ಖಮ್ಮಂ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅವರ ರಿಮೋಟ್ ಕಂಟ್ರೋಲ್ ಪ್ರಧಾನಿ ನರೇಂದ್ರ ಮೋದಿ ಬಳಿ ಇದೆ ಎಂದು ಭಾನುವಾರ ಹೇಳಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, ‘ತೆಲಂಗಾಣ ಆಡಳಿತ ಪಕ್ಷ ಬಿಆರ್‌ಎಸ್ ಬಿಜೆಪಿ ರಿಷ್ಟೇದಾರ್ ಸಮಿತಿ ಇದ್ದಂತೆ. ಕೆಸಿಆರ್ ಅವರು ರಾಜ ಮತ್ತು ತೆಲಂಗಾಣ ಅವರ ಸಾಮ್ರಾಜ್ಯ ಎಂದು ಭಾವಿಸುತ್ತಾರೆ. ಕಾಂಗ್ರೆಸ್ ಯಾವಾಗಲೂ ಸಂಸತ್ತಿನಲ್ಲಿ ಬಿಜೆಪಿ ವಿರುದ್ಧ ನಿಂತಿದೆ, ಆದರೆ ರಾವ್ ಅವರ ಪಕ್ಷವು “ಬಿಜೆಪಿಯ ಬಿ-ಟೀಮ್” ಎಂದರು.
ರಾವ್ ಮತ್ತು ಅವರ ಪಕ್ಷದ ನಾಯಕರ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಬಿಜೆಪಿಗೆ ಅಧೀನವಾಗುವಂತೆ ಮಾಡಿದೆ ಎಂದು ಆರೋಪಿಸಿದ ಗಾಂಧಿ, ಬಿಆರ್‌ಎಸ್ ಭಾಗಿಯಾಗಿರುವ ಯಾವುದೇ ಬಣಕ್ಕೆ ಕಾಂಗ್ರೆಸ್ ಸೇರುವುದಿಲ್ಲ ಎಂದು ಇತರ ಎಲ್ಲ ಪ್ರತಿಪಕ್ಷ ನಾಯಕರಿಗೆ ಹೇಳಿದ್ದೇನೆ ಎಂದು ಪ್ರತಿಪಾದಿಸಿದರು.