Advertisement

ಕೇದಾರ ಶ್ರೀ ಸಂಗೀತಯುಕ್ತ ಇಷ್ಟಲಿಂಗ ಪೂಜೆ

03:54 PM Dec 18, 2018 | |

ದಾವಣಗೆರೆ: ಪರಂಪರೆ ರಕ್ಷಣಾ ದಿನಾಚರಣೆ ಅಂಗವಾಗಿ ದಾವಣಗೆರೆಯ ತ್ರಿಶೂಲ್‌ ಕಲಾಭವನದಲ್ಲಿ ಡಿ. 21 ಮತ್ತು
22 ರಂದು ಶ್ರೀ ಹಿಮವತೆದಾರ ಭೀಮಾಶಂಕರಲಿಂಗ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ
ಹಾಗೂ ಧರ್ಮ ಸಂಗಮ ಸಮಾರಂಭ ನಡೆಯಲಿದೆ.

Advertisement

ಸೋಮವಾರ, ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ
ಶಿವಾಚಾರ್ಯ ಸ್ವಾಮೀಜಿ, ಶ್ರೀ ಕೇದಾರ ಜಗದ್ಗುರುಗಳ ಭಕ್ತರ ಅಪೇಕ್ಷೆಯಂತೆ ಬಹು ದಿನಗಳ ನಂತರ ದಾವಣಗೆರೆಯಲ್ಲಿ ಶ್ರೀ ಭೀಮಾಶಂಕರಲಿಂಗ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ನಡೆಯುತ್ತಿದೆ ಎಂದರು.

21ರ ಸಂಜೆ 6 ಗಂಟೆಗೆ ಶ್ರೀ ಹಿಮವತ್ಕೇದಾರ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ನಡೆಯುವ ಪರಂಪರೆ ರಕ್ಷಣಾ ದಿನಾಚರಣೆಯ ಧರ್ಮಸಂಗಮ ಸಮಾರಂಭದಲ್ಲಿ ಮೇಯರ್‌ ಶೋಭಾ ಪಲ್ಲಾಗಟ್ಟೆ, ಕಲಬುರುಗಿಯ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಡಾ| ಎಚ್‌. ಎಂ. ಮಹೇಶ್ವರಯ್ಯ, ವಿಧಾನ ಪರಿಷತ್‌
ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಎನ್‌. ಎಂ.ಜೆ.ಬಿ. ಮುರಿಗೇಶ್‌ ಆರಾಧ್ಯ, ಇತರರು ಭಾಗವಹಿಸುವರು ಎಂದು ತಿಳಿಸಿದರು.

ಶಿರಕೋಳದ ಶ್ರೀ ಗುರುಸಿದ್ಧದೇವ ಶಿವಾಚಾರ್ಯ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಹೂಲಿಯ ಶ್ರೀ ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ, ಚಿಕ್ಕವೀರೇಶ್ವರಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯ
ಸ್ವಾಮೀಜಿ ಇತರರು ಪಾಲ್ಗೊಳ್ಳುವರು. ಅನ್ಯರ್ಘ‌ರತ್ನ…, ಶಿವಯೋಗಿ ಕಂಡ ಕನಸು, ತ್ರಿಪದಿ ಪ್ರಬೋಧಿನಿ, ಪರಶಿವನ
ಇಪ್ಪತ್ತೈದು ಲೀಲೆಗಳು, ವಿಧಿಯ ಕುದುರೆ… ಕೃತಿ ಲೋಕಾರ್ಪಣೆಗೊಳ್ಳಿವೆ ಎಂದು ತಿಳಿಸಿದರು.

ಶನಿವಾರ ಬೆಳಗ್ಗೆ 5ಕ್ಕೆ ಗೀತಾಂಜಲಿ ಚಿತ್ರಮಂದಿರ ಸಮೀಪದ ಶ್ರೀ ಲಿಂಗೇಶ್ವರ ದೇವಸ್ಥಾನದಿಂದ ತ್ರಿಶೂಲ್‌ ಕಲಾಭವನದವರೆಗೆ 11ಕ್ಷೇತ್ರಗಳ ವೀರಭದ್ರ ದೇವರ ಗುಗ್ಗಳ ನಡೆಯಲಿದೆ. 8ಕ್ಕೆ ಶ್ರೀ ಹಿಮವತ್ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಪೂಜೆ ನಡೆಸಿಕೊಡುವರು. ಮಧ್ಯಾಹ್ನ 12.30ರ
ವರೆಗೆ ಪೂಜೆ ನಡೆಯಲಿದೆ ಎಂದು ತಿಳಿಸಿದರು. ಅಂದು ಸಂಜೆ 6ಕ್ಕೆ ಶ್ರೀ ಹಿಮವತ್ಕೇದಾರ ಭೀಮಾಶಂಕರಲಿಂಗ
ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಪರಂಪರೆ ರಕ್ಷಣಾ ದಿನಾಚರಣೆಯ ಧರ್ಮಸಂಗಮ ಸಮಾರಂಭ ನಡೆಯಲಿದೆ. ಅಖೀಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಶ್ರೀ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ
ಸ್ವಾಮೀಜಿ ನೇತೃತ್ವ ವಹಿಸುವರು. ಶ್ರೀ ಶಿವಮೂರ್ತಿ ಶಿವಾಚಾರ್ಯಸ್ವಾಮೀಜಿ ಉಪದೇಶಾನೃತ ನೀಡುವರು. ಶ್ರೀ
ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚಂದ್ರಗುಂಡ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು ಎಂದು ತಿಳಿಸಿದರು. 

Advertisement

ಪಶುಸಂಗೋಪನಾ ಇಲಾಖಾ ಸಚಿವ ವೆಂಕಟರಾವ್‌ ನಾಡಗೌಡ, ಅಖೀಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಎಸ್‌.ವಿ. ರಾಮಚಂದ್ರ, ವಿ. ಸೋಮಣ್ಣ, ಕೆ. ಅಬ್ದುಲ್‌ ಜಬ್ಟಾರ್‌, ಕೈಗಾರಿಕೋದ್ಯಮಿ ಅಥಣಿ ಎಸ್‌. ವೀರಣ್ಣ ಇತರರು ಭಾಗವಹಿಸುವರು ಎಂದು ತಿಳಿಸಿದರು.

ಶ್ರೀ ಕೇದಾರ ಜಗದ್ಗುರುಗಳ ಪೂಜಾ ಸಮಿತಿಯ ಕೆ.ಆರ್‌. ಶಿವಕುಮಾರ್‌, ಕೆ.ಎಂ. ಸುರೇಶ್‌, ಅಜ್ಜಂಪುರಶೆಟ್ರಾ ಮೃತ್ಯುಂಜಯ, ಎನ್‌. ರಾಜಶೇಖರ್‌, ಶಿವಯೋಗಿ ಕಂಬಾಳಿಮಠ…, ಬಿಳಿಚೋಡು ವೀರಣ್ಣ, ಮಳಲಕೆರೆ ಗುರುಮುರ್ತಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next