Advertisement

ಕೆ.ಸಿ.ವ್ಯಾಲಿ ನೀರು ನೇರ ಬಳಸಿದೆರೆ ಕ್ರಮ

11:16 AM May 12, 2019 | Team Udayavani |

ಕೋಲಾರ: ಕೆ.ಸಿ.ವ್ಯಾಲಿ ಯೋಜನೆ ನೀರನ್ನು ನೇರವಾಗಿ ಉಪಯೋಗಿಸುವವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆ.ಸಿ. ವ್ಯಾಲಿ ಯೋಜನೆಗೆ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಈಗಾಗಲೇ ನರಸಾಪುರ ಭಾಗದಲ್ಲಿ ಕೆಲ ಕೆರೆಗಳಿಗೆ ನೀರು ಹರಿದಿದೆ. ಅಕ್ಕಪಕ್ಕದ ರೈತರು ನೇರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಣ್ಣ ನೀರಾವರಿ ಅಥವಾ ಗುತ್ತಿಗೆದಾರರು ಪರಿಶೀಲನೆ ನಡೆಸಿ ಕ್ರಮಕೈಗೊಂಡಿದೀರಾ ಎಂದು ಪ್ರಶ್ನಿಸಿದರು.

ಇಲ್ಲಿ ಸಾರ್ವಜನಿಕ ಹಿತಾಸಕ್ತಿಗಿಂತ ಸ್ವಹಿತಾಸಕ್ತಿಯೇ ಮುಖ್ಯ, ಜನಕ್ಕೆ ಮಾತಿನಲ್ಲಿ ಹೇಳಿದರೆ ಕೇಳ್ಳೋದಿಲ್ಲ. ರಾಜಕಾಲುವೆಯಲ್ಲೂ ಪಂಪು ಮೋಟಾರು ಇಟ್ಟು ನೀರು ಎತ್ತುವ ಕೆಲಸ ಮಾಡುತ್ತಿರುತ್ತಾರೆ. ಕೂಡಲೇ ಅದನ್ನು ಜಪ್ತಿ ಮಾಡಿಕೊಂಡು ದೂರು ದಾಖಲಿಸಿ ಎಂದು ಸೂಚಿಸಿದರು.

ನೋಟಿಸ್‌ ಕೊಟ್ಟು ಕ್ರಮಕೈಗೊಳ್ಳಿ: ಕೆ.ಸಿ. ವ್ಯಾಲಿ ನೀರು ಹರಿಯುವ ಕಾಲುವೆಗಳ ಪಕ್ಕದಲ್ಲಿ ರೈತರು ಸಣ್ಣ ಪ್ರಮಾಣದ ಕಾಲುವೆಗಳನ್ನು ತೆಗೆದುಕೊಂಡು ನೀರು ಹರಿಸಿಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳಲು ಮುಂದಾಗಬೇಕು. ತಾವು ಯಾವುದೇ ಸಂಧಾನಕ್ಕೆ ಹೋಗದೇ ನೇರವಾಗಿ ನೋಟಿಸ್‌ ಕೊಟ್ಟು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸುರಕ್ಷತಾ ಕ್ರಮವಹಿಸಿಲ್ಲ: ಕೆ.ಸಿ. ವ್ಯಾಲಿ ಯೋಜನೆ ಅನುಷ್ಠಾನಕ್ಕೆ 1300 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೆರೆಗಳಿಗೆ ನೀರು ಹರಿಸಿದರೆ ಮಾತ್ರಕ್ಕೆ ಕೆಲಸ ಮೂಗಿತು ಅಂತ ಭಾವಿಸಬಾರದು. ಹಳ್ಳಿಗಳಲ್ಲಿ ರಸ್ತೆ ಪಕ್ಕದಲ್ಲೇ ರಾಜಕಾಲುವೆ ಹರಿದು ಹೋಗಿದ್ದು, ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ಕ್ರಮವಹಿಸಿಲ್ಲ. ಇದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

