Advertisement

ಲೈಫ್ ಪೂರ್ತಿ ನಗ್ತಾ ಇರಿ !

06:00 AM Jan 19, 2018 | Team Udayavani |

ಅಗೋಚರ ನಗುವಿನ ಸೋನೆಯು ಸುರಿಯುತ್ತಿತ್ತು. ತುಂಬಿ ತುಳುಕುತ್ತಿತ್ತು ನಗುವಿನ ಒರತೆ. ಹಾಗೆ ನಗು ಚೆಲ್ಲುತ್ತ ಬರೆಯಲು ಕುಳಿತೆ.

Advertisement

ನೀವು ನಗ್ತಿàರಾ? ಹೇಗೆ ನಗ್ತಿàರಾ? ಒಬ್ಬರೆ ನಗ್ತಿàರಾ ಇಲ್ಲ ಗುಂಪಿನಲ್ಲಿ ಗೋವಿಂದ ಮಾಡ್ಕೊಂಡು ನಗ್ತಿàರಾ? ನಗೋವಾಗ ಢಂಢಂ ಅಂಥ ಸದ್ದು ಮಾಡ್ತೀರಾ ಇಲ್ಲ ಒಳಗೊಳಗೆ ನಗ್ತಿàರಾ? ಎಷ್ಟೇ ಬೇಡ ಅಂದರೂ ಫ‌ನ್ನೀ ಇನ್ಸಿಡೆಂಟ್‌ನ್ನು ನೆನೆಸಿಕೊಂಡಾಗ ನಗು ಬಂದೇ ಬರುತ್ತೆ. ಹಾಯಾಗಿ ಮನಃಪೂರ್ವಕವಾಗಿ ಹೊಟ್ಟೆತುಂಬಾ ನಗ್ತೀವೆ. ಕೆಲವರ ಮುಗುಳುನಗೆಗೆ ಬೇಗನೆ ಬ್ರೇಕ್‌ ಬೀಳುತ್ತೆ. ಮತ್ತೂಂದಿಷ್ಟು ಜನರ ನಗೆಗೆ ಸ್ಪೀಡ್‌ ಬ್ರೇಕರ್‌ ಇಲ್ಲವೇ ಇಲ್ಲ. ಇಂಥವರ ನಗೆಗೆ ಆ್ಯಕ್ಸಿಡೆಂಟ್‌ ಆಗೋದಂತೂ ನಿಜ.

ಕೆಲವರು ಕಚಗುಳಿ ಇಟ್ಟಂತೆ ನಗು ಪಸರಿಸಿದ್ರೆ, ಇನ್ನು ಕೆಲವರು ಕಿರುನಗೆ ಬೀರುತ್ತಾರೆ. ನಗೋವಾಗ ಸಿಂಪಲ್ಲಾಗೊಂದು ಡಿಂಪಲ್‌ ಬಿದ್ರೆ ಹೇಳ್ಳೋದೇ ಬೇಡ. ಎಲ್ಲೂ ಫಿದಾ ಆಗೋಗ್ತಾರೆ. ಮುದ್ದಾದ ಡಿಂಪಲ್‌ ನೋಡೋಕೆ ಕ್ಯೂ ನಿಂತರೂ ಆಶ್ಚರ್ಯಪಡಬೇಕಿಲ್ಲ.

ಒಂದು ರೂಪಾಯಿಗೆ ಸಿಗೋ ಪೆಪ್ಪರ್‌ವೆುಂಟ್‌ನ್ನು ಸ್ಕೂಲ್‌ಗೆ ಹೋಗೋ ಮಗುವಿಗೆ ಕೊಟ್ಟುಬಿಡಿ. ಅದಕ್ಕಾಗೋ ಖುಷಿ ನೋಡಿಯಾದ ಮೇಲಂತೂ ನೀವು ಈ ಲೋಕವನ್ನು ಮರೆತು ಖುಷಿಯಲ್ಲೇ ತೇಲಾಡ್ತೀರಿ.

ನಾವು ಮೊಬೈಲ್‌ಗೆ ಬಂದ ಎಷ್ಟೋ ಮೆಸೇಜ್‌ಗಳನ್ನು ಫಾರ್ವರ್ಡ್‌ ಮಾಡ್ತೇವೆ. ಆದ್ರೆ ಸೆ¾„ಲ್‌ನ್ನು ಫಾರ್ವರ್ಡ್‌ ಮಾಡೋಕೆ ಮಾತ್ರ ಜ್ಯೂಸ್‌ ಜ್ಯೂಸ್‌ ಚಿಕ್ಕು ಜ್ಯೂಸ್‌ ಅಲ್ಲ ಕಂಜೂಸ್‌ ಬುದ್ಧಿ ತೋರಿಸ್ತೇವೆ.

