Advertisement

ಕೇದಾರ, ಬದರಿ ದೇಗುಲಕ್ಕಿಲ್ಲ ಸರಕಾರಿ ನಿಯಂತ್ರಣ

07:24 AM Apr 10, 2021 | Team Udayavani |

ಡೆಹ್ರಾಡೂನ್‌: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ದೇಗುಲಗಳು ಸರಕಾರದ ಆಡಳಿತದಿಂದ ಮುಕ್ತವಾಗಬೇಕು ಎಂಬ ಹಕ್ಕೊತ್ತಾಯ ಇದೆ. ಇದಕ್ಕೆ ಪೂರಕವಾಗಿ ಪ್ರಸಿದ್ಧ ಯಾತ್ರಾ ಸ್ಥಳ ಬದರೀನಾಥ, ಕೇದಾರನಾಥ ದೇಗುಲಗಳ ಆಡಳಿತ ಸರಕಾರದ ನಿಯಂತ್ರಣದಿಂದ ಮುಕ್ತ ವಾಗಿದೆ. ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ ಸಿಂಗ್‌ ರಾವತ್‌ ಈ ಬಗೆಗಿನ ಆದೇಶಕ್ಕೆ ಶುಕ್ರವಾರ ಸಹಿ ಹಾಕಿದ್ದಾರೆ. ಇದರಿಂದಾಗಿ ಒಟ್ಟು 51 ದೇಗುಲಗಳ ಆಡಳಿತ ನಿರ್ವಹಣೆ ಸ್ವತಂತ್ರವಾಗಿಯೇ ನಿರ್ವಹಣೆ ಯಾಗಲಿದೆ. ಸರಕಾರಿ ಹಿಡಿತದಿಂದ ಮುಕ್ತಗೊಂಡ ದೇಗುಲಗಳ ಪೈಕಿ ಯಮುನೋತ್ರಿ, ಗಂಗೋತ್ರಿಯೂ ಸೇರಿದೆ.

Advertisement

ವಿಶ್ವಹಿಂದೂ ಪರಿಷತ್‌ ಮತ್ತು ಇತರ ಹಿಂದೂ ಸಂಘಟನೆಗಳ ಮುಖಂಡರ ಜತೆಗೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ತೀರಥ್‌ ಸಿಂಗ್‌ ರಾವತ್‌ ಈ ನಿರ್ಧಾರ ಪ್ರಕಟಿಸಿದ್ದಾರೆ.

ಉತ್ತರಾಖಂಡದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಚಾರ್‌ಧಾಮ್‌ ದೇವಸ್ಥಾನಮ್ಸ್‌ ನಿರ್ವಹಣ ಮಸೂದೆಗೆ ನಿಕಟಪೂರ್ವ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಅನುಮೋದನೆ ನೀಡಿದ್ದರು. ಅದಕ್ಕೆ ಬಿಜೆಪಿಯ ಕೆಲವು ಮುಖಂಡರು ಮತ್ತು ವಿಪಕ್ಷ ಕಾಂಗ್ರೆಸ್‌ ನಾಯಕರು ಭಾರೀ ಆಕ್ಷೇಪ ಮಾಡಿದ್ದರು. ಜತೆಗೆ ಅರ್ಚಕ ವೃಂದ ಮತ್ತು ಇತರ ಸಿಬಂದಿಯೂ ಪ್ರತಿಭಟನೆ ನಡೆಸಿದ್ದರು. ಮುಂದಿನ ವರ್ಷ ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೆ ಪೂರಕವಾಗಿ ನೂತನ ಸಿಎಂ ಪ್ರಮುಖ ನಿರ್ಧಾರ ಪ್ರಕಟಿಸಿದ್ದಾರೆ. ಹೊಸ ಮಸೂದೆಗೆ ರಾಜ್ಯಪಾಲರೂ ಸಹಿ ಹಾಕಿದ ಬಳಿಕ ಕಾಯ್ದೆಯಾಗಿ ಮಾರ್ಪಾಡಾಗಿತ್ತು. ಇದರಿಂದ ದೇಗುಲಗಳ ಆಡಳಿತ ನಿರ್ವಹಣೆ ಸರಕಾರದ ವಶಕ್ಕೆ ಬಂದಿತ್ತು. ಅದರಿಂದ ದೇಗುಲಗಳನ್ನು ವೃತ್ತಿಪರವಾಗಿ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಹೇಳಲಾಗಿತ್ತು. ಈ ಟ್ರಸ್ಟ್‌ಗೆ ಮುಖ್ಯಮಂತ್ರಿಯೇ ಅಧ್ಯಕ್ಷ.

