ಉಡುಪಿ: ಕೃಷಿ ಮತ್ತು ಮೀನುಗಾರಿಕೆ ಮೇಲೆ ಕೇಂದ್ರ ಸರಕಾರ ಜಿಎಸ್‌ಟಿ ಹೇರಿಕೆ ಮಾಡಿದೆ. ಈ ವಲಯಗಳನ್ನು ಜಿಎಸ್‌ಟಿಯಿಂದ ಹೊರಗಿಡಬೇಕು ಎಂದು ಗುರುವಾರ ಹೊಟೇಲ್ ಡಯಾನ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಜಿಎಸ್‌ಟಿ ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಜಿಎಸ್‌ಟಿಗೂ ಬ್ಯಾಂಕ್ ಡೆಪಾಸಿಟ್‌ಗೂ ಸಂಬಂಧವಿಲ್ಲ
ಜನರ ಲಾಭಕ್ಕಾಗಿ ಜಿಎಸ್‌ಟಿ ಅನು ಕೂಲ ಕಾರಿ. ಕಂಪ್ಯೂಟರ್ ಸಿಸ್ಟಮ್ ನಲ್ಲಿ ಸಮಸ್ಯೆ ಇದೆ. ಅದು ತಾತ್ಕಾಲಿಕ. ವ್ಯಾಟ್ ಇದ್ದಾಗ ಹೊಟೇಲ್ ಹವಾ ನಿಯಂತ್ರಣ (ಎ.ಸಿ.)ಕ್ಕೆ ಶೇ. 20.5 ತೆರಿಗೆ ವಿಧಿಸಲಾಗುತ್ತಿತ್ತು. ಜಿಎಸ್‌ಟಿಯಲ್ಲಿ ಶೇ. 18ಕ್ಕೆ ಇಳಿಸಲಾಗಿದೆ. ಜಿಎಸ್‌ಟಿಗೂ ಬ್ಯಾಂಕ್ ಡೆಪಾಸಿಟ್‌ಗೂ ಸಂಬಂಧ ಕಲ್ಪಿಸ ಬಾರದು. ಅವುಗಳಿಗೆ ಸಂಬಂಧವೇ ಇಲ್ಲ. ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಿದೆ. ಪರಿಣಾಮ ಮುಂದಕ್ಕೆ ಗೊತ್ತಾಗುತ್ತದೆ. ಅಂತೆ-ಕಂತೆಗಳ ಮಾತಿಗೆ ಕಿವಿ ಕೊಡ ಬೇಡಿ ಎಂದು ಸಿಎ ಶಾಂತಾರಾಮ ಶೆಟ್ಟಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಕೃಷ್ಣ ರಾವ್ ಕೊಡಂಚ, ದ.ಕ. ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಿಎ ಶಾಂತಾರಾಮ ಶೆಟ್ಟಿ, ಉಡುಪಿಯ ಸಿಎ ಸಂಸ್ಥೆಯ ನರಸಿಂಹ ನಾಯಕ್ ಉಪಸ್ಥಿತರಿದ್ದರು.
ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಇನ್ನಾ ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಿಂಟರ್ ಅಸೋಸಿಯೇಶನ್ ಅಶೋಕ್ ಶೆಟ್ಟಿ, ಉದ್ಯಮಿ ಮಂಜುನಾಥ ಉಪಾಧ್ಯ ಮಾತನಾಡಿದರು.