Advertisement
ಸೋಮವಾರವಷ್ಟೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದ ಕೆಸಿಆರ್, ಪ್ರತ್ಯೇಕ ರಂಗದ ಬಗ್ಗೆ ಚರ್ಚೆ ನಡೆಸಿದ್ದರು. ಅಲ್ಲದೆ ಮೇ 13ರಂದು ತಮಿಳುನಾಡಿನ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಯಾಗುವು ದಾಗಿ ಹೇಳಿದ್ದರು. ಆದರೆ ಸದ್ಯಕ್ಕೆ ಕೆಸಿಆರ್ ಅವರನ್ನು ಭೇಟಿ ಯಾಗಲು ಕಾಲಾವಕಾಶ ಇಲ್ಲ, ಪ್ರಚಾರದ ಒತ್ತಡ ದಲ್ಲಿದ್ದೇನೆ ಎಂದು ಸ್ಟಾಲಿನ್ ಹೇಳಿದ್ದಾರೆ. ಈ ಮೂಲಕ ಮೊದಲು ಭೇಟಿ ಯಾಗುವುದಾಗಿ ಹೇಳಿ, ಈಗ ಯೂಟರ್ನ್ ಹೊಡೆದಿದ್ದಾರೆ.
ಸದ್ಯ ತಮಿಳುನಾಡಿನಲ್ಲಿ ಡಿಎಂಕೆ, ಕಾಂಗ್ರೆಸ್ ಜತೆ ಹೊಂದಾ ಣಿಕೆ ಮಾಡಿಕೊಂಡಿದೆ. ಈಗಾಗಲೇ ಹಲವಾರು ಬಾರಿ ಸ್ಟಾಲಿನ್ ಅವರು ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಮೂಲಕ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನಿಂದ ಬೇರೆಯಾಗುವುದಿಲ್ಲ ಎಂಬ ಸಂದೇಶವನ್ನೂ ರವಾನಿಸಿದ್ದಾರೆ. ಈಗ ಕೆಸಿಆರ್ ಅವರನ್ನು ಭೇಟಿಯಾದರೆ, ಮಹಾಘಟಬಂಧನ್‌ನಲ್ಲಿ ಒಡಕುಂಟಾಗ ಬಹುದು ಎಂಬ ಕಾರಣಕ್ಕೆ ಯೂಟರ್ನ್ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ.