Advertisement

ಮೋದಿ ಗುಹೆಯಾದ ಕೇದಾರದ ಧ್ಯಾನ ಕುಟೀರ

11:34 PM May 22, 2019 | mahesh |

ಡೆಹ್ರಾಡೂನ್‌: ಪ್ರಧಾನಿ ನರೇಂದ್ರ ಮೋದಿ ಧ್ಯಾನಗೈದ ಕೇದಾರನಾಥದ ಧ್ಯಾನ ಕುಟೀರ ಈಗ ಮೋದಿ ಗುಹೆ ಎಂದೇ ಖ್ಯಾತಿ ಪಡೆದಿದೆ. ಈ ಗುಹೆ ಈಗ ಜನಪ್ರಿಯ ಅಧ್ಯಾತ್ಮ ಪ್ರವಾಸ ತಾಣವೂ ಆಗಿದೆ. ಗರ್ವಾಲ್‌ ಮಂಡಲ್‌ ವಿಕಾಸ ನಿಗಮ ಅಭಿವೃದ್ಧಿಪಡಿಸಿದ ಈ ಧ್ಯಾನ ಕುಟೀರಗಳು, ಕೇದರನಾಥ ದೇಗುಲದಿಂದ 2 ಕಿ.ಮೀ. ದೂರದಲ್ಲಿವೆ.

Advertisement

ಸದ್ಯ ಈ ಕುಟೀರದಲ್ಲಿ ಅಳವಡಿಸಲಾಗಿರುವ ಬೆಲ್‌ ಹಾಳಾಗಿರುವುದರಿಂದ, ಇದನ್ನು ಸರಿಪಡಿಸಿದ ಅನಂತರ ಬುಕಿಂಗ್‌ ಆರಂಭಿಸಲಾಗುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ. ಬುಕಿಂಗ್‌ ರದ್ದುಗೊಳಿಸಿದ್ದ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಇಲ್ಲಿ ಐಶಾರಾಮಿ ಸೌಲಭ್ಯಗಳನ್ನು ಮೋದಿಗಾಗಿ ಕಲ್ಪಿಸಲಾಗಿತ್ತು ಎಂದು ಊಹಾಪೋಹಗಳು ಹಬ್ಬಿದ್ದವು. ಆದರೆ ಇದನ್ನು ತಳ್ಳಿಹಾಕಿದ ಆಡಳಿತ ಮಂಡಳಿ, ಇಲ್ಲಿ ಒಂದು ಹಾಸಿಗೆ ಇದೆ. ಸ್ನಾನದ ವ್ಯವಸ್ಥೆ ಹಾಗೂ ಶೌಚಾಲಯವಿದೆ. ಉಳಿದಂತೆ ಸಂವಹನಕ್ಕೆ ಫೋನ್‌ ಹಾಗೂ ಬೆಲ್‌ ಇದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next