ಶಿರಸಿ: 103 ವರ್ಷ ಪೂರೈಸಿ 104 ನೇ ವರ್ಷದಲ್ಲಿ ಇರುವ ಕೆಡಿಸಿಸಿ ಬ್ಯಾಂಕ್ ಈ ಸಾಲಿನಲ್ಲಿ 15.56 ಕೋಟಿ ರೂಪಾಯಿ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿಸುದ್ದಿಗೋಷ್ಠಿ ನಡೆಸಿ, ಬ್ಯಾಂಕಿನ ಶೇರು ಬಂಡವಾಳ94.48 ಕೋ.ರೂ.ದಿಂದ 110.39 ಕೋಟಿಗೆ, 187.65 ಕೋಟಿಯಿಂದ242.31 ಕೋ.ರೂಗೆ, ಠೇವಣಿ 2957.45 ಕೋಟಿಯಿಂದ 3057.08 ಕೋ.ರೂ.ಗೆ ಏರಿದೆ. ದುಡಿಯುವ ಬಂಡವಾಳ 4098.58 ಕೋ.ರೂ, ಸಾಲಬಾಕಿ 2805.58 ಕೋ.ರೂ.ಇದೆ. ಅನುತ್ಪಾದಕ ಸಾಲ ಮೊತ್ತ 1.62 ಶೇಕಡಾ ಇದೆ ಎಂದರು.
ಪ್ರಧಾ ಮಂತ್ರಿಫಸಲ ಭೀಮಾಕ್ಕೆ 61260 ರೈತರಿಗೆ, ಬೆಳೆ ವಿಮೆ 79643 ರೈತರು ಒಳಪಟ್ಟಿದ್ದಾರೆ. ರೈತರಿಗೆ 10 ವರ್ಷದ ಕಂತಿನಲ್ಲಿ ಸಾಲ ನೀಡಿದ್ದೇವೆ. 31 ಲ.ರೂ.ವಿದ್ಯಾರ್ಥಿ ಸಾಲ ನೀಡಿದ್ದೇವೆ. ಹೈನುಗಾರರಿಗೂ ಸಾಲ ನೀಡಿದ್ದೇವೆ. ರೈತರಿಗೆ ಫಾರಂ ಹೌಸ್ ಗೆ 50 ಲ.ರೂ. 15 ವರ್ಷದ ಅವಧಿಯಲ್ಲಿ ಘೋಷಿಸಿದ್ದೆವು.167 ಜನರಿಗೆ ಈಗಾಗಲೇ ಮನೆ ಕಟ್ಟಲು ಅವಕಾಶ ಸಿಕ್ಕಿದೆ. ಬ್ಯಾಂಕ್ ನ 7 ಸ್ವಂತ ಎಟಿಎಂ ಇದೆ. ಎಲ್ಲ ಬ್ಯಾಂಕ್ ಆಧುನಿಕರಣ ಆಗಿದೆ. ರಾಜ್ಯದಲ್ಲಿ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿದೆ. ಬ್ಯಾಂಕ್ 74 ಶಾಖೆ ಹೊಂದಿದೆ. ನಮ್ಮ ಸಾಧನೆ ಗಮನಿಸಿ 26 ವರ್ಷದ ಬಳಿಕ ಅಫೆಕ್ಸ ಬ್ಯಾಂಕ್ ಗೆ ಪ್ರಶಸ್ತಿ ಲಭಿಸಿದೆ ಎಂದರು.
ಬ್ಯಾಂಕ್ ಕೃಷಿಕರಿಗೆ ಬೆಳೆ ಸಾಲಕ್ಕೆ 960 ಕೋಟಿ ರೂ. ಇದ್ದು ಶೇ.96 ವಿತರಣೆ ಮಾಡಿದ್ದೇವೆ ಎಂದ ಅವರು, ಶೇ.52 ರಷ್ಟು ಜಾಸ್ತಿ ಹಣ ಕೃಷಿಗೇ ಕೊಟ್ಟಿದ್ದು ವಿಶೇಷವಾಗಿದೆ. 103 ವರ್ಷದಲ್ಲೂ ಬ್ಯಾಂಕ್ ಲಾಭದಲ್ಲಿದೆ ಎಂದರು. 133 ಸಿಬಂದಿ ಕೊರತೆ ಇದೆ. ಸ್ಪಷ್ಟತೆಯಿಂದ ನೇಮಕಾತಿ ಮಾಡುತ್ತೇವೆ ಎಂದರು.
ಉಪಾಧ್ಯಕ್ಷ ಮೋಹನದಾಸ ನಾಯಕ, ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗ್ವತ್, ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಶಿವಾನಂದ ಹೆಗಡೆ ಕಡತೋಕ,ಆರ್.ಎಂ.ಹೆಗಡೆ ಬಾಳೆಸರ, ರಾಮಕೃಷ್ಣಹೆಗಡೆ ಕಡವೆ ಉಪಸ್ಥಿತರಿದ್ದರು.