Advertisement
ಕ್ರಿಮಿನಾಲಜಿಸ್ಟ್ ಆಗಿ..ಕೆಲವೊಮ್ಮೆ ಅಪರಾಧಗಳ ತನಿಖೆ ನಡೆದರೂ ಅಪರಾಧಿ ಯಾರು ಎಂದು ತಿಳಿಯುವುದೇ ಇಲ್ಲ. ಇನ್ನು ಕೆಲವು ಕೃತ್ಯಗಳು ನಡೆದು ಎಷ್ಟೋ ವರ್ಷದ ನಂತರ ಅಪರಾಧಿಯ ಬಂಧನವಾಗುತ್ತದೆ. ಮತ್ತಷ್ಟು ಕೇಸ್‌ಗಳಲ್ಲಿ ಅಪರಾಧಿ ಕಣ್ಣೆದುರೇ ಇದ್ದರೂ ಈತನೇ ಕೃತ್ಯವೆಸಗಿದವನು ಎಂದು ತಿಳಿಯಲು ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭಗಳಲ್ಲೆಲ್ಲ ಪೊಲೀಸರು ಅನೇಕ ತಂಡಗಳನ್ನು ರಚಿಸಿ ಅಪರಾಧಿಯನ್ನು ಪತ್ತೆ ಹಚ್ಚಲು ಹೆಣಗಾಡಬೇಕಾಗುತ್ತದೆ.
Related Articles
ಕ್ರಿಮಿನಾಲಜಿಸ್ಟ್ ಆಗ ಬಯಸುವ ವಿದ್ಯಾರ್ಥಿಯು ಎಸ್ಸೆಸ್ಸೆಲ್ಸಿ ಮುಗಿಸಿದ ಬಳಿಕ ಪಿಯುಸಿಯಲ್ಲಿ ಸೋಶಿಯಾಲಜಿ, ಸೈಕಾಲಜಿ, ಎಕನಾಮಿಕÕ… ಅನ್ನು ಓದಿ ಅದನ್ನು ಪದವಿಯಲ್ಲೂ ಮುಂದುವರಿಸಬೇಕು. ಜೊತೆಗೆ ಮೆಡಿಸನ್ ಬಗ್ಗೆ ತಿಳಿವಳಿಕೆ ಪಡೆಯಬೇಕು. ಸ್ನಾತಕೋತ್ತರ ಪದವಿಯಲ್ಲಿ ಕ್ರಿಮಿನಾಲಜಿ ವಿಷಯವನ್ನು ಅಭ್ಯಸಿಸಿ ಅಪರಾಧ ಶಾಸ್ತ್ರಜ್ಞರಾಗಬಹುದು. ಮತ್ತೂಂದು ವಿಧದಲ್ಲಿ ಪಿಯುಸಿಯಲ್ಲಿ ಯಾವುದೇ ವಿಷಯವನ್ನು ಅಭ್ಯಸಿಸಿ ಪದವಿಯಲ್ಲಿ ಬಿಎ.ಎಲ…ಎಲ… ಬಿ ಮಾಡಿ, ಸ್ನಾತಕೋತ್ತರ ಪದವಿಯಲ್ಲಿ ಕ್ರಿಮಿನಾಲಜಿ ಅಭ್ಯಾಸ ಮಾಡಿಯೂ ಕ್ರಿಮಿನಾಲಜಿಸ್ಟ್ ಆಗಬಹುದು.