ತಮಿಳುನಾಡು ವಿಧಾನಸಭೆ ಚುನಾ ವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆ ಯಲ್ಲಿಯೂ ಕೂಡ ಪಕ್ಷ ಅಧಿಕಾರಕ್ಕೆ ಬಂದರೆ ದೇಗುಲಗಳನ್ನು ಸರಕಾರಿ ಹಿಡಿತದಿಂದ ಮುಕ್ತಿಗೊಳಿಸು ವುದಾಗಿ ವಾಗ್ಧಾನ ಮಾಡಿತ್ತು. ಬಿಜೆಪಿ ರಾಜ್ಯಸಭಾ ಸದಸ್ಯ ಡಾ| ಸುಬ್ರಹ್ಮಣ್ಯಂ ಸ್ವಾಮಿ, ಸರಕಾರದ ನಿಯಂತ್ರಣದಲ್ಲಿ ದೇಗುಲಗಳು ಏಕೆ ಇರಬೇಕು ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದು ಇನ್ನೂ ವಿಚಾರಣೆಯ ಹಂತದಲ್ಲಿದೆ.

ಸುಪ್ರೀಂಕೋರ್ಟ್ ನಲ್ಲಿ ಡಾ| ಸ್ವಾಮಿ ಕೇಸು
ಪೂಜಾ ಸ್ಥಳಗಳ ಕಾಯ್ದೆ (ವಿಶೇಷ ನಿಬಂಧನೆ) ಕಾಯ್ದೆ 1991ರ ಅನ್ವಯ ಸರಕಾರಗಳೇ ಏಕೆ ದೇಗುಲಗಳ ಆಡಳಿತ ನಿರ್ವಹಿಸಿಕೊಳ್ಳಬೇಕು ಎಂಬುದನ್ನು ಪ್ರಶ್ನೆ ಮಾಡಿ ಬಿಜೆಪಿ ರಾಜ್ಯಸಭಾ ಸದಸ್ಯ ಡಾ| ಸುಬ್ರಹ್ಮಣ್ಯಂ ಸ್ವಾಮಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯನ್ನೂ ಪ್ರಶ್ನಿಸಿದ್ದಾರೆ. ಕಳೆದ ತಿಂಗಳ 21ರಂದು ನಡೆದಿದ್ದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ದೆ ನೇತೃತ್ವದ ನ್ಯಾಯಪೀಠ ಡಾ| ಸ್ವಾಮಿಗೆ ನೋಟಿಸ್‌ ನೀಡಿತ್ತು.

Advertisement

ಸುಪ್ರೀಂ ಕೋರ್ಟ್‌ನಲ್ಲಿ ನಾನು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಲಿರು ವಂತೆಯೇ ಉತ್ತರಾಖಂಡ ಸರಕಾರ 51 ದೇಗುಲಗಳನ್ನು ತನ್ನ ಹಿಡಿತದಿಂದ ಮುಕ್ತಗೊಳಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮವಾಗಿ ಸ್ಪಂದಿಸುವ ಸರಕಾ ರದ ವೈಖರಿ ಹೀಗಿರಬೇಕು.
– ಡಾ| ಸುಬ್ರಹ್ಮಣ್ಯಂ ಸ್ವಾಮಿ ಬಿಜೆಪಿ ರಾಜ್ಯಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next