Advertisement

ಕನ್ನಡ ಪರ ಸಂಘಟನೆಗಳು ರಾಜಕೀಯದಿಂದ ದೂರವಿರಲಿ; ಎ.ಎಸ್‌. ಪಾಟೀಲ

06:21 PM Jul 30, 2022 | Nagendra Trasi |

ತಾಳಿಕೋಟೆ: ಕನ್ನಡ ಪರ ಸಂಘಟನೆಗಳು ರಾಜಕೀಯೇತರ ಸಂಘಟನೆಗಳಾಗಿ ಕಾರ್ಯನಿರ್ವಹಿಸಬೇಕು ರಾಜಕಾರಣಿಗಳಿರಲಿ ಅಥವಾ ಅಧಿಕಾರಿಗಳಿರಲಿ ಅವರನ್ನು ಎಚ್ಚರಿಸುವಂತಹ ಕಾರ್ಯಗಳನ್ನು ಮಾಡುತ್ತಾ ಸಾಗಬೇಕು ಎಂದು ಮುದ್ದೇಬಿಹಾಳ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು.

Advertisement

ಶುಕ್ರವಾರ ಜಯ ಕರ್ನಾಟಕ ಸಂಘಟನೆಯ ತಾಳಿಕೋಟೆ ತಾಲೂಕು ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ಹಿತಾಸಕ್ತಿಗೋಸ್ಕರ ಹುಟ್ಟಿಕೊಂಡಿರುವ ಸಂಘಟನೆಗಳು, ಕನ್ನಡ ನೆಲ, ಜಲ ವಿಷಯ ಬಂದಾಗ ಒಗ್ಗಟ್ಟಿನಿಂದ ಎದುರಿಸಿ ಕನ್ನಡ ತನವನ್ನು ಬಿಂಬಿಸುವಂತಹ ಮತ್ತು ಕನ್ನಡ ಭಾಷೆಯನ್ನು ಪ್ರಜ್ವಲಿಸುವಂತಹ ಕಾರ್ಯ ಮಾಡಲಿ ಎಂದರು.

ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಆರ್‌. ಎಸ್‌. ಪಾಟೀಲ (ಕೂಚಬಾಳ) ಮಾತನಾಡಿ, ಜಯ ಕರ್ನಾಟಕ ಸಂಘಟನೆಯು ತನ್ನತನವನ್ನು ಯಾವತ್ತಿಗೂ ಯಾವ ರಾಜಕೀಯ ಪಕ್ಷಕ್ಕೆ ಬಿಟ್ಟುಕೊಟ್ಟಿಲ್ಲ. ಕನ್ನಡ ನೆಲ ಜಲ ವಿಷಯವಾಗಿ ಹೋರಾಟಗಳನ್ನು ಮಾಡುತ್ತ ಬಂದಿರುವ ರಾಜ್ಯದ ಬಲಿಷ್ಠ ಸಂಘಟನೆಗಳಲ್ಲಿ ಒಂದಾಗಿದೆ.

ಸಂಘಟನೆಯ ತಾಲೂಕು ಕಾರ್ಯಾಲಯ ಆರಂಭಗೊಂಡಿದ್ದು ತಾಲೂಕಿನ ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಹೋರಾಟದ ಹೆಜ್ಜೆಗಳನ್ನು ಇಡುವುದರ ಜೊತೆಗೆ ತಪ್ಪು ಮಾಡುವ ರಾಜಕಾರಣಿಗಳಿಗೆ ಎಚ್ಚರಿಸಿ ಸರಿ ದಾರಿಯತ್ತ ಕೊಂಡೊಯ್ಯುವಂತಹ ಕಾರ್ಯ ಮಾಡಲಿ ಎಂದು ಆಶಿಸಿದರು.

ಕಾರ್ಯಕ್ರಮಕ್ಕೂ ಮುಂಚೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಸಂಘಟನೆಯ ತಾಲೂಕಾಧ್ಯಕ್ಷ ಬಸನಗೌಡ ಸಿಂಗನಳ್ಳಿ ಅವರು ಚಾಲನೆ ನೀಡಿದರು. ಜಯ ಕರ್ನಾಟಕ ಸಂಘಟ ಜಿಲ್ಲಾಧ್ಯಕ್ಷ ಮಹೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು.

