Advertisement

ಮಳೆಗಾಲದಲ್ಲೂ ಮನೆ ಸುಂದರವಾಗಿಡಿ

01:24 PM Aug 12, 2019 | Sriram |

ಮನೆ ಅಲಂಕಾರಕ್ಕಾಗಿ ಎಷ್ಟೇಲ್ಲಾ ಯೋಚನೆ ಮಾಡುತ್ತೇವೆ ಆದರೆ ಅದಕ್ಕಾಗಿಯೇ ಹಲವು ಸರಳ ಬದಲಾವಣೆಗಳನ್ನು ಮನೆ ಯಲ್ಲಿ ಮಾಡಿಕೊಂಡಲ್ಲಿ ಮನೆಯನ್ನು ಇರುವುದಕ್ಕಿಂತ ಚೆನ್ನಾಗಿ ಮಾಡಬಹುದು.ಮನೆ ಅಲಂಕಾರ,

Advertisement

1.ಮನೆಗಳಲ್ಲಿ ಕಿಟಕಿಗಳಲ್ಲಿ ಪರದೆಗಳನ್ನು ಹಾಕುವುದು ಸಾಮಾನ್ಯ. ಅದರಲ್ಲೂ ಬಣ್ಣದ ಬಟ್ಟೆಗಳನ್ನು ಹಾಕುತ್ತಾರೆ ಅದರ ಬದಲು ಲೈಟ್‌ ಬಣ್ಣಗಳನ್ನು ಬಳಸುವುದರಿಂದ ಮನೆಯೊಳಗೆ ಬೆಳಕು ಧಾರಾಳವಾಗಿ ಬರುತ್ತದೆ. ಅದರಲ್ಲಿಯೂ ಕಾಟನ್‌ ಬದಲಾಗಿ ಸಿಂಥೆಟಿಕ್‌ ಬಟ್ಟೆಗಳನ್ನು ಬಳಸುವುದು ಉತ್ತಮ.

2.ಪೀಠೊಪಕರಣಗಳನ್ನು ಮನೆಗಳಲ್ಲಿ ಹೇರಳವಾಗಿ ಬಳಸುವವರು ಮಂದ ಬಣ್ಣದ ಸೋಫಾ ಹಾಸಿಗೆಯನ್ನು ಬಳಸುವುದನ್ನು ಕೆಇಮೆ ಮಾಡಿಗಾಢ ಬಣ್ಣಗಳಿಗೆ ಮೊರೆ ಹೋಗಬೇಕು. ಯಾಕೆಂದರೆ ಗಾಢ ಬಣ್ಣಗಳು ಮನೆಯನ್ನು ಬೆಚ್ಚಗಿರಿಸುವಲ್ಲಿ ಸಹಾಯ ಮಾಡುತ್ತವೆ ಇದಕ್ಕೆ ಪೂರಕವೆಂಬಂತೆ ಬೆಡ್‌ ಮತ್ತು ದಿಂಬುಗಳನ್ನು ಸೋಫಾಗಳ ಮೇಲೆ ಬಳಸುವುದು ಇನ್ನು ಉತ್ತಮ ಇದು ಮಳೆಗಾಲದಲ್ಲಿ ಬೆಚ್ಚಗಿರಿಸುವಂತೆ ಮಾಡು ವಲ್ಲಿ ಸಹಾಯ ಮಾಡುತ್ತದೆ.

3.ಮಳೆಗಾಲದಲ್ಲಿ ಒಂದಲ್ಲಾ ಒಂದು ವಿಷಯಗಳಿಂದ ದೂರ್ವಾ ಸನೆ ಹರಡುವ ಸಂಭವವಿರುತ್ತದೆ ಅದಕ್ಕಾಗಿ ಮನೆಯಲ್ಲಿ ಸುಗಂಧ ದ್ರವ್ಯಗಳು ಇದ್ದರೆ ಚೆಂದ ಎನ್ನುವವರು ಮನೆಯ ಒಳಗೆ ಪರಿಮಳ ಬೀರುವ ಸಸ್ಯಗಳನ್ನು ಬೆಳೆಸಿ ಇಲ್ಲವಾದಲ್ಲಿ ಮನೆಯ ಸುಗಂಧ ಹೆಚ್ಚಿಸಲು ಸಿಗುವ ಪರಿಮಳಯುಕ್ತ ದ್ರವ್ಯಗಳನ್ನು ಬಳಸಿ ಇದರಿಂದ ಮನೆಯಲ್ಲಿ ದೂರ್ವಾಸನೆ ಹರಡುವುದನ್ನು ತಡೆಯ ಬಹುದು.

4.ಮಳೆಗಾಲದಲ್ಲಿ ಮನೆಯಲ್ಲಿ ಎಲ್ಲೇ ಕುಳಿತು ಕೊಂಡರು ಸಹ ಚಳಿಯಾಗುತ್ತದೆ ಎನ್ನುವವರು ಚೆಂದದ ಡಿಸೈನ್‌ ಬೆಡ್‌ಶಿಟ್‌ಗಳಿರುತ್ತವೆ ಅವುಗಳನ್ನು ಬಳಸುವುದರಿಂದ, ನೀವು ಚಹಾ ಸವಿ ಯುವಾಗ ಅಥವಾ ಸಂಜೆಯ ಹೊತ್ತು ಚಳಿಯಾಗು ವಾಗ ಹೊದ್ದು ಕುಳಿತುಕೊಳ್ಳಬಹುದು. ಇದು ಬೇರೆ ಸಮಯ ದಲ್ಲಿ ಸೋಫಾದ ಅಂದ ಹೆಚ್ಚಿಸುವುದಲ್ಲದೆ ಮಳೆಗಾಲದಲ್ಲಿ ಬೆಚ್ಚಗಿರಿಸುತ್ತದೆ.

Advertisement

5.ಮನೆಗೆ ಹಳದಿ ಮತ್ತು ಕಿತ್ತಳೆ ಬಣ್ಣವನ್ನು ಬಳಸುವುದರಿಂದ ಮನೆಯನ್ನು ಬೆಚ್ಚಗಿರಿಸುತ್ತದೆ. ಇವುಗಳು ಸೂರ್ಯನ ಕಿರಣಗ ಳನ್ನು ಹೆಚ್ಚಾಗಿ ಹೀರಿಕೊಳ್ಳುವುದರಿಂದ ಈ ಬಣ್ಣಗಳನ್ನು ಮಳೆ ಗಾಲದಲ್ಲಿ ಬಳಸುವುದು ಉತ್ತಮ. ಅದಲ್ಲದೆ ಈ ಬಣ್ಣಗಳು ಮನೆಯ ಅಂದವನ್ನು ಹೆಚ್ಚಿಸುತ್ತವೆ, ಈ ಬಣ್ಣ ಆಕ ರ್ಷಕ ಬಣ್ಣವಾಗಿದ್ದು ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

-ಪ್ರೀತಿ ಭಟ್‌,ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next