ಹೈದರಾಬಾದ್ : ನಾಲ್ಕು ತಿಂಗಳೊಳಗೆ ಎರಡನೇ ಬಾರಿ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಗುರುವಾರ ಹೈದರಾಬಾದ್‌ನಲ್ಲಿ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಎಸ್‌ಬಿ) ನಲ್ಲಿ 20 ನೇ ವಾರ್ಷಿಕ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುವಾಗ ಅವರನ್ನು ಸ್ವಾಗತಿಸುವುದರಿಂದ ತಪ್ಪಿಸಿಕೊಂಡು ಟೀಕೆಗಳಿಗೆ ಗುರಿಯಾಗಿದ್ದಾರೆ.
ಫೆಬ್ರವರಿ 5 ರಂದು ಹೈದರಾಬಾದ್‌ಗೆ ಆಗಮಿಸಿದ ಮೋದಿ ಅವರನ್ನು ಕೆಸಿಆರ್ ಬರಮಾಡಿಕೊಂಡಿರಲಿಲ್ಲ ಮತ್ತು ಪ್ರಧಾನಿ ಭಾಗವಹಿಸಿದ್ದ ಎರಡು ಕಾರ್ಯಕ್ರಮಗಳಲ್ಲಿ ಸಹ ಭಾಗಿಯಾಗಿರಲಿಲ್ಲ.
ಮೋದಿ ವಿರುದ್ಧ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾವ್ ಅವರು ಬುಧವಾರ ಸಂಜೆ ಬೆಂಗಳೂರಿಗೆ ಆಗಮಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಲಿದ್ದಾರೆ.
ಇದನ್ನೂ ಓದಿ : ಕ್ವಾಡ್ ನಾಯಕರ ಹೊಗಳಿಕೆ; ಜಾಗತಿಕ ನಾಯಕ ಮೋದಿ…ಕ್ವಾಡ್ ಶೃಂಗಸಭೆಯ ಫೋಟೋ ವೈರಲ್
ಮತ್ತೊಮ್ಮೆ ಪ್ರಧಾನಿ ಭೇಟಿಯನ್ನು ತಪ್ಪಿಸಿದ ಕೆಸಿಆರ್ ವಿರುದ್ಧ ತೆಲಂಗಾಣ ಬಿಜೆಪಿ ವಾಗ್ದಾಳಿ ನಡೆಸಿದ್ದು, ಮೋದಿ ಅವರನ್ನು ಎದುರಿಸಲು ಸಾಧ್ಯವಾಗದೆ ಟಿಆರ್‌ಎಸ್ ಮುಖ್ಯಸ್ಥರು ರಾಜ್ಯದಿಂದ ಓಡಿ ಹೋಗುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಕಿಡಿ ಕಾರಿದ್ದಾರೆ.