ಪುತ್ತೂರು : ಕೆದಿಲ ಗ್ರಾಮದ ಗಡಿಯಾರದಲ್ಲಿ ಕೊಟ್ಟಿಗೆಯಲ್ಲಿ ಅಕ್ರಮವಾಗಿ ಗೋ ಮಾಂಸ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಆ.1 ರಂದು ಪುತ್ತೂರು ನಗರ ಪೊಲೀಸರು ಧಾಳಿ ನಡೆಸಿ 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೆದಿಲ ಗ್ರಾಮದ ಗಡಿಯಾರ ಪಿ.ಕೆ. ಅಬ್ಬು
ಮನೆಯ ಹಿಂಬದಿಯ ಕೊಟ್ಟಿಗೆಯಲ್ಲಿ ಕ್ರತ್ಯ ಬೆಳಕಿಗೆ ಬಂದಿದ್ದು ಪಿ.ಕೆ ಅಬ್ಬು, ಮೊಹಮ್ಮದ್ ಇಸ್ಮಾಯಿಲ್, ಮೊಹಮ್ಮದ್ ಶರೀಫ್, ಮೊಹಮ್ಮದ್ ಸಿನಾನ್, ಮೊಹಮ್ಮದ್ ಮರ್ಷದ್ ಬಂದಿತ ಆರೋಪಿಗಳು. ಆರೋಪಿಗಳಿಂದ 15 ಸಾವಿರ ಮೌಲ್ಯದ 75 ಕಿಲೋ ಗ್ರಾಂ ದನದ ಮಾಂಸ, ರೂ. 21ಸಾವಿರ ಮೌಲ್ಯದ 4 ಮೊಬೈಲ್ ಪೋನುಗಳು, ಹಾಗೂ ದನದ ಮಾಂಸ ಮಾಡಲು ಬಳಸಿದ 3 ಕತ್ತಿ, ಮರದ ತುಂಡು , ಪ್ಲಾಸ್ಟಿಕ್ ಟಾರ್ಪಾಲು ಹಾಗೂ ಪ್ಲಾಸ್ಟಿಕ್ ಬಕೆಟ್ 1 ನ್ನು ಸ್ವಾಧೀನ ಪಡಿಸಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹಿಂಜಾವೇ ಮಾಹಿತಿ
ಹಿಂದೂ ಜಾಗರಣಾ ವೇದಿಕೆ ಕೆದಿಲ ಘಟಕದ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಪೊಲೀಸರು ಕಾರ್ಯಾಚರಣೆ ವೇಳೆ ಜಾನುವಾರನ್ನು ಹಿಂಸಾತ್ಮಕ ರೀತಿಯಲ್ಲಿ ವಧೆ ಮಾಡಿ ಮಾಂಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಆರೋಪಿ ವಿರುದ್ಧ ಬಂಟ್ವಾಳದಲ್ಲೂ ಪ್ರಕರಣ:
ಆರೋಪಿಗಳ ಪೈಕಿ ಇಸ್ಮಾಯಿಲ್ ವಿರುದ್ಧ ಈ ಹಿಂದೆ ಅಕ್ರದ ಗೋ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ಇದೀಗ ಇನ್ನೊಮ್ಮೆ