ಶನಿವಾರಸಂತೆ: ಸೋಮವಾರಪೇಟೆ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಶನಿವಾರಸಂತೆಯ ಕೆ.ಬಿ.ಹಾಲಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರ 3 ಸ್ಥಾನಗಳಗಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ತೊರೆನೂರಿನ ಎಚ್.ಬಿ.ಚಂದ್ರಪ್ಪ, ಗೆಜ್ಜೆ ಹಣಕೋಡು ಗ್ರಾಮದ ಡಿ.ಜೆ.ರಶ್ಮಿ, ಬಡಬನಹಳ್ಳಿ ಗ್ರಾಮದ ಸರಳಾಕ್ಷಿ ಬಸಪ್ಪ ಅವರನು ಗಿ ಆಯ್ಕೆ ಮಾಡಲಾಯಿತು. ಕಪ್ರಧಾನ ಕಾರ್ಯದರ್ಶಿಯಾಗಿ ಶನಿವಾರಸಂತೆಯ ಸಿ.ಎಂ.ಪುಟ್ಟಸ್ವಾಮಿ ಉಳಿದಂತೆ ಮೂರು ಕಾರ್ಯದರ್ಶಿಗಳ ಸ್ಥಾನಗಳ ಪೈಕಿ ಕುಶಾಲನಗರದ ಸೌಭಾಗ್ಯ, ಆಡಿನಾಡೂರಿನ ವಿರೂಪಾಕ್ಷ ಹಾಗೂ ಹಂಡ್ಲಿ ಗ್ರಾಮದ ವೀರೇಂದ್ರ ಕುಮಾರ್ ಅವರುಗಳನ್ನುಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಖಜಾಂಜಿಯಾಗಿ ಕೊಡ್ಲಿಪೇಟೆಯ ಸಿ.ವಿ.ಶಂಭುಲಿಂಗಪ್ಪ ಆಯ್ಕೆ ಯಾದರು.
ಸದಸ್ಯರಾಗಿ ಸೋಮವಾರಪೇಟೆಯ ಜೆ.ಸಿ.ಶೇಖರ್, ಗೆಜ್ಜೆ ಹಣಕೋಡಿನ ಜಯರಾಜ್, ಶನಿವಾರಸಂತೆಯ ಆಶಾ ಪುಟ್ಟಸ್ವಾಮಿ, ಕೊಡ್ಲಿಪೇಟೆಯ ಜ್ಞಾನೇಶ್ವರಿ ನಾಗೇಶ್, ನೀರುಗುಂದ ಗ್ರಾಮದ ವೀಣಾ ಹೇಮಚಂದ್ರ, ತೊರೆನೂರು ಗ್ರಾಮದ ಪೂರ್ಣಿಮಾ, ನೀರುಗುಂದ ಗ್ರಾಮದ ಜಯಂತಿ ಹರೀಶ್, ಕುಶಾಲನಗರದ ಮಹಾದೇವಪ್ಪ, ಹೆಬ್ಬುಲ್ಸೆ ಗ್ರಾಮದ ಎಚ್.ಎನ್.ಸಂದೀಪ್, ಮುಳ್ಳೂರು ಗ್ರಾಮದ ಎಂ.ಜೆ.ಮನೋಜ್‌ಕುಮಾರ್, ಗೋಪಾಲಪುರ ಗ್ರಾಮದ ಜಿ.ಜೆ.ಪರಮೇಶ್, ಅಂಕನಹಳ್ಳಿಯ ಮಂಜುನಾಥ್, ಸಂಪಿಗೆದಾಳಿನ ಎಸ್.ಸಿ.ಲಿಂಗರಾಜ್, ಬೆಸ್ಸೂರು ಗ್ರಾಮದ ಬಿ.ಎಸ್.ವಸಂತ್‌ಕುಮಾರ್ ಆಯ್ಕೆಯಾದರು.
ಕಲ್ಲುಮಠದ ಶ್ರೀ ಮಹಂತಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ, ವೀರಶೈವ ಮಹಾ ಸಭಾದ ರಾಜ್ಯ ಸಮಿತಿ ಸದಸ್ಯೆ ರಾಜೇಶ್ವರಿ ನಾಗರಾಜ್, ಜಿಲ್ಲಾ ಮಹಾ ಸಭಾದ ನಿಕಟ ಪೂರ್ವ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಜಿ.ಎಂ.ಕಾಂತರಾಜ್, ಘಟಕದ ಮಾಜಿ ಕಾರ್ಯದರ್ಶಿ ಡಿ.ಬಿ.ಸೋಮಪ್ಪ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್ ಮೊದಲಾದವರು Êಉಪಸ್ಥಿತರಿದ್ದರು.