Advertisement
ಕೌಶಲಗಳು ಇರಲಿ– ಕಾನೂನು, ಕಾಯಿದೆ, ಸೆಕ್ಷನ್‌ಗಳ ಬಗ್ಗೆ ತಿಳಿವಳಿಕೆ
– ಮಾನವ ಸಂಬಂಧ, ನಡಾವಳಿ, ರೂಢಿಪದ್ಧತಿ, ಜಾತಿಪದ್ಧತಿ, ಮಾನವ ಗುಣಾವಗುಣಗಳ ವಿಮಶಾì ಜ್ಞಾನ
– ವಿಷಯ, ಪರಿಸ್ಥಿತಿ, ವಾತಾವರಣಗಳನ್ನು ಅರಿಯುವ ಜ್ಞಾನ
– ಅಪರಾಧಗಳ ಮೂಲ, ಪ್ರಾಕೃತಿಕ ಮತ್ತು ನೈಜಕಾರಣ ಕಾರಣ ತಿಳಿಯುವ ಚಾಣಾಕ್ಷತೆ
– ಅಪರಾಧಗಳ ನಡೆಯನ್ನು ತಿಳಿಯಲು ಬೇಕಾದ ಪರಿಕರಗಳ ಬಳಕೆ ಬಗ್ಗೆ ಅರಿವು
– ಕೆಮಿಕಲ…, ವಿಷ, ವಿಷಾಹಾರ ಮತ್ತು ರಸಾಯನಿಕ ವಸ್ತುಗಳ ಬಳಕೆ ಬಗ್ಗೆ ತಿಳಿವಳಿಕೆ
– ಮೊಬೈಲ…, ಗಣಕ ಸೇರಿದಂತೆ ತಾಂತ್ರಿಕ ವಿಷಯ, ಯಾಂತ್ರಿಕ ಪರಿಕರಗಳ ಬಗ್ಗೆ ಅರಿವು ಗಳಿಕೆ
ಅಪರಾಧ ಶಾಸ್ತ್ರಜ್ಞರು ಸಾಮಾನ್ಯವಾಗಿ ಸರ್ಕಾರಿ ಹು¨ªೆಗಳನ್ನು ಹೊಂದುತ್ತಾರೆ. ಇನ್ನು ಡಿಟೆಕ್ಟಿವ್ ಇತ್ಯಾದಿ ಖಾಸಗಿ ವಲಯದಲ್ಲಿಯೂ ಇವರ ಪಾತ್ರ ಹಿರಿದು. ಹೀಗಾಗಿ ಇವರಿಗೆ ಪ್ರಾರಂಭಿಕ ಹಂತದಲ್ಲಿ ವಾರ್ಷಿಕವಾಗಿ 3 ಲಕ್ಷ ರೂ. ಹಾಗೂ ಅನುಭವಿ ಅಪರಾಧ ಶಾಸ್ತ್ರಜ್ಞರಿಗೆ 10 ಲಕ್ಷ ರೂ.ವರೆಗೆ ವೇತನ ನೀಡುವುದುಂಟು ಅವಕಾಶಗಳು
– ಪೊಲೀಸ್, ತನಿಖಾ ಇಲಾಖೆ
– ಇನ್ವೆಸ್ಟಿಗೇಷನ್ ಏಜೆನ್ಸಿಗಳು
– ಕಾನೂನು ಸಂಸ್ಥೆಗಳು
– ಜೈಲು ಮತ್ತು ರಿಮ್ಯಾಂಡ್ ಹೋಮ್
– ಕರೆಕ್ಷನಲ… ಹೌಸ್‌ಗಳು
– ಸಮಾಜ ಕಲ್ಯಾಣ ಸಂಸ್ಥೆಗಳು
– ಎನ್‌ಜಿಒಗಳು ಕಾಲೇಜುಗಳು
– ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
– ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಾಣಸಿ
– ಪಂಜಾಬ್ ಯೂನಿವರ್ಸಿಟಿ, ಪಂಜಾಬ್
– ಮದ್ರಾಸ್ ವಿಶ್ವವಿದ್ಯಾಲಯ, ತಮಿಳುನಾಡು
– ರಾಜಸ್ಥಾನ್ ವಿಶ್ವವಿದ್ಯಾಲಯ, ರಾಜಸ್ಥಾನ
– ಉತ್ಕಲ್ ವಿಶ್ವವಿದ್ಯಾಲಯ, ಒಡಿಶಾ – ಎನ್. ಅನಂತನಾಗ್