Advertisement

ಎಂಜಿನಿಯರ್‌ಗಳ ತರಾಟೆ: ಯಾವುದೇ ಒಂದು ಯೋಜನೆಯನ್ನು ಅನುಷ್ಠಾನಗೊಳಿಸಬೇಕಾದರೆ ಮುಂದಾಲೋಚನೆ ಇರಬೇಕು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಳೆ ನೀರು ಹರಿಯುವಷ್ಟು ಸಾಮರ್ಥ್ಯ ಇರುವ ರಾಜಕಾಲುವೆ ಎಲ್ಲೂ ಇಲ್ಲ. ನಿಸರ್ಗದಲ್ಲಿ ಮಳೆಯೇನು ಹೇಳಿ ಬರುತ್ತದೇನು ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

ಮಾಹಿತಿ ನೀಡದ್ದಕ್ಕೆ ಆಕ್ರೋಶ: ಉದ್ದಪ್ಪನಹಳ್ಳಿ ಕೆರೆಯಿಂದ ನರಸಾಪುರ ಕೆರೆಗೆ ನೀರು ಹರಿಸುವ ರಾಜಕಾಲುವೆಯ ಅಡ್ಡಲಾಗಿ ಬೃಹತ್‌ ಕಟ್ಟಡ ನಿರ್ಮಿಸಲಾಗಿದೆ. ಅದು ಹಿಂದಿನಿಂದಲೂ ರಾಜಕಾಲುವೆ ಎಷ್ಟು ಇತ್ತು ಎಂಬುದರ ಬಗ್ಗೆ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ಕಟ್ಟಡವನ್ನು ಹೊಡೆದು ಹಾಕಲು ಸೂಚಿಸಿದ್ದೇ ಆದರೆ, ಅಧಿಕಾರಿಗಳು ಇದುವರೆಗೂ ಮಾಹಿತಿ ನೀಡಿಲ್ಲ ಯಾಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರವಾಹದಂತಹ ಮಳೆಗಳು ಬಂದಾಗ ಕೆ.ಸಿ.ವ್ಯಾಲಿ ಯೋಜನೆಯಿಂದ ಯಾವುದೇ ಪ್ರಾಣಹಾನಿಗಳು ಆಗದಂತೆ ಎಚ್ಚರಿಕೆಯಿಂದ ಈ ಯೋಚನೆ ರೂಪಿಸಬೇಕು. ನರಸಾಪುರ ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆರೆಯ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಬೇಕು. ಇದಕ್ಕೆ ಸಣ್ಣ ನೀರಾವರಿ ಇಲಾಖೆ ಎಂಜನಿಯರ್‌ಗಳು ಗುತ್ತಿಗೆದಾರರಿಂದ ಮಾಡಿಸಬೇಕು ಎಂದು ಹೇಳಿದರು.

252 ಎಂಎಲ್ಡಿ ನೀರು: ಯೋಜನೆಯಿಂದ ದಿನಕ್ಕೆ 252 ಎಂಎಲ್ಡಿ ನೀರು ಹರಿಯುತ್ತಿದೆ. ಅದರಲ್ಲಿ ಯಾವುದೇ ಅನುಮಾನಬೇಡ. ಮುಂದೆ ಆಗುವ ಅನಾಹುತಗಳು ಸಂಭವಿಸದಂತೆ ಎಚ್ಚರವಹಿಸಬೇಕು. ನೀರು ತುಂಬಿರುವ ಕೆರೆಗಳಲ್ಲಿ ಮೀನುಗಾರಿಕೆ ಉದ್ಯಮವಾಗಿ ನಡೆಯುತ್ತಿದೆ. ಇದಕ್ಕೆಲ್ಲ ಅನುಮತಿ ನೀಡಿದವರು ಯಾರು?. ಆಯಾ ವ್ಯಾಪ್ತಿಯ ಪಂಚಾಯ್ತಿ ಅಧಿಕಾರಿಗಳು ಮೀನುಗಾರಿಕೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಒತ್ತುವರಿ: ತಾಲೂಕಿನಲ್ಲಿ ರಾಜ ಕಾಲುವೆಗಳು ಹಿಂದೆ ಎಷ್ಟು ಅಗಲ ಇತ್ತು, ಈಗ ಎಷ್ಟಿವೆ ಎಂಬುದರ ಬಗ್ಗೆ ಕಂದಾಯ, ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಎರಡು ದಿನದಲ್ಲಿ ಮಾಹತಿ ನೀಡಬೇಕು.

