ಉಡುಪಿ: ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಅಲ್ಲಲ್ಲಿ ವ್ಯಾಪಾರಿಗಳ ದಂಡು. ಮಳೆಯ ನಡುವೆಯು ಬಿರುಸಿನಿಂದ ವ್ಯಾಪಾರ. ಗೋಪಿಕಾ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಾಸನ, ಕೊಪ್ಪಳ ಹೀಗೆ ನಾನಾ ಕಡೆಗಳಿಂದ ಬಂದು ವ್ಯಾಪಾರ ನಡೆಸುತ್ತಿದ್ದಾರೆ. ಬಣ್ಣ ಬಣ್ಣದ ಹೂವಿನ ರಾಶಿ ನೋಡುವುದೇ ಒಂದು ಹಬ್ಬ. ಸೇವಂತಿಗೆ, ಜಾಜಿ, ಕೇದಗೆ, ಸಂಪಿಗೆ,ಮಲ್ಲಿಗೆಯ ಘಮ ರಥಬೀದಿಯ ಸುತ್ತ ಹಬ್ಬಿದ್ದು ಭಕ್ತ ವರ್ಗದ ಉಲ್ಲಾಸ ಹೆಚ್ಚಿಸಿದೆ.
ಕಣ್ಮನ ಸೆಳೆಯುವ ಕೇದಗೆ
ಹೂಗಳ ಸಂತೆಯಲ್ಲಿ ಎಲ್ಲಾ ಹೂಗಳ ಒಂದು ಆಕರ್ಷಣೆಯಾದರೆ ಕೇದಗೆ ಹೂವಿನದ್ದೇ ಒಂದು ಆಕರ್ಷಣೆ. ಉದ್ದದ ಎಲೆಯ ಮಧ್ಯೆ ಹಳದಿ ಬಣ್ಣದ ಪತ್ರಗಳ ಆಕಾರದ ಹೂವಿನ ಸೌಂದರ್ಯ ಕಣ್ಮನ ಸೆಳೆಯುವಂತದ್ದು. ಅತ್ಯಂತ ವಿರಳ ಮತ್ತು ಸುವಾಸನೆಯುಕ್ತ ಹೂ.
ಜೌಗು ಪ್ರದೇಶದಲ್ಲಿ ಗುಂಪಾಗಿ ಗಿಡದಲ್ಲಿ ಬೆಳೆಯುವ ಕೇದಗೆ ಹೂವಿಗೆ ಹಬ್ಬದ ದಿನಗಳಲ್ಲಿ ಬಹು ಬೇಡಿಕೆ. ಈ ಸಮಯದಲ್ಲಿ ಒಂದು ಹೂವಿನ ಬೆಲೆ ಬೆಲೆ 100 ರಿಂದ 150 ರ ವರೆಗೆ ಇದೆ.
ಶ್ರೀಲೋಲ ಕೃಷ್ಣನಿಗೆ ಈ ಹೂವು ಪ್ರಿಯ ಪುಷ್ಪಗಳಲ್ಲಿ ಒಂದು ಹಾಗಾಗಿಯೇ ಇದನ್ನು ಕೃಷ್ಣ ಪ್ರಿಯ ಪುಷ್ಪ ಎನ್ನುತ್ತಾರೆ.
ವಿಜಿತ