Advertisement

New Movie: ‘ಮೈರಾ’ಗೆ ಪುರಿ ಜಗನ್ನಾಥ್‌ ಸಾಥ್‌?

03:46 PM Apr 02, 2024 | Team Udayavani |

ಇತ್ತೀಚೆಗೆ ತೆರೆಕಂಡ “ಓ ಮೈ ಲವ್‌’ ಚಿತ್ರದ ನಂತರ ಸ್ಮೈಲ್‌ ಶ್ರೀನು ಅವರು “ಮೈರಾ’  ದೊಡ್ಡ ಮಟ್ಟದ ಪ್ಯಾನ್‌ ಇಂಡಿಯಾ ಚಿತ್ರವೊಂದನ್ನು ನಿರ್ದೇಶಿಸಲು  ಸಜ್ಜಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗಾಗಲೇ ಹೊಸ ಚಿತ್ರದ  ಸ್ಕ್ರಿಪ್ಟ್ ಕೆಲಸ ಶುರುವಾಗಿದ್ದು, ತಾರಾಗಣದ ಆಯ್ಕೆ ಪ್ರಕ್ರಿಯೆಗೆ  ಕೂಡ ಸಿದ್ಧತೆ ನಡೆಯುತ್ತಿದೆ.

Advertisement

ಕನ್ನಡ, ತೆಲುಗು ಸೇರಿ ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ  ತಯಾರಾಗಲಿರುವ ಚಿತ್ರಕ್ಕೆ ತೆಲುಗು ನಿರ್ದೇಶಕ ಪುರಿ ಜಗನ್ನಾಥ್‌ ಕೈ ಜೋಡಿಸಲಿದ್ದಾರಂತೆ. ಇತ್ತೀಚೆಗೆ ಶ್ರೀನು ಅವರನ್ನು ಭೇಟಿಯಾಗಿ ಬಂದಿದ್ದಾರೆ. “ಈಗಾಗಲೇ ಜಗನ್ನಾಥ್‌ ಅವರ ಜೊತೆ ಮಾತುಕತೆ ನಡೆದಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಅಂತಿಮವಾಗಲಿದೆ’ ಎನ್ನುವುದು ಶ್ರೀನು ಮಾತು.

ದಕ್ಷಿಣ ಭಾರತದ ಉಳಿದೆಲ್ಲ ಭಾಷೆಗಳಿಗೂ ಈ ಸಿನಿಮಾ ಡಬ್‌ ಆಗಲಿದೆ. ಹೀಗಾಗಿ ಎಲ್ಲಾ ಭಾಷೆಗಳಿಗೂ  ಹೊಂದುವಂತೆ ಮೈರಾ ಎಂಬ ಟೈಟಲ್‌ ಇಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next