ಬೆಟ್ಟಗಳಿಂದ ಕೆರೆಗಳಿಗೆ ಸಂಪರ್ಕವಿರುವ ಕಾಲುವೆಗಳು ಸಂಪೂರ್ಣವಾಗಿ ಒತ್ತುವರಿಯಾಗಿದ್ದು, ಮುಂದೆ ಮಳೆಗಾಲದಲ್ಲಿ ಅಹಾನುತ ಸಂಭವಿಸಿದರೆ ಪರಿಹಾರಕ್ಕೆ ಅಂಗಲಾಚುತ್ತಾರೆ. ಇಲ್ಲಿ ಒತ್ತುವರಿದಾರರಿಗೆ ಮುಂದಾಲೋಚನೆಯೇ ಇಲ್ಲದಂತಾಗಿದೆ ಎಂದು ವಿಷಾದಿಸಿದರು.

ಭೇಟಿ ಮಾಡಲು ಹೇಳಿ: ಸಣ್ಣ ನೀರಾವರಿ ಇಲಾಖೆಯ ಎಇಇ ಕೇಂದ್ರ ಸ್ಥಾನದಲ್ಲಿ ಲಭ್ಯ ಇರುವುದಿಲ್ಲ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಮಿನಿಷ್ಟರ್‌ ಸಭೆಗಳಿಗೂ ಬರುವುದಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗುವುದಿಲ್ಲ.

ಇಲಾಖೆ ಪ್ರಗತಿ ನೋಡಿದರೆ ಏನು ಇರುವುದಿಲ್ಲ. ಮಳೆಗಾಲದಲ್ಲೂ ಅವರು ಬೆಂಗಳೂರಿನಲ್ಲಿ ಯಾವ ಕೆರೆ ಅಭಿವೃದ್ಧಿಪಡಿಸಲು ಹೋಗುತ್ತಾರೆ. ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾರ್ಯಕ್ರಮಗಳು ಇಲ್ಲವೇನು. ಎಇಇ ಕೋಲಾರಿಗೆ ಬಂದಾಗ ನನ್ನನ್ನು ಭೇಟಿ ಮಾಡಕ್ಕೇಳಿ ಎಂದು ಸಣ್ಣ ನೀರಾವರಿ ಇಲಾಖೆ ಕಿರಿಯ ಎಂಜನಿಯರ್‌ಗೆ ಮಂಜುನಾಥ್‌ ಸೂಚಿಸಿದರು.

ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ತಾಕೀತು:

