Advertisement

ನ.11ಕ್ಕೆ ಕೆಡಿಸಿಸಿ ಬ್ಯಾಂಕ್‌ ಚುನಾವಣೆ : 30 ರಿಂದ ನಾಮಪತ್ರ ಸಲ್ಲಿಕೆ ಶುರು

11:28 AM Oct 08, 2020 | sudhir |

ಶಿರಸಿ: ವಾರ್ಷಿಕ ಕೋಟ್ಯಾಂತರ ರೂ. ಲಾಭಗಳಿಸುತ್ತಿರುವ ಫೆಡರಲ್‌ ಸಹಕಾರ ಸಂಘದಡಿ ಬರುವ ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ (ಕೆಡಿಸಿಸಿ) ಚುನಾವಣೆ ನ.11 ರಂದು ನಡೆಯಲಿದೆ. ಅ.30 ರಿಂದ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ
ಹೊರಡಿಸಲಾಗಿದೆ. ನ.3 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

Advertisement

ಉತ್ತರ ಕನ್ನಡ ಜಿಲ್ಲೆಯ ಒಟ್ಟೂ 16 ವಿವಿಧ ಸಹಕಾರಿ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ನ.4 ನಾಮಪತ್ರ ಪರಿಶೀಲನೆ ಹಾಗೂ ನ.5 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನ.11 ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ.

ಇನ್ನಷ್ಟು ವಿವರಗಳು: ಚುನಾವಣೆ ಪ್ರಕ್ರಿಯೆ ಘೋಷಣೆ ಆಗುವ ಮೊದಲೇ ಸ್ಪರ್ಧಾಳುಗಳು ಪೈಪೋಟಿ ಆರಂಭಿಸಿದ್ದಾರೆ. ತಾಲೂಕು ಪ್ರಾತಿನಿಧ್ಯ ಹೊತುಪಡಿಸಿ ಉಳಿದ ಐದು ಪ್ರಾತಿನಿಧಿಕ ಸಂಘ, ಸಂಸ್ಥೆಗಳ ಚುನಾವಣೆಗೆ ಮತದಾರರು ಜಿಲ್ಲೆಯಲ್ಲಿದ್ದು, ಈ ಕುರಿತೂ ಆಕಾಂಕ್ಷಿಗಳ ಓಡಾಟ ಜೋರಾಗಿ ನಡೆದಿದೆ. ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವ ಅಭ್ಯರ್ಥಿಗಳು ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ನ.4 ರಂದು ಬೆಳಗ್ಗೆ 11 ಗಂಟೆಯಿಂದ ಚುನಾವಣಾ ಅಧಿಕಾರಿಗಳಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅದೇ ದಿನ ಸಂಜೆ ಬ್ಯಾಂಕಿನ ಸೂಚನಾ ಫಲಕದ ಮೇಲೆ
ಅಭ್ಯರ್ಥಿಗಳ ಪಟ್ಟಿ ಹಾಕಲಿದ್ದಾರೆ.

ನ.5 ರ ನಂತರ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಆಗಲಿದ್ದು, ಸಿಂಧುತ್ವ ಹೊಂದಿರುವ ಉಮೇದುವಾರರ ಪಟ್ಟಿಯನ್ನು ನ.7 ರ ಸಂಜೆ 4ಕ್ಕೆ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಪ್ರಕಟಿಸಲಾಗುವುದು. ಚುನಾವಣಾ ಅಧಿಕಾರಿಯಾಗಿ ಶಿರಸಿ ಉಪವಿಭಾಧಿಕಾರಿ ಆಕೃತಿ ಬನ್ಸಾಲ್‌ ಕಾರ್ಯನಿರ್ವಹಿಸಲಿದ್ದಾರೆ.

ರಂಗ ತಾಲೀಮು: ಐದು ಪ್ರಾತಿನಿಧಿಕ ಸಂಘ, ಸಂಸ್ಥೆಗಳ ನಿರ್ದೇಶಕ ಸ್ಥಾನದ ಆಕಾಂಕ್ಷಿತರು ಇಡೀ ಜಿಲ್ಲೆಯ ಓಡಾಟ ಮಾಡುತ್ತಿದ್ದಾರೆ. ಈಗಾಗಲೇ ಒಂದು ಹಂತದ ಓಡಾಟ ನಡೆದಿದೆ. ತಮಗೆ ಬೇಕಾದವರಿಗೆ ಮತಪತ್ರ ಕೊಡಿಸುವ ಠರಾವಿನ ಕಾರ್ಯಕ್ಕೂ ಒತ್ತಡ ನಡೆದಿವೆ. ಆ ಮತಗಳನ್ನು ಒಲಿಸಿಕೊಳ್ಳಲು, ವಿಶ್ವಾಸಗಳಿಸಲು ಶ್ರಮ ಆರಂಭವಾಗಿದೆ. ಕೆಲವರು ಹಗಲು ರಾತ್ರಿ ಎನ್ನದೇ ಓಡಾಟ ಶುರು ಮಾಡಿದ್ದಾರೆ. ಐದು ವರ್ಷಗಳ ಕೆಡಿಸಿಸಿ ಗದ್ದುಗೆ ಉಳಿಸಿಕೊಳ್ಳುವ, ಗಳಿಸಿಕೊಳ್ಳುವ ಕನಸು
ಹೆಣೆಯುತ್ತಿದ್ದಾರೆ.

