Advertisement
ನಮ್ಮ ಆರೋಗ್ಯ ಹಾಗೂ ಬೆಳವಣಿಗೆಗೆ ಪೋಷಕಾಂಶಗಳು ಹೇಗೆ ಮುಖ್ಯವೋ ಅಂತೆಯೇ ನಮ್ಮ ಕೃಷಿ ಬೆಳೆಗಳಿಗೂ ಕೂಡ ಇದು ಅಗತ್ಯ. ಮಾನವನ ಬೆಳವಣಿಗೆಗೆ ಸುಮಾರು 40 ವಿಧದ ಪೋಷಕಾಂಶಗಳು ಬೇಕಾಗಿವೆ. ಆದರೆ ಸಸ್ಯಗಳ ಬೆಳವಣಿಗೆಗೆ 16 ವಿಧದ ಪೋಷಕಾಂಶ ಸಾಕು.
Related Articles
Advertisement
ಸೂಕ್ಷ್ಮ ಪೋಷಕಾಂಶಗಳಲ್ಲಿ ಏಳು ವಿಧಗಳಿದ್ದು ಅವುಗಳಲ್ಲಿ ಕಬ್ಬಿಣ, ಸತು, ಮ್ಯಾಂಗನೀಸ್, ಬೋರಾನ್, ತಾಮ್ರ, ಮ್ಯಾಲಿಬಿxನಂ ಮತ್ತು ಕ್ಲೋರಿನ್ ಮುಖ್ಯವಾದವುಗಳು. ಇವು ಪ್ರತಿ ಹೆಕ್ಟೇರ್‌ಗೆ 2ರಿಂದ 3 ಕೆ.ಜಿ.ಯಷ್ಟೇ ಸಾಕಾಗುತ್ತದೆ.
ಕಬ್ಬಿಣ ಸಸ್ಯದಲ್ಲಿರುವ ಪತ್ರ ಹರಿತ್ರಿನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಸ್ಯಗಳಲ್ಲಿ ಕಬ್ಬಿಣದ ಅಂಶದ ಕೊರತೆ ಎಲೆಗಳ ಹಸಿರು ಬಣ್ಣದ ಮೇಲೆ ಪರಿಣಾಮ ಉಂಟುಮಾಡುತ್ತದೆ. ಸತು ಸಸ್ಯಗಳ ವಂಶಾಭಿವೃದ್ಧಿಗೆ ಗಿಡದ ಹಣ್ಣು ಮತ್ತು ಬೀಜದ ಸದೃಢ ಬೆಳವಣಿಗೆಗೆ ಸಹಕಾರಿ. ಮ್ಯಾಂಗನೀಸ್ ಸಸ್ಯದ ಕಿಣ್ವಗಳ ರಚನೆಯ ಕಾರ್ಯವೈಖರಿಗೆ ಸಹಕಾರಿ.
ಬೋರಾನ್ ಸಸ್ಯಗಳ ವಂಶಾಭಿವೃದ್ಧಿ ಅಂಗಗಳ ರಚನೆಯಲ್ಲಿ ಪರಿಣಾಮಕಾರಿ. ಅಡಿಕೆಯಲ್ಲಿ ಹೂವು, ಹರಳು ಉದುರುವುದು ಬೋರಾನ್‌ನ ಕೊರತೆಯಿಂದ. ಮಾಲಿಬಿxನಿಂ ದ್ವಿದಳ ಧಾನ್ಯಗಳ ಬೇರುಗಳಲ್ಲಿ ಗಂಟು ಮೂಡಿ ಸಾರಜನಕ ಸ್ಥಿರೀಕರಣಕ್ಕೆ ಅನುಕೂಲ. ಕ್ಲೋರಿನ್ ಸಸ್ಯದಲ್ಲಿರುವ ಉಪ್ಪಿನ ಪ್ರಮಾಣವನ್ನು ಸಮತೋಲನ ಮಾಡಲು ಅನುಕೂಲ. ಲಘು ಪೋಷಕಾಂಶ, ಸೂಕ್ಷ್ಮ ಪೋಷಕಾಂಶಗಳ ಕೊರತೆ ಸಸ್ಯದ ಎಲೆಗಳ ಬೆಳವಣಿಗೆಗೆ ಪರಿಣಾಮಕಾರಿ. ಎಲೆಗಳ ವಿಕೃತ ಬೆಳವಣಿಗೆಗೆ, ಹಸಿರು ಬಣ್ಣದಲ್ಲಿನ ವ್ಯತ್ಯಾಸ, ಹೂವು ಹಣ್ಣುಗಳ ವಕ್ರತೆಗೆ ಈ ಪೋಷಕಾಂಶಗಳ ಕೊರತೆಯೇ ಕಾರಣವಾಗಿದೆ. ಇಂಗಾಲ, ಜಲಜನಕ, ಆಮ್ಲಜನಕ ನೈಸರ್ಗಿಕವಾಗಿ ದೊರೆಯುವ ಪೋಷಕಾಂಶಗಳಾವೆ ನೀರು, ಗಾಳಿಯ ಮುಖಾಂತರ ಇವು ಸಸ್ಯಗಳಿಗೆ ದೊರೆಯುತ್ತದೆ. ಸಸ್ಯಗಳ ಪೋಷಕಾಂಶಗಳ ಪೂರೈಕೆಗೆ ಸಂಬಂಧಿಸಿದಂತೆ ಕೆಲವೇ ಅಂಶಗಳ ಮೇಲೆ ಗಮನಹರಿಸುವುದಕ್ಕಿಂತ ಸಮಗ್ರ ಪೋಷಕಾಂಶ ಪೂರೈಸುವ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಕಾಂಪೋಸ್ಟ್, ಎರೆಹುಳುವಿನ ಗೊಬ್ಬರದತ್ತ ರೈತರು ಗಮನ ಹರಿಸುವುದು ಒಳಿತು .
