Advertisement

ಕ್ವಾರಂಟೈನ್‌ಗೆ ಹೋಗುವ ವೇಳೆ ಈ ಬಗ್ಗೆ ಗಮನವಿರಲಿ

07:54 AM Jun 17, 2020 | mahesh |

ಭಾರತದಲ್ಲಿ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಕೋವಿಡ್ ವೈರಸ್‌ ಸದ್ಯಕ್ಕೆ ಹೋಗುವಂಥದ್ದಲ್ಲ. ಕೆಲ ಅವಧಿವರೆಗೆ ಇಲ್ಲೇ ಇರುವಂಥದ್ದು. ಇಂಥ ಪರಿಸ್ಥಿತಿಯಲ್ಲಿ ಸೋಂಕು ಯಾರಿಗೆ ಬೇಕಾದರೂ ತಗುಲಬಹುದು. ಹಾಗಾದಾಗ, ಹಲವು ಜನರು ಸೆಲ್ಫ್ ಕ್ವಾರಂಟೈನ್‌ ಕೇಂದ್ರಗಳಿಗೆ ಹೋಗುವುದು ಅನಿ ವಾರ್ಯ. ಹಾಗೆ ಹೋಗುವವರು ಯಾವ ಮುಂಜಾಗ್ರತೆ ಹೊಂದಿರಬೇಕು, ತಮ್ಮೊಂದಿಗೆ ಏನು ಕೊಂಡೊಯ್ಯಬೇಕು ಎಂಬಿತ್ಯಾದಿ ಸಲಹೆಗಳು ಇಲ್ಲಿವೆ.

Advertisement

ಈ ಬಗ್ಗೆ ಗಮನವಿರಲಿ
– ಉತೃಷ್ಟ ಹೈಜಿನ್‌ಗಾಗಿ, ನಿಮ್ಮೊಂದಿಗೆ ಸೋಪು, ಟವೆಲ್‌, ಶಾಂಪೂ, ಡೆಂಟಲ್‌ ಕಿಟ್‌ ಕೊಂಡೊಯ್ಯಬೇಕು.
– ನಿಮ್ಮದೇ ಆದ ಪ್ರತ್ಯೇಕ ಉಡುಪುಗಳು, ವಾಷಿಂಗ್‌ ಡಿಟರ್ಜೆಂಟ್‌ಗಳನ್ನು ಜತೆಯಲ್ಲಿ ಕೊಂಡೊಯ್ದರೆ ಅನುಕೂಲ.
– ಕ್ವಾರಂಟೈನ್‌ನಲ್ಲಿದ್ದಾಗ, ಆರೋಗ್ಯ ಪರಿಸ್ಥಿತಿ ಗಂಭೀರವಾದರೆ ನಿಮ್ಮನ್ನು ಐಸಿಯು ಶಿಫ್ಟ್ ಮಾಡಬಹುದು. ಆಗ, ನಿಮ್ಮದೇ ಆದ ಬಟ್ಟೆ-ಬರೆ, ಟವೆಲ್‌ಗ‌ಳನ್ನು ಇಟ್ಟುಕೊಂಡಿರಬೇಕು.
– ನೀವು ಬೇರೆ ಕಾರಣಗಳಿಗಾಗಿ ನಿತ್ಯವೂ ಔಷಧಿ, ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಅವನ್ನೂ ನಿಮ್ಮೊಂದಿಗೆ ಕೊಂಡೊಯ್ಯುವುದು ಅನಿವಾರ್ಯ. ಕ್ವಾರಂಟೈನ್‌ ಕೇಂದ್ರದ ಆಸ್ಪತ್ರೆಯಲ್ಲೇ ತರಿಸಿ ಕೊಂಡರಾಯ್ತು ಎಂಬ ನಿರ್ಲಕ್ಷ್ಯ ಬೇಡ.
– ಪೌಷ್ಟಿಕ ಅಂಶಗಳಿರುವ ಡ್ರೈ ಫ್ರೂಟ್ಸ್‌, ನೀರಿನ ಬಾಟಲ್‌, ಫ್ಲಾಸ್ಕ್ಗಳನ್ನು ಕೊಂಡೊಯ್ಯಬಹುದು.

ಕೇಂದ್ರಗಳಲ್ಲಿ ಇರುವ ಸೌಲಭ್ಯಗಳೇನು?
– ಕ್ವಾರಂಟೈನ್‌ ಕೇಂದ್ರದಲ್ಲಿ ಇವನ್ನು ನೀಡುವುದಿಲ್ಲ. ಹಾಸಿಗೆ, ಹೊದಿಕೆ ಮಾತ್ರ ಅವರು ಕೊಡುತ್ತಾರೆ.
– ಬೆಳಗ್ಗೆ ತಿಂಡಿ, ಮಧ್ಯಾಹ್ನ- ರಾತ್ರಿ ಊಟ ನೀಡಲಾಗು­ತ್ತದೆ. ನಡುವೆ ಅವಕಾಶವಿ­ದ್ದರೆ ಚಹಾ, ಕಾಫಿ.
– ನಿಮ್ಮನ್ನು ನಡೆದಾಡಿಸು­ವುದು, ಕಪ್‌ಗೆ ಚಹಾ ಸುರಿದುಕೊಡುವಂಥ ಸಣ್ಣಪುಟ್ಟ ಕೆಲಸಗಳ ಸಹಾಯ ಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next