Advertisement
ಮನೆಯಲ್ಲಿ ಮುಖ್ಯ ಸ್ಥಳವೆಂದರೆ ಅದು ಅಡುಗೆ ಮನೆ. ಒಂದು ಮನೆಯ ಅಲಂಕಾರ ಹೆಚ್ಚಾಗಬೇಕಾದರೆ ಅಲ್ಲಿ ಅಡುಗೆ ಮನೆಯ ಪಾತ್ರ ಮಹತ್ತರವಾದುದು. ಅಡುಗೆ ಮನೆಯೊಂದು ಶುಚಿಯಾಗಿದ್ದರೆ ಇಡೀ ಮನೆ ಶುಚಿ ಇದ್ದಂತೆ. ಪ್ರತಿಯೊಬ್ಬರೂ ಮನೆ ನಿರ್ಮಿಸುವಾಗ ಹೆಚ್ಚಿನ ಗಮನ ಅಡುಗೆ ಮನೆಗೆ ನೀಡುವುದನ್ನು ಕಾಣಬಹುದು.
ಕೆಲವರ ಮನೆಯಲ್ಲಿ ಅಡುಗೆ ಕೋಣೆ ಸಣ್ಣದಾಗಿರುತ್ತದೆ. ಅಡುಗೆ ಕೋಣೆಯಲ್ಲಿನ ಸಾಮಗ್ರಿಗಳನ್ನು ಚೆನ್ನಾಗಿ ಜೋಡಿಸಿಟ್ಟುಕೊಳ್ಳಬೇಕು ಜತೆಗೆ ಗೋಡೆಗಳಿಗೆ ಡಲ್ ಬಣ್ಣಗಳನ್ನು ಬಳಸಬೇಕು. ಆದಷ್ಟು ಬೆಳಕು ಕಾಣುವಂತಿರಬೇಕು. ಸ್ಥಳಾವಕಾಶ ಕಡಿಮೆ ಇರುವುದರಿಂದ ಸಿಂಕ್ ಜಾಗದಲ್ಲಿ ತರಕಾರಿ ಕತ್ತರಿಸುವ ಬೋರ್ಡ್‌ಗಳನ್ನು ನಿರ್ಮಿಸಬಹುದು ಇದರಿಂದ ಉಳಿದ ಸಾಮಗ್ರಿಗಳನ್ನು ಚಂದಗಾನಿಸುವಂತೆ ಜೋಡಿಸಲು ಸುಲಭವಾಗುತ್ತದೆ. ಪಾಟ್ ರ್ಯಾಕ್ ಮಾದರಿ ನಿರ್ಮಾಣ: ರ್ಯಾಕ್ ಮೇಲ್ಗಡೆ ಗೋಡೆಯಲ್ಲಿ ಪ್ಯಾನ್‌ಗಳನ್ನು ಜೋಡಿಸಲು ಶೆಲ್ಫ್ ಗಳನ್ನು ಬಳಸಬಹುದು. ಗೋಡೆಗಳಿಗೆ ಪೈಂಟ್‌ಗಳನ್ನು ಮಾಡಿಸಬೇಕು. ವಿವಿಧ ಮಾದರಿಯ ಪೈಂಟ್‌ಗಳನ್ನು ಮಾಡಿಸುವುದರ ಜತೆಗೆ ಬಣ್ಣಗಳ ಆಯ್ಕೆ ತುಂಬಾ ಮುಖ್ಯವಾದದ್ದು. ಹಾಗೆಯೇ ಅಡುಗೆ ಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸಲು ಮಣ್ಣಿನ ಮಡಕೆಗಳನ್ನು, ಫ್ಲವರ್ ಪಾಟ್‌ಗಳನ್ನು ಬಳಸಬಹುದು. ನಿಮ್ಮಲ್ಲಿ ಕಲಾವಿದನಿದ್ದರೆ ನಿಮಗೆ ಬೇಕಾದ ರೀತಿಯಲ್ಲಿ ಗೋಡೆಗಳಲ್ಲಿ ಚಿತ್ರ ಬಿಡಿಸಬಹುದು.
Related Articles
Advertisement
ಪ್ಲಾಸ್ಟಿಕ್‌ಗೆ ಬದಲಿ ವ್ಯವಸ್ಥೆಪ್ಲಾಸ್ಟಿಕ್ ವಸ್ತುಗಳ ಬದಲಾಗಿ ವಿವಿಧ ವಿನ್ಯಾಸದ ಮಣ್ಣಿನ ಪಾತ್ರೆಗಳನ್ನು ಬಳಸಬಹುದು . ಇದರಿಂದ ಅಡುಗೆ ಮನೆ ವಾತಾವರಣವನ್ನು ತಂಪಾಗಿರಿಸಬಹುದು.ಇನ್ನು ತರಕಾರಿ ಹಣ್ಣು ಹಂಪಲುಗಳನ್ನು ಡೈನಿಂಗ್ ಟೇಬಲ್ ಮೇಲಿಟ್ಟು ಅದರ ಮಧ್ಯೆ ಅಂದದ ಮನೆಯಲ್ಲಿಯೇ ತಯಾರಿಸಿದ ವಾಸ್‌ಗಳನ್ನು ಬಳಸಿ ಅಂದವನ್ನು ಹೆಚ್ಚಿಸಬಹುದಾಗಿದೆ. ಹಾಗೇಯೇ ವೇಸ್ಟ್ ಪೇಪರ್ ಮತ್ತು ಬಾಟಲ್‌ಗಳನ್ನುಪಯೋಗಿಸಿ ವಿವಿದ ರೀತಿಯ ಕಲಾಕೃತಿಯನ್ನು ರಚಿಸಿ ಇಡಬಹುದು. ಕರ್ಟನ್ ಅಲಂಕಾರ
ಕರ್ಟನ್‌ಗಳನ್ನು ಇಷ್ಟಪಡುವವರು ಬಣ್ಣದ ಕರ್ಟನ್‌ಗಳನ್ನು ಬಳಸಿದರೆ ಉತ್ತಮ ,ಇದು ಅಡುಗೆ ಕೋಣೆಯನ್ನು ಇನ್ನಷ್ಟು ಮೆರುಗುಗೊಳಿಸುತ್ತದೆ. ಕರ್ಟನ್‌ಗಳನ್ನು ಸಾಮಾನ್ಯವಾಗಿ ಕೋಣೆಗಳಲ್ಲಿ ಬಳಸುವುದಿದೆ. ಆದರೆ ಅಡುಗೆ ಮನೆಯಲ್ಲಿ ಕೂಡಾ ಇವುಗಳನ್ನು ಬಳಸಿದರೆ ಅಡುಗೆ ಮನೆಯ ಸೌಂಧರ್ಯ ಇಮ್ಮಡಿಯಾಗುತ್ತದೆ. - ವಿಶು ಅಮೀನ್, ಬಂಟ್ವಾಳ