Advertisement

ಯಾರಿಗೆ ಹಿತವರು?: ಕೆಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಹಲವು ಪ್ರತಿಷ್ಠಿತರಿಗೂ ಸ್ಪರ್ಧಿಯಾಗಿ ಹಲವರು ಕಣಕ್ಕೆ ಇಳಿಯಲಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಲ್ಲಿದ್ದ ಶಿವರಾಮ ಹೆಬ್ಟಾರ್‌, ಸತೀಶ ಸೈಲ್‌, ಮಂಕಾಳು ವೈದ್ಯರನ್ನೂ ಕರೆತಂದಿದ್ದರು. ಈ ಬಾರಿ ಅವರು ಬಿಜೆಪಿಯಲ್ಲಿದ್ದು, ಸಚಿವರೂ ಆಗಿದ್ದಾರೆ. ಶಿವರಾಮ ಹೆಬ್ಟಾರ್‌ ಅವರ ಸೂಚನೆ, ಆಶೀರ್ವಾದ ಬೇಡಿ ಹಲವರು ಕಣಕ್ಕಿಳಿಯಲು ಪ್ರಯತ್ನಿಸುತ್ತಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ಅವರನ್ನೂ ಎರಡು ದಿನಗಳ ಹಿಂದೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾಗಿ ಮೂಲವೊಂದು ತಿಳಿಸಿದೆ. ಹೆಬ್ಟಾರರಿಗೆ ತಮ್ಮ ಬೆಂಬಲ ಯಾವ ಅಭ್ಯರ್ಥಿಗೆ ಎಂಬುದನ್ನು ಸೂಚಿಸಿದ್ದಾಗಿ
ತಿಳಿಸಿದ್ದಾರೆ. ಈ ಕಾರಣದಿಂದಲೂ ಹೆಬ್ಟಾರರು ಸ್ನೇಹದ ಇಕ್ಕಟ್ಟಿನಲ್ಲೂ ಸಿಲುಕಿದ್ದಾರೆ ಎಂಬ ಮಾತುಗಳೂ ಅವರ ಆಪ್ತ ವಲಯದಿಂದಲೇ ಕೇಳಿ ಬಂದಿವೆ.

ಪ್ರತಿಷ್ಠೆಯ ಕಣ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ ಎಲ್ಲಾ ಪಕ್ಷಗಳಿಗೆ, ಸಹಕಾರ ಕ್ಷೇತ್ರದ ಧುರೀಣರಿಗೆ ಪ್ರತಿಷ್ಠೆಯ ಕಣವಾಗಿದೆ. ಈ ಬಾರಿ ಶಾಂತಾರಾಮಹೆಗಡೆ ಶೀಗೇಹಳ್ಳಿ ಅವರನ್ನು ಹೊತುಪಡಿಸಿ ಉಳಿದವರೆಲ್ಲ ಕಣಕ್ಕೆ ಧುಮುಕಲಿದ್ದಾರೆ ಎನ್ನಲಾಗಿದೆ.
ಪ್ರಾಥಮಿಕ ಸಂಘಗಳನ್ನು ಪ್ರತಿನಿಧಿಸುವ ಕಾರಣ ಚುನಾವಣೆ ಈಗಾಗಲೇ ತುರುಸು ಕಾಣಿಸಿಕೊಂಡಿದೆ. ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ಅವರಿಗೆ ಎದುರಾಗಿ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಜಿ.ಆರ್‌. ಹೆಗಡೆ ಸೋಂದಾ ಅವರಿಗೆ
ಚಂದ್ರು ಎಸಳೆ, ವಿನಾಯಕ ಮುಂಡಗೇಸರ, ರಾಮಕೃಷ್ಣ ಹೆಗಡೆ ಕಡವೆ ಎದುರಾಗಿ ಜಿ.ಆರ್‌. ಹೆಗಡೆ ಬೆಳ್ಳೇಕೇರಿ, ಮೋಹನದಾಸರಿಗೆ ದೀಪಕ ದೊಡೂxರು ಅಖಾಡದಲ್ಲಿ ತೊಡೆ ತಟ್ಟುವುದು ಬಹುತೇಕ ಖಚಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next