ಹೊಸದಿಲ್ಲಿ: ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ಗೆ ಸಂಬಂಧಿಸಿದಂತೆ ಸಾರ್ವಜನಿಕರು ಕಲ್ಪನೆ ಹಾಗೂ ವಿಚಾರ ಹಂಚಿಕೊಳ್ಳುವ ಕಾರ್ಯವನ್ನು ಮುಂದುವರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಈ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮವು ಜೂ.28 ರಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.
ಅದಕ್ಕೆ ಇನ್ನೂ 2 ವಾರಗಳು ಬಾಕಿ ಇದ್ದು, ದೇಶವಾಸಿಗಳು ತಮ್ಮ ಐಡಿಯಾ ಹಾಗೂ ಇನ್‌ಪುಟ್‌ಗಳನ್ನು ನಿರಂತರವಾಗಿ ಕಳುಹಿಸ ಬೇಕು. ಇದರಿಂದ ನಾನು ಗರಿಷ್ಠ ಸಂಖ್ಯೆಯ ಕಮೆಂಟ್‌ಗಳು ಹಾಗೂ ಪೋನ್ ಕಾಲ್ ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ.
ಕೋವಿಡ್ ಸೋಂಕು ಮತ್ತು ಅದರ ಹೊರತಾದ ವಿಷಯಗಳ ಕುರಿತು ನೀವು ಹೇಳಬೇಕು ಅಂದುಕೊಂಡಿರುವುದು ಬಹಳಷ್ಟಿದೆ ಎಂದು ನನಗೆ ಗೊತ್ತು,’ ಎಂದಿದ್ದಾರೆ.
ಕಳೆದ 3 ತಿಂಗಳ ಮನ್ ಕಿ ಬಾತ್‌ನಲ್ಲಿ ಪ್ರಧಾನಿ, ಕೋವಿಡ್ ಹಾಗೂ ಕೋವಿಡ್ ವಾರಿಯರ್‌ಗಳ ಕುರಿತು ಮಾತನಾಡಿದ್ದು, ಈ ಬಾರಿ ಯಾವ ವಿಷಯದ ಮೇಲೆ ಬೆಳಕು ಚೆಲ್ಲಲಿದ್ದಾರೆ ಎಂಬ ಕುತೂಹಲ ಬಹಳಷ್ಟು ಜನರಲ್ಲಿದೆ.