Advertisement

ಕೆಲವು ದಿನಗಳಿಂದ ಕೋಳಿಜಗಳವಾಗಿ ಮಾತುಬಿಟ್ಟವರು ಸಿಕ್ಕಿದರೆ ಹಾಗೇ ಶುಭ್ರ ನಗೆಯನ್ನು ಅವರೆಡೆಗೆ ಚೆಲ್ಲಿ ಹೊಚ್ಚಹೊಸ ನಗು ಹಳೆಯ ನೋವಿನ ಕನ್ನಡಿಯನ್ನು ಒಡೆಯುವುದರಲ್ಲಿ ಎರಡು ಮಾತಿಲ್ಲ. ಒಂದಿಷ್ಟು ಜನ ಸ್ಟೈಲ್‌ ಕೊಟ್ರೆ ಸ್ಟೈಲ್‌ ಅನ್ನೇ ಗುಳುಂ ಮಾಡಿ ನೋಡ್ತಾರೆ. ಸೆ¾„ಲಿಗೆ ಪ್ರಮೋಶನ್‌ ಕೊಡಲ್ಲ. ಇಂಥವರಿಗೆ ನಗು ಸರಬರಾಜು ಮಾಡ್ಲಿಕ್ಕೆ ನಗರಸಭೆಗೆ ಸಾಕುಬೇಕಾಗಿ ಹೋಗ್ತದೆ. ಇನ್ನು ಮುಂದೆ ನಗುವಿನ ಮರು ಸರಬರಾಜಿಗೆ ನಗರಸಭೆ ಮಹಾನಗರಪಾಲಿಕೆಯ ಮೊರೆ ಹೋಗಬೇಕಾಗಿ ಬರಬಹುದು.

ಸಹಪ್ರಯಾಣಿಕರೋರ್ವರಿಗೆ ಇವತ್ತು ನೀವು ಮೊದಲು ಸೆ¾„ಲ್‌ ಕೊಟ್ರೆ ನಾಳೆ ಅವರು ಮೊದಲು ಸೆ¾„ಲ್‌ ಕೊಡ್ಬೇಕು. ಒಂದಿನ ನೀವು, ಮತ್ತೂಂದು ದಿನ ಅವರು. ದೆಹಲಿಯಲ್ಲಿದ್ದಂತೆ ಸಮ-ಬೆಸ ವ್ಯವಸ್ಥೆ. ಒಟ್ಟಾರೆ ನಗುವಿನ ಅವಸ್ಥೆ. ನಿನ್ನೆಯ ಉಪ್ಪಿಟ್ಟಿಗೆ  ಇವತ್ತು ಒಗ್ಗರಣೆ ಹಾಕೋದು ಅಂದ್ರೆ ಇದೇ ಇರ್ಬೇಕು. ಊರಿಗೊಂದು ಬಸ್ಸು , ಸಿಕ್ಕಾಪಟ್ಟೆ ರಶುÏ. ನಿಲ್ಲೋಕೂ ಜಾಗವಿಲ್ಲ. ಅಷ್ಟರಲ್ಲೇ ಬ್ರೇಕ್‌ ಬೇರೆ. ಎದುರು ನಿಂತೋರಿಗೆ ಪಾಪ ನಮ್ಮ ಕಾಟ ತಡೆದುಕೊಳ್ಳೋಕೆ ಆಗಲ್ಲ. ಅವರು ನಮಗೆ ಬೈಯ್ಯುವ ಮೊದಲು ಒಂದು ಸೆ¾„ಲ್‌ ಕೊಟ್ರೆ ಮುಗೀತು. ಸಾರಿ, ಕಡ್ಲೆಪುರಿ ಏನೂ ಬೇಕಾಗಿಲ್ಲ.

ಸದಾಕಾಲ ಮಂದಹಾಸ ಬೀರುವವರನ್ನು ನೋಡಿದಾಗ ನಾವು ಕೂಡ ಅವರ ಹಾಗೆಯೇ ಇರ್ಬೇಕು ಅಂತ ಅನ್ನಿಸುತ್ತೆ. ಆದ್ರೆ ಹುಟ್ಟುಬುದ್ಧಿ ಬೆಟ್ಟ ಹತ್ತಿದರೂ ಹೋಗದೆಂಬಂತೆ ನಾವು ಆ ಮೂತಿ ಸಿಂಡರಿಸಿಕೊಳ್ಳುವುದನ್ನು ಎಂದೂ ನಿಲ್ಲಿಸಲ್ಲ.

ಐದು ಸೆಕೆಂಡ್‌ ಸ್ಟೈಲ್‌ ಕೊಡೋದ್ರಿಂದ ಒಂದು ಫೋಟೋ ಚೆನ್ನಾಗಿ ಬರೋದಾದ್ರೆ, ಲೈಫ್ ಪೂರ್ತಿ ನಗ್ತಾ ಇದ್ರೆ ಜೀವನ ಎಷ್ಟು ಸುಂದರವಾಗಿರಬಹುದು ಅಲ್ವಾ? ಇದನ್ನು ಕೇಳಿದಾಗ ನನಗೂ ನಗೋಣ ಅಂತ ಅನಿಸುತಿದೆ. ನನ್‌ ಜೊತೆ ನೀವೂ ನಗ್ತಿàರಿ ತಾನೆ?

– ಸೋನಿಕಾ ಆರ್‌.  ನಾವೇಲ್‌ಕಾರ್‌
ಪೂರ್ಣಪ್ರಜ್ಞ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next