Advertisement

ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಿ ಸಿಎಂ

03:53 PM Dec 24, 2018 | |

ಆಲಮಟ್ಟಿ: ಬೆಂಗಳೂರಿನಲ್ಲಿರುವ ಕೃಷ್ಣಾಭಾಗ್ಯಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನ್ನು ಆಡಳಿತ ಕಚೇರಿ ಹೊಂದಿರುವ ಆಲಮಟ್ಟಿಗೆ ಸ್ಥಳಾಂತರಿಸಿ ಕಾಲಮಿತಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ನಾಗರಿಕರು ಒತ್ತಾಯಿಸಿದ್ದಾರೆ.

Advertisement

ಕೃಷ್ಣಾ ಮೇಲ್ದಂಡೆ ಯೋಜನೆಯ ಕೇಂದ್ರ ಸ್ಥಾನವಾಗಿರುವ ಆಲಮಟ್ಟಿಯಲ್ಲಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ನಿರ್ಮಿಸಲಾಗಿದೆ. ಅಲ್ಲದೇ ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸರ್ಕಾರ 1994ರಲ್ಲಿ ಆಲಮಟ್ಟಿಯಲ್ಲಿ ಕೃಷ್ಣಾಭಾಗ್ಯಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನ್ನು ಆ. 19ರಂದು ಆರಂಭಿಸಿ ಪ್ರಥಮ ವ್ಯವಸ್ಥಾಪಕ ನಿರ್ದೇಶಕರಾಗಿ ಕ್ಯಾಪ್ಟನ್‌ ಎಸ್‌.ರಾಜಾರಾವ್‌ ಅವರನ್ನು 1994, ಸೆಪ್ಟೆಂಬರ್‌ 3ರಂದು ನಿಯುಕ್ತಿಗೊಳಿಸಿತು.

ವ್ಯವಸ್ಥಾಪಕ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಆಲಮಟ್ಟಿ ವಲಯ, ಭೀಮರಾಯನಗುಡಿ ವಲಯ, ರಾಂಪುರ ವಲಯ, ನಾರಾಯಣಪುರ ವಲಯಗಳಾಗಿ ಒಟ್ಟು 4 ವಲಯಗಳಿದ್ದು ನಾಲ್ಕೂ ವಲಯಗಳಿಗೆ ಮುಖ್ಯ ಅಭಿಯಂತರುಗಳ ಕಚೇರಿ ಹಾಗೂ ಅವುಗಳ ಕೆಳ ಹಂತದಲ್ಲಿ ಅಧೀಕ್ಷಕ ಅಭಿಯಂತರು, ಕಾರ್ಯ ನಿರ್ವಾಹಕ ಅಭಿಯಂತರು, ಸಹಾಯಕ ಕಾರ್ಯ ಪಾಲಕ ಅಭಿಯಂತರುಗಳು ಸೇರಿದಂತೆ ಹಲವಾರು ಕಚೇರಿಗಳು ಬರುತ್ತವೆ.

ಆಡಳಿತ ಕಚೇರಿ ಆಲಮಟ್ಟಿಯಾಗಿದ್ದರೂ ಕೂಡ 1996ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯುಕ್ತರಾದ ಎಂ.ಬಿ. ಪ್ರಕಾಶ ಭಾ.ಆ.ಸೇ. ಅವರು ಕೃಷ್ಣಾಭಾಗ್ಯಜಲ ನಿಗಮದ ಬಾಂಡ್‌ಗಳ ನೆಪದಲ್ಲಿ ಆಲಮಟ್ಟಿಯಲ್ಲಿದ್ದ ಕಚೇರಿಯನ್ನು ಬೆಂಗಳೂರಿಗೆ ವರ್ಗಾಯಿಸಿಕೊಂಡರು. ಕೆಲ ದಿನಗಳ ನಂತರ ಆಲಮಟ್ಟಿಯಲ್ಲಿದ್ದ ಕೃಷ್ಣಾಭಾಗ್ಯಜಲನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಬರುವ ಹಣಕಾಸು ವಿಭಾಗ, ಆಡಳಿತ ವಿಭಾಗ ಹಾಗೂ ತಾಂತ್ರಿಕ ವಿಭಾಗಗಳು ಸೇರಿದಂತೆ ಎಲ್ಲ ವಿಭಾಗಗಳು ಬೆಂಗಳೂರಿಗೆ ಸ್ಥಳಾಂತರಗೊಂಡವು.

