Advertisement

KEA ಪರೀಕ್ಷಾ ಅಕ್ರಮ; ಸಿಐಡಿಯಿಂದ ಇಬ್ಬರು ಪ್ರಾಂಶುಪಾಲರು ಸೇರಿ 7 ಮಂದಿ ಬಂಧನ

08:56 PM Nov 15, 2023 | Team Udayavani |

ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬುಧವಾರ ಒಟ್ಟು 7 ಜನರನ್ನು ಬಂಧಿಸಿದ್ದಾರೆ. ಇವರಲ್ಲಿ ಓರ್ವ ಬೆಳಗಾವಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಮತ್ತು ಇಬ್ಬರು ಪ್ರಾಂಶುಪಾಲರು ಸೇರಿದ್ದಾರೆ.

Advertisement

ಬಂಧಿತರನ್ನು ಎಇರುದ್ರಗೌಡ, ಶಿವಕುಮಾರ, ರಹೀಮ್ ಚೌಧರಿ, ಸಿದ್ಧರಾಮ, ರವಿಕುಮಾರ, ಅಫಜಲಪುರದ ಪ್ರಾಂಶುಪಾಲ ಚಂದ್ರಕಾಂತ್ ಮತ್ತು ಬಸಣ್ಣ ಪೂಜಾರಿ ಎಂದು ಗೊತ್ತಾಗಿದೆ.ಬಂಧಿತ ಎಇ ರುದ್ರಗೌಡ ಅಕ್ರಮದ ರೂವಾರಿ ಆರ್.ಡಿ.ಪಾಟೀಲನ ಆಪ್ತ ಮತ್ತು ತಾಂತ್ರಿಕ ಸಲಹೆ ನೀಡುತ್ತಿದ್ದನಲ್ಲದೆ, ಅಭ್ಯರ್ತಿಗಳನ್ನು ಹುಡುಕಿದ್ದ. ಈತನ ಮನೆಯಲ್ಲಿ ತಪಾಸಣೆ ಮಾಡಿದಾಗ 17 ಅಭ್ಯರ್ಥಿಗಳ ಪ್ರವೇಶ ಪತ್ರ ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ಇಬ್ಬರು ಪ್ರಾಂಶುಪಾಲರು ವಶಕ್ಕೆ

ಕೆಇಎ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬುಧವಾರ ಅಫಜಲಪುರ ಮೂಲದ ಇಬ್ಬರು ಕರಜಗಿ ಮತ್ತು ಅಫಜಲಪುರ ಕಾಲೇಜುಗಳ ಪ್ರಿನ್ಸಿಪಾಲ್‌ರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.

ಬಂಧಿತರನ್ನು ಚಂದ್ರಕಾಂತ್ ಹಾಗೂ ಬಸಣ್ಣ ಪೂಜಾರಿ ಎಂದು ಗುರುತಿಸಲಾಗಿದೆ. ಚಂದ್ರಕಾಂತ್ ಅಫಜಲಪುರ ತಾಲೂಕಿನ ಕರಜಗಿ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುತ್ತಿದ್ದು, ಕೆಇಎ ಪರೀಕ್ಷೆಯಲ್ಲಿ ರಾಯಲ್ ಪಬ್ಲಿಕ್ ಶಾಲೆಯಲ್ಲಿ ನಡೆದಿದ್ದ ಪರೀಕ್ಷಾ ವ್ಯವಸ್ಥೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

Advertisement

ಬಸಣ್ಣ ಪೂಜಾರಿ ಅಫಜಲಪುರ ಸರಕಾರಿ ಪಿಯು ಕಾಲೇಜಿನ ಪ್ರಭಾರಿ ಪ್ರಿನ್ಸಿಪಾಲ್ ಆಗಿದ್ದು, ರಾಯಲ್ ಪಬ್ಲಿಕ್ ಶಾಲೆಯಲ್ಲಿ ನಡೆದಿದ್ದ ಪರೀಕ್ಷೆಯ ಪತ್ರಿಕೆಯ ಕಸ್ಟೋಡಿಯನ್ ಆಗಿದ್ದರು. ಇವರು ಪ್ರಶ್ನೆ ಪತ್ರಿಕೆಯ ಫೋಟೋ ಕಾಪಿ ಹಂಚಿಕೆ ಮಾಡಿರುವ ಸಾಧ್ಯತೆ ಇದ್ದು ಇವರನ್ನು ಮಾಡಿದ ಬಳಿಕ ಸತ್ಯ ಹೊರ ಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next