Advertisement

Sarojini Mahishi ವರದಿ ಶಾಸನವಾಗಿ ರೂಪುಗೊಳ್ಳಲಿ: ಪುರುಷೋತ್ತಮ ಬಿಳಿಮಲೆ

11:53 PM Sep 01, 2024 | Team Udayavani |

ಮಂಗಳೂರು: ರಾಜ್ಯದ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಅವಕಾಶಕ್ಕಾಗಿ ಡಾ| ಸರೋಜಿನಿ ಮಹಿಷಿ ವರದಿ ಶಾಸನ ಆಗಬೇಕು. ಮುಂದಿನ ಅಧಿವೇಶನದಲ್ಲಿ ಸರಕಾರ ವರದಿಯನ್ನು ಶಾಸನ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

Advertisement

ರವಿವಾರ ನಗರದ ಸಕೀìಟ್‌ ಹೌಸ್‌ನಲ್ಲಿ ಸಮಾನ ಮನಸ್ಕರ ಜತೆ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ವರದಿಯಲ್ಲಿ 58 ವಿಭಾಗಗಳಿದ್ದು, ಕೇವಲ 14 ವಿಭಾಗಗಳು ಮಾತ್ರ ಅನುಷ್ಠಾನಕ್ಕೆ ಯೋಗ್ಯವಾಗಿವೆ.

ಹಾಗಾಗಿ ಈ ವರದಿಯ ಯಥಾವತ್‌ ಜಾರಿ ಸಾಧ್ಯವಾಗದು. ಈ 14 ಶಿಫಾರಸನ್ನು ಅನುಷ್ಠಾನಕ್ಕೆ ತರಬೇಕಾದರೆ ವರದಿಯು ಶಾಸನ ರೂಪಕ್ಕೆ ಮಾರ್ಪಾಡಾಗಬೇಕು. ಅದಕ್ಕಾಗಿ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆಯಾಗಿ ಬಳಿಕ ಶಾಸನ ರೂಪ ಪಡೆಯಬೇಕು. ಈ ಕುರಿತಂತೆ ಮುಖ್ಯಮಂತ್ರಿ ಸಹಿತ ಎಲ್ಲ ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಈ ವರದಿ ಕಾನೂನು ರೂಪ ಪಡೆದರೆ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.70ರಷ್ಟು ಉದ್ಯೋಗ ಕಾನೂನು ಬದ್ಧವಾಗಿ ಪಡೆಯಲು ಸಾಧ್ಯವಾಗಲಿದೆ ಎಂದರು.

ಕನ್ನಡ ಕಡ್ಡಾಯ ಸೂಚನೆ
ರಾಜ್ಯದ ಎಲ್ಲ ಬ್ಯಾಂಕ್‌ಗಳಲ್ಲಿ ಕನ್ನಡ ಬಲ್ಲವರನ್ನು ನೇಮಕ ಮಾಡುವ ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸ್ಥಳೀಯ ಸಾಮಾನ್ಯರ ಒಡನಾಟ ಹೊಂದಿರುವ ಬ್ಯಾಂಕ್‌, ಆಸ್ಪತ್ರೆ ಹಾಗೂ ಪಶು ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಭಾಷೆ ತಿಳಿದಿರುವವರ ಅಗತ್ಯವಿದೆ. ನ. 1ರೊಳಗೆ ರಾಜ್ಯದ ಎಲ್ಲ ಬ್ಯಾಂಕ್‌ಗಳಲ್ಲಿ ಕನ್ನಡ ಬಲ್ಲ ಒಬ್ಬರಾದರೂ ಇರಬೇಕು ಎಂದು ಸೂಚನೆ ನೀಡಲಾಗಿದೆ.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕನ್ನಡ ಅನುಷ್ಠಾನ ಸಮಿತಿಗಳಿದ್ದು, ಅವುಗಳ ಮೂಲಕ ಜಿಲ್ಲಾಡಳಿತ ಅಧೀನದ ಎಲ್ಲ ಇಲಾಖೆಗಳಲ್ಲೂ ಕನ್ನಡ ಕಡ್ಡಾಯ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ನೀಡುವ ಔಷಧ ಚೀಟಿಯನ್ನು ಕನ್ನಡದಲ್ಲಿ ಬರೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಮುಂದೆ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೂ ಈ ಆದೇಶವನ್ನು ವಿಸ್ತರಿಸಲಾಗುವುದು ಎಂದರು.

Advertisement

ಕೆಪಿಎಸ್‌ಸಿ ನಡೆಸಿದ ಪ್ರೊಬೆಷನರಿ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆ ತಪ್ಪಾಗಿ ಮುದ್ರಿಸಿ 1.35 ಲಕ್ಷ ಕನ್ನಡಿಗ ವಿದ್ಯಾರ್ಥಿಗಳ ಉದ್ಯೋಗಾಕಾಂಕ್ಷೆಗೆ ತಣ್ಣೀರು ಎರಚಲಾಗಿದೆ. ಈ ಬಗ್ಗೆ ಪ್ರಾಧಿಕಾರದ ನೋಟಿಸ್‌ಗೆ ಕೆಪಿಎಸ್‌ಸಿ ಉತ್ತರಿಸಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದರಿಂದ ಮರು ಪರೀಕ್ಷೆ ನಡೆಸಲು ಸೂಚಿವಂತೆ ಸರಕಾರವನ್ನು ಕೋರಲಾಗುವುದು ಎಂದರು.

ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುನೀರ್‌ ಕಾಟಿಪಳ್ಳ, ಕಾಂಗ್ರೆಸ್‌ ವಕ್ತಾರ ಎಂ.ಜಿ. ಹೆಗಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ. ನಿರ್ದೇಶಕ ರಾಜೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next