ಯೋಜನೆ ನನೆಗುದಿಗೆ: ಆಲಮಟ್ಟಿಯಲ್ಲಿದ್ದ ಆಡಳಿತ ಕಚೇರಿ ಬೆಂಗಳೂರಿಗೆ ಸ್ಥಳಾಂತರಗೊಂಡ ನಂತರ ಪುನರ್ವಸತಿ ಹಾಗೂ ಪುನರ್‌ ನಿರ್ಮಾಣ, ಭೂಸ್ವಾ ಧೀನ, ಕಾಲುವೆ ನಿರ್ಮಾಣ ಸೇರಿದಂತೆ ಎಲ್ಲ ಕಾಮಗಾರಿಗಳಿಗೆ ಮಂಕು ಕವಿದಂತಾಯಿತು. ಇದರಿಂದ ಕೋಟ್ಯಂತರ ರೂ. ವ್ಯಯ ಮಾಡಿ ಆಡಳಿತ ಕಚೇರಿ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ವಿಭಾಗಗಳು ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಕಟ್ಟಡವನ್ನು ನಿರ್ಮಿಸಿ ಕಚೇರಿಯಲ್ಲಿ ಅ ಧಿಕಾರಿಗಳು, ಸಿಬ್ಬಂದಿಗಳು ಕಾರ್ಯತತ್ಪರರಾದರು. ಆದರೆ ಕೆಲವೇ ದಿನಗಳಲ್ಲಿ ಎಲ್ಲ ವಿಭಾಗಗಳು ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರಿಂದ ಕೇವಲ ವಿವಿಧ ವಲಯ ಹಾಗೂ ವಿಭಾಗಗಳಿಂದ ಬರುವ ಕಾಗದಗಳನ್ನು ಬೆಂಗಳೂರಿಗೆ ಕಳಿಸುವುದು ಹಾಗೂ ಅಲ್ಲಿಂದ ಮರಳಿ ಬಂದ ಪತ್ರಗಳನ್ನು ಸಂಬಂಧಿಸಿದವರಿಗೆ ತಲುಪಿಸುವ ಕೆಲಸವಾಗಿದೆ. ಕೃಷ್ಣಾಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ವಿವಿಧ ವಲಯಗಳು ಸೇರಿ 4 ಸಾವಿರಕ್ಕಿಂತಲೂ ಅಧಿಕ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

ಅನಗತ್ಯ ವೆಚ್ಚ: ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಎಲ್ಲ ವಲಯ ಕಚೇರಿಗಳು ಆಲಮಟ್ಟಿಯಿಂದ ಸುಮಾರು 150 ಕಿ.ಮೀ. ದೂರದಲ್ಲಿವೆ. ಆದರೆ ಬೆಂಗಳೂರು ಅಲ್ಲಿಂದ 400ರಿಂದ 500 ಕಿ.ಮೀ. ದೂರವಾಗುತ್ತದೆ.

ಇದರಿಂದ ಉಳಿದ ಅಧಿಕಾರಿ ವರ್ಗದವರಿಗೆ ಹೋಗಿ ಬರಲು ಅನಗತ್ಯ ಸಮಯ ಹಾಗೂ ಸರ್ಕಾರಕ್ಕೆ ದುಂದು ವೆಚ್ಚವಾಗುತ್ತದೆ. ಇವುಗಳಿಗೆ ವಿರಾಮ ಹಾಡಬೇಕಾದರೆ ಆಲಮಟ್ಟಿಯಲ್ಲಿಯೇ ಕೆಬಿಜೆಎನ್ನೆಲ್‌ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಆರಂಭಿಸಬೇಕು ಎಂದು ನಾಗರಿಕರು ಒತ್ತಾಯಿಸುತ್ತ ಬಂದಿದ್ದು ಇನ್ನಾದರೂ ಕಚೇರಿ ಆರಂಭಿಸುವರೇ ಕಾದು ನೋಡಬೇಕು.

„ಶಂಕರ ಜಲ್ಲಿ 

Advertisement

Udayavani is now on Telegram. Click here to join our channel and stay updated with the latest news.

Next