Advertisement

ಕೇದಾರನಾಥನ ಗುಡಿ ಸ್ವರ್ಣಮಯ: ವ್ಯಕ್ತಿಯೊಬ್ಬರಿಂದ 230 ಕೆಜಿ ಚಿನ್ನ ದಾನ

07:27 PM Oct 27, 2022 | Team Udayavani |

ಡೆಹ್ರಾಡೂನ್‌:ಉತ್ತರಾಖಂಡದಲ್ಲಿರುವ ವಿಶ್ವಪ್ರಸಿದ್ಧ ಕೇದಾರನಾಥ ದೇಗುಲದ ಗರ್ಭಗುಡಿಯನ್ನು ಬಂಗಾರದ ಫ‌ಲಕಗಳಿಂದ ಅಲಂಕರಿಸುವ ಕೆಲಸ ಬುಧವಾರ ಮುಕ್ತಾಯವಾಗಿದೆ. ಶ್ರೀ ಆದಿಶಂಕರಾಚಾರ್ಯರಿಂದಲೇ ನಿರ್ಮಾಣವಾಗಿದೆ ಎಂದು ಬಣ್ಣಿಸಲ್ಪಟ್ಟಿರುವ ಈ ದೇಗುಲದ ಗರ್ಭಗುಡಿಗೆ ಬಳಸಲಾಗಿರುವ ಒಟ್ಟು ಬಂಗಾರ 230 ಕೆಜಿ.

Advertisement

ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಗೌಪ್ಯವಾಗಿ, ವಿಶೇಷ ವಾಹನದಲ್ಲಿ ಬಂಗಾರವನ್ನು ಕಳಿಸಿಕೊಟ್ಟಿದ್ದಾರೆ. ಕಳೆದ ವರ್ಷವೇ ಅವರು ಬಂಗಾರದ ಫ‌ಲಕಗಳನ್ನು ನೀಡುವುದಾಗಿ ಮಾತುಕೊಟ್ಟಿದ್ದರು. ಈ ಪ್ರಕಾರ ಕಳೆದವಾರ 550 ಫ‌ಲಕಗಳನ್ನು ಕಳುಹಿಸಿದ್ದಾರೆ. ಇದನ್ನು ಒಟ್ಟು 19 ಮಂದಿ ಕೆಲಸಗಾರರು ಗರ್ಭಗುಡಿಯ ಗೋಡೆಗಳು, ಮೇಲ್ಫಾವಣಿ, ಶಿವಲಿಂಗದ ಆಸುಪಾಸುಗಳಿಗೆ ಅಳವಡಿಸಿದ್ದಾರೆ. ಇದನ್ನು ಭಾರತೀಯ ಪುರಾತಣ್ತೀ ಇಲಾಖೆ (ಎಎಸ್‌ಐ), ರೂರ್ಕಿ ಐಐಟಿ ಎಂಜಿನಿಯರ್‌ಗಳು ಪರಿಶೀಲಿಸಿದ್ದಾರೆ.

ಬಂಗಾರದ ಲೇಪನದ ಮುಂಚಿನ ಕೆಲಸಗಳು ಒಂದೂವರೆ ತಿಂಗಳ ಹಿಂದೆಯೇ ಆರಂಭವಾಗಿದ್ದವು. ಹೊಸ ಫ‌ಲಕಗಳನ್ನು ಅಳವಡಿಸಲು ಬೇಕಾದ ಅಳತೆಯನ್ನು ತಿಳಿದುಕೊಳ್ಳಲು ಮೊದಲು ಕಂಚಿನ ಫ‌ಲಕಗಳನ್ನು ಅಳವಡಿಸಲಾಗಿತ್ತು. ಈ ಫ‌ಲಕಗಳನ್ನು ಮಹಾರಾಷ್ಟ್ರಕ್ಕೆ ಕಳುಹಿಸಿ, ಅಲ್ಲಿಂದ ಚಿನ್ನದ ಫ‌ಲಕಗಳನ್ನು ತರಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next