ಕೋಲಾರ: ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಸಮರ್ಪಕ ತೆರಿಗೆ ವಸೂಲಿ ಮಾಡಿದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ಅಧಿಕಾರಿಗಳು ಯಾವುದೇ ಮುಲಾಜಿಗೆ ಒಳಗಾಗದೆ ತೆರಿಗೆ ವಸೂಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಗಂಣದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತೆರಿಗೆ ವಸೂಲಿ ಮಾಡದೆ ಆದಾಯ ಬರಬೇಕು ಎಂದರೆ ಅಗುವುದಿಲ್ಲ. ಬೇಡಿಕೆ ಇರುವಷ್ಟು ತೆರಿಗೆ ವಸೂಲಿ ಮಾಡಬೇಕು. ಪ್ರತಿ ತಿಂಗಳು ಖರ್ಚು, ವೆಚ್ಚಗಳ ಕುರಿತು ಸಭೆ ನಡೆಸಬೇಕು ಎಂದು ತಿಳಿಸಿದರು. ಮೂಲಾಜಿಲ್ಲದೆ ವಸೂಲಿ ಮಾಡಿ: ಪ್ರತಿ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಕಾಲೇಜು, ವಿಶ್ವವಿದ್ಯಾಲಯ, ವಾಣಿಜ್ಯ ಮಳಿಗೆ, ಆಸ್ಪತ್ರೆಗಳು ಇವೆ. ಮೇ 5ರೊಳಗೆ ತೆರಿಗೆ ಪಾವತಿ ಮಾಡಿಲ್ಲವೆಂದರೆ ಕೂಡಲೇ ನೋಟಿಸ್‌ ಕೊಟ್ಟು ವಸೂಲಿ ಮಾಡಬೇಕು. ಯಾರ ಒತ್ತಡ, ಮುಲಾಜಿಗೂ ಒಳಗಾಗಬೇಕಾದ ಅವಶ್ಯಕವಿಲ್ಲ. ಇಲ್ಲಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ವೇತನ ಪಾವತಿಯಾಗಬೇಕಾದರೆ ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ವಸೂಲಿಯಾಗಿಲ್ಲ:
ಯಾರು ಶೇ.50 ಸಹ ತೆರಿಗೆ ವಸೂಲಿ ಮಾಡಿಲ್ಲ. ಕೇಳಿದರೆ ಸಮಸ್ಯೆಗಳ ಸುರಿಮಳೆ ಸುರಿಸುತೀರಾ. ತಮ್ಮ ಕಾರ್ಯ ವ್ಯಾಪಿ ಕೆಲಸ ಮಾಡಿದರೆ ಸಮಸ್ಯೆಗಳು ಎದುರಾಗುವುದಿಲ್ಲ. ಯಾರೋ ಒತ್ತಡಕ್ಕೆ ಮಣಿದು ಕೆಲಸ ಮಾಡಿದರೆ ಏನು ಪ್ರಯೋಜನೆ ಎಂದು ಪ್ರಶ್ನಿಸಿದರು. ಕೋಲಾರ ನಗರಸಭೆಯಲ್ಲಿ 4.50 ಲಕ್ಷ ಬೇಡಿಕೆಯಿದ್ದು, ವಾಣಿಜ್ಯ ತೆರಿಗೆ ಶೇ.74, ನೀರಿನ ತೆರಿಗೆ ಶೇ.16 ಹಾಗೂ ಜಾಹಿರಾತು ತೆರಿಗೆ ಶೇ.33 ವಸೂಲಿಯಾಗಿದೆ ಎಂದು ಪೌರಾಯುಕ್ತ ಸತ್ಯನಾರಾಯಣ್‌ ಮಾಹಿತಿ ನೀಡಿದರು. ನೀವು ಮಾಡುತ್ತಿರುವ ಕೆಲಸ ಸಮಾಧಾನ ತಂದಿಲ್ಲ. ನಗರದಲ್ಲಿ ಬಹು ಮಹಡಿ ಕಟ್ಟಡಗಳು ತಲೆ ಎತ್ತಿವೆ. ಇದನ್ನೆಲ್ಲ ಹೇಗೆ ಪರಿಶೀಲಿಸಿ ಅನುಮತಿ ನೀಡಿದೀರಾ. ಎಲ್ಲಿ ಯಾರು ಹೇಳೊರು, ಕೇಳೊರು ಇಲ್ಲವೇನು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕಿಡಿಕಾರಿದರು. ಪ್ರತಿ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಎಷ್ಟು ಕೊಳವೆಬಾವಿಗಳು ಕಾರ್ಯನಿರ್ವಹಿಸುತ್ತಿವೆ, ಎಷ್ಟು ಬತ್ತಿ ಹೋಗಿವೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಒಂದು ವಾರದೊಳಗೆ ಖರ್ಚು ವೆಚ್ಚಗಳ ಸಭೆ ನಡೆಸಬೇಕು ಎಂದು ಸೂಚಿಸಿರು. ಯಾರು ತೆರಿಗೆ ಪಾವತಿ ಮಾಡುವುದಿಲ್ಲವೋ ಅವರಿಗೆ ಯುಜಿಡಿ, ನೀರಿನ ಸಂಪರ್ಕ ಕತ್ತರಿಸಬೇಕು. ಅವರು ಕಾನೂನು ಉಲ್ಲಂಘನೆ ಮಾಡಿದರೆ ಮುಲಾಜಿಲ್ಲದೆ ದೂರು ದಾಖಲಿಸಿ. ಟ್ಯಾಂಕರ್‌ ಮೂಲಕ ನೀರು ಸೋರಿಕೆಯಾಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು. ಯೋಜನಾ ನಿರ್ದೇಶಕ ರಂಗಸ್ವಾಮಿ, ಕೆಜಿಎಫ್‌ ನಗರಸಭೆ ಪೌರಾಯುಕ್ತ ಶ್ರೀಕಾಂತ್‌ ಹಾಜರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next