ಬೆಳವಣಿಗೆಗೆ ಸಹಕಾರಿಸುಣ್ಣ, ಮೆಗ್ನಿàಶಿಯಂ, ಗಂಧಕವನ್ನು ಲಘು ಪೋಷಕಾಂಶಗಳೆಂದು ಗುರುತಿಸಲಾಗಿದ್ದು ಇವುಗಳ ಪೂರೈಕೆಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದೇ ಹೇಳಬಹುದು. ಯಾಕೆಂದರೆ ಇದರ ಬೇಡಿಕೆಯೂ ಅತ್ಯಲ್ಪ. ಪ್ರತಿ ಹೆಕ್ಟೇರ್‌ಗೆ ಇದು 30ರಿಂದ 50 ಕೆ.ಜಿ.ಯಷ್ಟು ಸಾಕಾಗುತ್ತದೆ. ಪ್ರಮುಖ ಲಘು ಪೋಷಕಾಂಶಗಳಾದ ಸುಣ್ಣ ಮಾನವನ ಬೆಳವಣಿಗೆಗೆ ಹೇಗೆ ಸಹಕಾರಿಯೋ ಅಂತೆಯೇ ಸಸ್ಯದ ಜೀವಕೋಶಗಳ ಗೋಡೆಯನ್ನು ಗಟ್ಟಿಗೊಳಿಸುವಲ್ಲಿ , ಗಿಡದ ತೊಗಟೆ, ಎಲೆ, ಪೊರೆ, ಹೂವು, ಹಣ್ಣು, ಕಾಯಿಗಳ ಹೊರ ಪದರವನ್ನು ಗಟ್ಟಿಗೊಳಿಸಲು ಸುಣ್ಣ ಅತ್ಯವಶ್ಯಕ. ಪೋಷಕಾಂಶ ಕೊರತೆಯಿಂದ ಇಳುವರಿ ಕುಂಠಿತ
ಬೆಳೆ ಉತ್ಪಾದನೆಯ ಉದ್ದೇಶದಿಂದ ಮಣ್ಣಿ ನಲ್ಲಿಯ ಸಸ್ಯ ಪೋಷಕಾಂಶಗಳನ್ನು ನೈಸರ್ಗಿಕವಾಗಿ ಪೂರೈಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಸುಧಾರಿಸುತ್ತದೆ. ಪೋಷಕಾಂಶಗಳ ಕೊರತೆಯಿಂದ ಬೆಳೆಯಲ್ಲಿ ಅಪೇಕ್ಷಿತ ಇಳುವರಿ ಪಡೆಯಲು ಸಾಧ್ಯವಿಲ್ಲ. ಗೊಬ್ಬರಗಳ ಬಳಕೆ ಆಧುನಿಕ ಕೃಷಿಯಲ್ಲಿ ಬಹಳ ಪ್ರಮುಖ ಪರಿಕರ. ಇದನ್ನು ಬಳಸಿದಾಗ ಸಾಕಷ್ಟು ಆಹಾರ ಧಾನ್ಯ, ತರಕಾರಿ ಉತ್ಪಾದನೆಯಾಗಿ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ಪೂರೈಕೆ ಸಾಧ್ಯವಾಗುತ್ತದೆ. - ಜಯಾನಂದ ಅಮೀನ್, ಬನ್ನಂಜೆ