ನಿಶಿಕೊರಿ, ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ 5ರಲ್ಲಿ ಸ್ಥಾನ ಪಡೆಯುವ ಹಂಬಲದಲ್ಲಿದ್ದಾರೆ.

ಒಸಾಕಾ ಪರಾಭವ
ವನಿತಾ ವಿಭಾಗದ ಸೆಮಿಫೈನಲ್‌ನಲ್ಲಿ ನವೊಮಿ ಒಸಾಕಾ ಪರಾಭವಗೊಂಡರು. ಅವರನ್ನು ಉಕ್ರೇನಿನ ಲೆಸಿಯಾ ಸುರೆಂಕೊ 6-2, 6-4 ಅಂತರದಿಂದ ಹಿಮ್ಮೆಟ್ಟಿಸಿದರು.ಫೈನಲ್‌ನಲ್ಲಿ ಸುರೆಂಕೊ ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಅವರನ್ನು ಎದುರಿಸಲಿದ್ದಾರೆ. ಪ್ಲಿಸ್ಕೋವಾ ಕ್ರೊವೇಶಿಯಾದ ಡೋನಾ ವೆಕಿಕ್‌ ವಿರುದ್ಧ 6-3, 6-4ರಿಂದ ಗೆದ್ದು ಬಂದರು. 29 ವರ್ಷದ ಸುರೆಂಕೊ ಈ ಗೆಲುವಿನೊಂದಿಗೆ ವೃತ್ತಿಜೀವನದ ಅತ್ಯುತ್ತಮ ರ್‍ಯಾಂಕಿಂಗ್‌ ಸಂಪಾದಿಸಲಿದ್ದಾರೆ (24).

Advertisement

Udayavani is now on Telegram. Click here to join our channel and stay updated with the latest news.

Next