Advertisement

ಕೆಪಿಸಿಸಿ ಸದಸ್ಯ ಬಿ.ಎಸ್‌. ಪಾಟೀಲ (ಯಾಳಗಿ), ಜೆಡಿಎಸ್‌ ನಾಯಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ), ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ| ಪ್ರಭುಗೌಡ ಲಿಂಗದಳ್ಳಿ, ಎಬಿಡಿ ಫೌಂಡೇಶನ್‌ ಮುಖ್ಯಸ್ಥ ಆನಂದ ದೊಡಮನಿ, ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಕೇಶ ಕಲ್ಲೂರ, ರಾಜ್ಯ ಕಾರ್ಯದರ್ಶಿ ಬಿ.ಬಿ. ಇಂಗಳಗಿ, ಜಿಲ್ಲಾ ಉಪಾಧ್ಯಕ್ಷ ಪಿಂಟು ಗಬ್ಬೂರ, ಜಿಲ್ಲಾ ಕಾರ್ಯಾಧ್ಯಕ್ಷ ಸಂಗಮೇಶಗೌಡ ದಾಶ್ಯಾಳ, ಶಿವನಗೌಡ ಬಿರಾದಾರ (ಅಸ್ಕಿ), ಕೃಷಿ ಅಧಿಕಾರಿ ಮಹೇಶ ಜೋಶಿ ವೇದಿಕೆಯಲ್ಲಿದ್ದರು.

ಪ್ರಭುಗೌಡ ಪೋತರಡ್ಡಿ, ಸುರೇಶಬಾಬುಗೌಡ ಫಿರಾಪುರ, ಶಿವರಡ್ಡಿ ಐನಾಪುರ, ಯಂಕಾರಡ್ಡಿ ಬಿರಾದಾರ, ಶಂಕರಗೌಡ ದೇಸಾಯಿ, ಪ್ರಭು ನಾಡಗೌಡ, ಸಂಗನಗೌಡ ಪಾಟೀಲ, ಮಂಜು ಗೋನಾಳ, ಬಸವರಾಜ ನೀರಲಗಿ, ಅಪ್ಪು ಆನೇಸೂರ, ಆನಂದ ಮದರಕಲ್ಲ, ರವಿ ಹಯ್ನಾಳ, ಮಡುಸೌಕಾರ ಬಿರಾದಾರ, ಚನ್ನಾರಡ್ಡಿ ಚಬನೂರ, ಸಂಘಟನೆಯ ಮುಖಂಡರುಗಳಾದ ಚನ್ನಪ್ಪಗೌಡ ಪಾಟೀಲ (ಪಡೇಕನೂರ), ಬಸವಂತ್ರಾಯ ಬಿರಾದಾರ, ಮಲ್ಲನಗೌಡ ಆನೇಸೂರ,
ನಿಂಗನಗೌಡ ಬಿರಾದಾರ, ಭೀಮನಗೌಡ ಟಕ್ಕಳಕಿ, ಯಮನೂರಿ ಸವದಿ, ವೀರೇಶ ಹಿರೇಮಠ, ಬಾಲಪ್ಪಗೌಡ ಲಿಂಗದಳ್ಳಿ, ಹಣಮಂತ್ರಾಯ ಹಾಲರಡ್ಡಿ, ರುದ್ರಗೌಡ ಬಿರಾದಾರ, ರವಿ ಐನಾಪುರ, ನಿಂಗನಗೌಡ ಪಾಟೀಲ, ನಿಂಗನಗೌಡ ಬಿರಾದಾರ,  ರಾಮನಗೌಡ ತುಂಬಗಿ, ಹಯಾಜ ಮಕಾಂದಾರ, ಸಂಗನಗೌಡ ಮೂಲಿಮನಿ, ಶ್ರೀಶೈಲ ಜಲಪುರ, ದೇವಾನಂದಗೌಡ ಪಾಟೀಲ, ರಾಮನಗೌಡ ಚೌದ್ರಿ, ಶರಣಗೌಡ ಗುಂಡಕನಾಳ, ದೊಡ್ಡಪ್ಪಗೌಡ ಬಿರಾದಾರ, ಪ್ರಕಾಶ ಹಿರೇಕುರಬರ, ಶಂಕರಗೌಡ ಮಾಳಿ, ರಮೇಶ ಜಾಲಹಳ್ಳಿ, ಜಗನ್ನಾಥರಡ್ಡಿ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next